ಅಡಿಕೆ ಮರ ಏರಲು ಬೈಕ್ ಯಂತ್ರ…! , ಯಂತ್ರ ಸಿದ್ಧಪಡಿಸಿದ ಅಡಿಕೆ ಬೆಳೆಗಾರ

June 18, 2019
8:00 AM
ಅಡಿಕೆ ಮರ ಏರಲು ವಿವಿಧ ಪ್ರಯತ್ನವಾಗುತ್ತಿದೆ. ಅಡಿಕೆ ಬೆಳೆಗಾರರ ಬಹುದೊಡ್ಡ ಸಮಸ್ಯೆ ಹಾಗೂ ಪರಿಹಾರಕ್ಕಾಗಿ ಕಾತರದಿಂದ ಕಾಯುವ ಸ್ಥಿತಿ ಇದೆ. ಇದೀಗ ಅಡಿಕೆ ಬೆಳೆಗಾರ  ಗಣಪತಿ ಭಟ್ ಅವರು ಹೊಸದೊಂದು ಯಂತ್ರವನ್ನು ಅಭಿವೃದ್ಧಿಪಡಿಸಿದ್ದಾರೆ. ಅದು ಬೈಕ್ ಮಾದರಿಯ ಯಂತ್ರ.  ಇದರ ಮೇಲೆ ಕುಳಿತ ವ್ಯಕ್ತಿ ಅತ್ಯಂತ ಸುಲಭವಾಗಿ ಅಡಿಕೆ ಮರದ ತುದಿಯನ್ನು ತಲುಪಿ ಅಡಿಕೆ ಕೊಯ್ಯಬಹುದು ಹಾಗೂ ಔಷಧಿಯನ್ನು ಸಿಂಪಡಿಸಬಹುದು.
ಮಳೆಗಾದಲ್ಲಿ ಅಡಿಕೆ ಮರಕ್ಕೆ ಔಷಧಿ ಸಿಂಪಡಣೆ ಮಾಡಲು ಮತ್ತು ವರ್ಷದ ಅಂತ್ಯದಲ್ಲಿ ಅಡಿಕೆ ಕೊಯ್ಯಲು ಅಡಿಕೆ ಮರವನ್ನು ಹತ್ತುವುದು ಅನಿವಾರ್ಯ ಕೆಲಸ.  ಕಾರ್ಮಿಕರು ತಮ್ಮ ಕಾಲಿನ ಸುತ್ತ ಹಗ್ಗವನ್ನು ಕಟ್ಟಿ ಮತ್ತು ಕೈಯಲ್ಲಿ ಒಂದು ತುಂಡು ಬಟ್ಟೆ ಸುತ್ತಿದ ಹಗ್ಗವನ್ನು ಹಿಡಿದುಕೊಂಡು ತೆಂಗಿನ ಮರ ಅಥವಾ ಅಡಿಕೆ ಮರವನ್ನು ಹತ್ತುತ್ತಾರೆ. ಅವರಿಗೆ ಯಾವುದೇ ರಕ್ಷಾ ಕವಚ ಇರುವುದಿಲ್ಲ.  ಕೈತಪ್ಪಿದರೆ ಕೆಳಕ್ಕೆ ಬೀಳುವ ಅಪಾಯ ಅಪಾರ ಪ್ರಮಾಣದಲ್ಲಿದೆ. ಈ ರೀತಿ ಬಿದ್ದವರು ಮತ್ತೆ ಏಳಲಾಗದ ಸ್ಥಿತಿ ತಲುಪಿದ ಉದಾಹರಣೆಯೂ ಸಾಕಷ್ಟಿದೆ. ಇದಕ್ಕಾಗಿ ವಿವಿಧ ಪ್ರಯತ್ನ ನಡೆಯುತ್ತಿದೆ.ಅಡಿಕೆ ಮರ ಬೆಳೆಸಲು ರೈತರು ಹಾಕುವ ಶ್ರಮವೆಲ್ಲಾ ಮಳೆಗಾಲದಲ್ಲಿ ಅತ್ಯಧಿಕ ಮಳೆಯ ಕಾರಣದಿಂದಾಗಿ ಕೊಳೆರೋಗ ಬಾಧಿಸಿ ನಾಶವಾಗುತ್ತದೆ, ಜೊತೆಗೆ ನುರಿತ ಕಾರ್ಮಿಕರ ಕೊರತೆಯಿಂದ ಬೆಳೆ ನಾಶವಾಗುತ್ತದೆ.
ಇದೀಗ ಬಂಟ್ವಾಳ ತಾಲೂಕಿನ ಸಜೀಪಮೂಡ ಗ್ರಾಮದ ಗಣಪತಿ ಭಟ್ ಮೋಟಾರ್ ಮಾದರಿಯ ಯಂತ್ರವನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಯಂತ್ರದ ಮೂಲಕ ಅಡಿಕೆ ಮರ ಹತ್ತುವ ದೃಶ್ಯವುಳ್ಳ ವೀಡಿಯೋ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ  ವೈರಲ್ ಆಗಿದೆ. ಬೆಳೆಗಾರರಲ್ಲಿ  ಹೊಸ ಭರವಸೆ ಮೂಡಿಸಿದೆ.
ಸಹಕಾರ : news13.in

Advertisement
Advertisement
Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಡಿಕೆಗೆ ಕೊಳೆರೋಗ | ಮಳೆಯಲ್ಲೂ ಇವರು ಔಷಧಿ ಸಿಂಪಡಿಸುತ್ತಾರೆ..!
July 24, 2025
4:42 PM
by: The Rural Mirror ಸುದ್ದಿಜಾಲ
ಕೃಷಿಕರಿಗೆ ಕೈಕೊಟ್ಟ ಹವಾಮಾನ | ಅಡಿಕೆಗೆ ವ್ಯಾಪಕವಾಗಿ ಹರಡಿದ ಕೊಳೆರೋಗ | ರೋಗನಿಯಂತ್ರಣಕ್ಕೆ ಇನ್ನಿಲ್ಲದ ಪ್ರಯತ್ನದಲ್ಲಿ ಅಡಿಕೆ ಬೆಳೆಗಾರರು |
July 24, 2025
10:48 AM
by: ವಿಶೇಷ ಪ್ರತಿನಿಧಿ
ಬಸ್ಸು ಚಾಲಕನಿಗೆ ಹಲಸಿನ ಊಟ ತಂದ ಸಂಕಷ್ಟ…!
July 24, 2025
7:06 AM
by: ದ ರೂರಲ್ ಮಿರರ್.ಕಾಂ
ರಾಸಾಯನಿಕ ರಹಿತ ದಂತಮಂಜನ ‘ದಂತಸುರಭಿ’ ಲೋಕಾರ್ಪಣೆ | ಜನಜೀವನ ವಿಷದಿಂದ ಅಮೃತದತ್ತ ಸಾಗಲಿ: ರಾಘವೇಶ್ವರ ಶ್ರೀ ಆಶಯ
July 24, 2025
6:19 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group