ಪುತ್ತೂರು: ಅಂಗನವಾಡಿಗಳ ಬಲವರ್ದನೆ ಹಾಗೂ ಅಂಗನವಾಡಿಗಳನ್ನು ಪೂರ್ವ ಶಿಕ್ಷಣ ಕೇಂದ್ರವನ್ನಾಗಿ ಮಾಡಬೇಕೆಂದು ದ ಕ.ಜಿಲ್ಲಾ ಅಂಗನವಾಡಿ ನೌಕರರ ಸಂಘಟನೆಯ ಮುಖಂಡರಾದ ನ್ಯಾಯವಾದಿ ಬಿ.ಎಂ.ಭಟ್ ಒತ್ತಾಯಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿದ ಅವರು ಅಂಗನವಾಡಿಗಳಲ್ಲಿ ಸರಕಾರವೇ ಎಲ್.ಕೆ.ಜಿ, ಯುಕೆಜಿ ಸ್ಥಾಪಿಸುವುದರಿಂದ ಪ್ರಾಥಮಿಕ ಶಿಕ್ಷಣವನ್ನೂ ವ್ಯಾಪರೀಕರಣವಾಗಿಸುವ ದಂಧೆಯನ್ನು ತಡೆದು ಹೆತ್ತವರು ಬಯಸುವ ಉತ್ತಮ ಶಿಕ್ಷಣ ಬಡ ಮಕ್ಕಳಿಗೂ ಸರಕಾರವೇ ನೀಡಿದಂತಾಗುತ್ತದೆ ಹಾಗೂ ಖಾಸಗೀಕರಣದ ಭೂತದಿಂದ ಬಡಜನತೆಯನ್ನು ರಕ್ಷಿಸಿದಂತಾಗುತ್ತದೆ ಎಂದರು.
ಸರಕಾರೀ ಶಾಲೆಗಳಲ್ಲಿಯೇ ಎಲ್.ಕೆ.ಜಿ, ಯುಕೆಜಿ ಸ್ಥಾಪಿಸಲು ನಿರ್ಧರಿಸುತ್ತಿರುವುದನ್ನು ಖಂಡಿಸಿ ಮೇ 30 ರಂದು ವಿಧಾನಸೌಧ ಚಲೋ ಹೋರಾಟ ನಡೆಸಲಿದ್ದೇವೆ ಎಂದವರು ತಿಳಿಸಿದರು. ಇದರಲ್ಲೂ ನ್ಯಾಯ ಸಿಗದೇ ಇದ್ದಲ್ಲಿ ಜಿಲ್ಲಾಕೇಂದ್ರದಲ್ಲಿ ಅನಿರ್ಧಿಷ್ಟ ಹೋರಾಟ ನಡೆಸಲಾಗುವುದು ಎಂದರು .
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel