ಸವಣೂರು : ದ.ಕ.ಜಿ.ಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಂಗಳೂರು, ಗ್ರಾಮ ಪಂಚಾಯತ್ ಸವಣೂರು ಇವುಗಳ ಸಹಕಾರದೊಂದಿಗೆ ಅಭ್ಯುದಯ ಯುವಕ ಮಂಡಲ ಚೆನ್ನಾವರ, ಗ್ರಾಮ ವಿಕಾಸ ಸಮಿತಿ ಪಾಲ್ತಾಡಿ ಇದರ ಆಶ್ರಯದಲ್ಲಿ ದೀಪಾವಳಿ ಗ್ರಾಮೀಣ ಕ್ರೀಡೋತ್ಸವ ಅ.27ರಂದು ಚೆನ್ನಾವರ ಪ್ರಾಥಮಿಕ ಶಾಲಾ ಕ್ರೀಡಾಂಗಣದಲ್ಲಿ ನಡೆಯಲಿದೆ.
ಕ್ರೀಡಾಕೂಟದಲ್ಲಿ ಪುರುಷರ ವಿಭಾಗದಲ್ಲಿ ವಾಲಿಬಾಲ್ ಪಂದ್ಯಾಟದಲ್ಲಿ ಪ್ರಥಮ ಬಹುಮಾನ 3000 ನಗದು, ದ್ವಿತೀಯ ಬಹುಮಾನ 2000 ನಗದು ಹಾಗೂ ಶಾಶ್ವತ ಫಲಕ, ಸೆಮಿ ಫೈನಲ್ ಪ್ರವೇಶಿಸಿದ ತಂಡಕ್ಕೆ ಶಾಶ್ವತ ಫಲಕ ನೀಡಲಾಗುವುದು. ಉಳಿದಂತೆ ಲಗೋರಿ ಪಂದ್ಯಾಟ, ಲಕ್ಕಿ ಗೇಮ್, ಗುಡ್ಡಗಾಡು ಓಟ, 100 ಮೀ, 200 ಮೀ ಓಟದ ಸ್ಪರ್ಧೆ ನಡೆಸಲಾಗುವುದು.
ಮಹಿಳೆಯರ ವಿಭಾಗದಲ್ಲಿ ತ್ರೋಬಾಲ್ ಪಂದ್ಯಾಟ ಪ್ರಥಮ ಬಹುಮಾನ 1111, ದ್ವಿತೀಯ ಬಹುಮಾನ 777 ಹಾಗೂ ಶಾಶ್ವತ ಫಲಕ, ಉಳಿದಂತೆ ಲಕ್ಕಿ ಗೇಮ್, 200 ಮೀ, ಲಿಂಬೆ ಚಮಚ ಓಟ ,ಹಗ್ಗ ಜಗ್ಗಾಟ ಮತ್ತು ಶಾಲಾ ಮಕ್ಕಳಿಗೆ ವಿವಿಧ ಸ್ಪರ್ಧೆಗಳು ನಡೆಯಲಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel