ಕಲ್ಲಪಳ್ಳಿ: ಸುಳ್ಯ-ಪಾಣತ್ತೂರು ಅಂತಾರಾಜ್ಯ ರಸ್ತೆ ಬದಿಯಲ್ಲಿ ಗುಡ್ಡದಲ್ಲಿ ಬಿರುಕು ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಕೇರಳ-ಕರ್ನಾಟಕ ಗಡಿ ಸಮೀಪ ಕಲ್ಲಪಳ್ಳಿಯಲ್ಲಿ ರಸ್ತೆಯ ಕೆಳಭಾಗದಲ್ಲಿ ಸುಮಾರು 100 ಮೀಟರ್ ಗಿಂತಲೂ ಅಧಿಕ ದೂರಕ್ಕೆ ಭೂಮಿ ಬಾಯ್ದೆರೆದಿದ್ದು ಬಿರುಕು ಕಾಣಿಸಿಕೊಂಡಿದೆ.
ಇಳಿಜಾರು ಪ್ರದೇಶದ ಅಡಕೆ ತೋಟದಲ್ಲಿ ಈ ರೀತಿ ಬಿರುಕು ಕಾಣಿಸಿಕೊಂಡಿದ್ದು ಗುಡ್ಡ ಜರಿದರೆ ತೋಟ ನಾಶವಾಗುವುದರ ಜೊತೆಗೆ ರಸ್ತೆಗೂ ಅಪಾಯ ಎದುರಾಗಲಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಬಿರುಕು ಕಾಣಿಸಿಕೊಂಡಿರುವ ಬಗ್ಗೆ ಗ್ರಾಮ ಪಂಚಾಯತ್ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel