ಅ.26 : ಕೊಕ್ಕಡದಲ್ಲಿ ಎಂಡೋ ಸಂತ್ರಸ್ತರ ಪೋಷಕರ ಸಮಾವೇಶ

October 22, 2019
7:35 PM
ಪುತ್ತೂರು:  ರಾಜ್ಯದ ಎಂಡೋ ಸಂತ್ರಸ್ತರ ಎಲ್ಲಾ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಅ.26 ಶನಿವಾರ ಬೆಳಗ್ಗೆ 10.00 ರಿಂದ ಕೊಕ್ಕಡ ಸೌತಡ್ಕ ರಸ್ತೆಗೆ ಹೊಂದಿಕೊಂಡಿರುವ ಕಾವು ತ್ರಿಗುಣಾತ್ಮಿಕ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾ ಭವನದಲ್ಲಿ ಎಂಡೊ ಸಂತ್ರಸ್ತರ ಪೋಷಕರ ಸಮಾವೇಶ ನಡೆಯಲಿದ್ದು, ಸಭೆಯಲ್ಲಿ ಮಾಹಿತಿ ಕಾರ್ಯಾಗಾರ ಮತ್ತು ಎಂಡೊ ಸಂತ್ರಸ್ತರ ಹಕ್ಕೊತ್ತಾಯ ಸಭೆಯು ಜರಗಲಿದೆಎಂದು ಎಂಡೋ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಶ್ರೀಧರ  ಶ್ರೀಧರ ಗೌಡ ಕೆಂಗುಡೇಲು ತಿಳಿಸಿದ್ದಾರೆ.

Advertisement
Advertisement
Advertisement
Advertisement
ಸಭೆಯಲ್ಲಿ ಎಂಡೊ ಸಂತ್ರಸ್ತರಿಗೆ ಸೂಕ್ತ ಮಾಹಿತಿಗಳನ್ನು ಉಡುಪಿ ಮಾನವ ಹಕ್ಕುಗಳ ಹಿತ ರಕ್ಷಣಾ ಪ್ರತಿಷ್ಠಾನದ ಸಂಚಾಲಕರಾದ ಡಾ. ರವೀಂದ್ರನಾಥ್ ಶಾನ್‍ಭಾಗ್ ಮಾಹಿತಿ ನೀಡಲಾಗಿದ್ದು, ಸಭಾಧ್ಯಕ್ಷತೆಯನ್ನು ಪುತ್ತೂರು ಬಳಕೆದಾರರ ವೇದಿಕೆಯ ಸಂಚಾಲಕರಾಗಿರುವ ಡಾ ನಿತ್ಯಾನಂದ ಪೈ, ಅಧ್ಯಕ್ಷತೆ ವಹಿಸಲಿದ್ದು, ಮಾಹಿತಿ ಹಕ್ಕು ಹೋರಾಟಗಾರ ಸಂಜೀವ ಕಬಕ ಉಪಸ್ಥಿತರಿರುತ್ತಾರೆ ಎಂದು ಎಂಡೋ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಶ್ರೀಧರ  ಶ್ರೀಧರ ಗೌಡ ಕೆಂಗುಡೇಲು ತಿಳಿಸಿದ್ದಾರೆ.

ಹಕ್ಕೊತ್ತಾಯ ಸಭೆಯಲ್ಲಿ ಬೆಳ್ತಂಗಡಿ ಶಾಸಕ  ಹರೀಶ್ ಪೂಂಜ, ಸುಳ್ಯ ಶಾಸಕ   ಅಂಗಾರ ಎಸ್. ಪುತ್ತೂರು ಶಾಸಕ ಸಂಜೀವ ಮಠಂದೂರು, ಬಂಟ್ವಾಳ ಶಾಸಕ ರಾಜೇಶ್ ನಾಯಕ್, ಮತ್ತು ಉಜಿರೆಯ ದಂತ ವೈದ್ಯರಾಗಿರುವ ಡಾ, ಎಂ.ಎಂ ದಯಾಕರ್ ಭಾಗವಹಿಸಲಿದ್ದು, ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತ್ರಿಗುಣಾತ್ಮಿಕ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಟ್ರಸ್ಟ್ ನ ಅಧ್ಯಕ್ಷರಾಗಿರುವ ಕುಶಾಲಪ್ಪ ಗೌಡ ಪೂವಾಜೆರವರು ವಹಿಸಲಿದ್ದಾರೆ. ಈ ಸಭೆಯಲ್ಲಿ ಎಂಡೋ ಸಂತ್ರಸ್ತರು ತಮ್ಮ ಬೇಡಿಕೆಗಳನ್ನು ಜನಪ್ರತಿನಿಧಿಗಳಲ್ಲಿ ಬಲವಾಗಿ ಹಕ್ಕೊತ್ತಾಯ ಮಾಡಲಿದ್ದಾರೆ.

Advertisement
ಈ ಸಮಾವೇಶಕ್ಕೆ ಆಗಮಿಸಲು ನಮ್ಮ  ಸಮಿತಿಯಲ್ಲಿರುವ ವಿಳಾಸಕ್ಕೆ ಈಗಾಗಲೇ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಮತ್ತು ಪೀಡಿತರ ಪೋಷಕರು ಹೋರಾಟಕ್ಕೆ ಅನಿವಾರ್ಯವಾದ ಅಂಶಗಳನ್ನು ಭರ್ತಿಮಾಡಿಕೊಂಡು ಬರಲು ನಮೂನೆಗಳನ್ನು ಅಂಚೆ ಮೂಲಕ ಕಳುಹಿಸಲಾಗಿದೆ. ಆಗಮಿಸುವ ಎಲ್ಲಾ ಎಂಡೋ ಪೋಷಕರಿಗೆ ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಎಲ್ಲಾ ಎಂಡೋ ಸಂತ್ರಸ್ತರನ್ನು ಸಂಪರ್ಕಿಸಲು ಕಷ್ಟಸಾಧ್ಯವಾಗಿರುವುದರಿಂದ ಎಲ್ಲಾ ಎಂಡೋ ಸಂತ್ರಸ್ತರಿಗೆ ಈ ಮಾಹಿತಿಯನ್ನು ತಲುಪಿಸಿ ಅವರು ವಾಟ್ಸಾಪ್ ದೂರವಾಣಿ ಸಂಖ್ಯೆ, ಅವರಲ್ಲಿ ಇಲ್ಲದಿದ್ದಲ್ಲಿ ಅವರ ಹತ್ತಿರದ ಬಂಧುಗಳ ವಾಟ್ಸಾಪ್ ದೂರವಾಣಿ ಸಂಖ್ಯೆಗಳನ್ನು ನೀಡಲು ಕೋರಲಾಗಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕೇಂದ್ರ ಸರ್ಕಾರದ  ಬಜೆಟ್ ಮೇಲೆ ರೈತಾಪಿ ವರ್ಗ  ಬಹಳ ನಿರೀಕ್ಷೆ | ಕುರುಬೂರು ಶಾಂತಕುಮಾರ್
January 27, 2025
8:41 PM
by: The Rural Mirror ಸುದ್ದಿಜಾಲ
‌ಸಾರಡ್ಕ ಕೃಷಿ ಹಬ್ಬ | “ನಾ ಕಂಡಂತೆ ಸಾರಡ್ಕ ಕೃಷಿ ಹಬ್ಬ 2025” ಕೃಷಿಕ ಎ ಪಿ ಸದಾಶಿವ ಅವರ ಅಭಿಪ್ರಾಯ |
January 27, 2025
11:12 AM
by: ಎ ಪಿ ಸದಾಶಿವ ಮರಿಕೆ
ಚಾರ್ಮಾಡಿ ಘಾಟ್ ಅರಣ್ಯ ಪ್ರದೇಶದಲ್ಲಿ ಭಾರೀ ಕಾಡ್ಗಿಚ್ಚು | ನೂರಾರು ಎಕರೆ ಅರಣ್ಯ ನಾಶ | ಬೆಂಕಿ ನಂದಿಸಲು ಅರಣ್ಯ ಇಲಾಖೆ ಪ್ರಯತ್ನ |
January 26, 2025
7:35 AM
by: The Rural Mirror ಸುದ್ದಿಜಾಲ
ವಿದೇಶದಿಂದ ಅಡಿಕೆ ಕಳ್ಳಸಾಗಾಣಿಕೆ ಪ್ರಕರಣ | ಡಿಎಂಕೆ ಕೌನ್ಸಿಲರ್ ವಶಕ್ಕೆ ಪಡೆದ ಡಿಆರ್‌ಐ
January 26, 2025
7:14 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror