ಅಡಿಕೆ ಮರ ಏರುವ ಯಂತ್ರದ ಪ್ರಾತ್ಯಕ್ಷಿಕೆ

June 23, 2019
4:15 PM

ಗುತ್ತಿಗಾರು: ಮೋಟಾರ್ ಬೈಕ್ ಮಾದರಿಯ ಅಡಿಕೆ ಮರ ಏರುವ ಯಂತ್ರದ ಪ್ರಾತ್ಯಕ್ಷಿಕೆ ಗುತ್ತಿಗಾರು ಗ್ರಾಮದ ಕಮಿಲ ಬಳಿಯ ಪುಚ್ಚಪ್ಪಾಡಿ ಕೃಷ್ಣಮೂರ್ತಿ ಅವರ ಅಡಿಕೆ ತೋಟದಲ್ಲಿ  ನಡೆಯಿತು. ಅಡಿಕೆ ಬೆಳೆಗಾರರು ಮರ ಏರುವ ಯಂತ್ರದ ಪ್ರಾತ್ಯಕ್ಷಿಕೆಯನ್ನು  ವೀಕ್ಷಿಸಿದರು. ಭಾರತೀಯ ಕಿಸಾನ್ ಸಂಘ ಗುತ್ತಿಗಾರು-ನಾಲ್ಕುರು ಇದರ ಸಹಯೋಗದೊಂದಿಗೆ ನಡೆದ ಈ ಕಾರ್ಯಕ್ರಮದಲ್ಲಿ 100 ಕ್ಕೂ ಅಧಿಕ ಅಡಿಕೆ ಬೆಳೆಗಾರರು ಆಗಮಿಸಿದ್ದರು.

Advertisement

 

 

ಬಂಟ್ವಾಳದ ಸಜಿಪಮೂಡ ಗ್ರಾಮದ ಕೃಷಿಕ ಗಣಪತಿ ಭಟ್ ಅವರು ನಿರ್ಮಾಣ ಮಾಡಿರುವ ಮೋಟಾರು ಚಾಲಿತ ಅಡಿಕೆ ಮರ ಏರುವ ಯಂತ್ರದ ಪ್ರಾತ್ಯಕ್ಷಿಕೆ  ನಡೆಯಿತು. ಈ ಸಂದರ್ಭ ರಾಜಾರಾಮ ಕಾಡೂರು ಮಾಹಿತಿ ನೀಡಿದರು. ಅಡಿಕೆ ಬೆಳೆಗಾರರು ಮರ ಏರಿ ಯಂತ್ರದ ಕ್ಷಮತೆ ಹಾಗೂ ಆವಿಷ್ಕಾರವನ್ನು ಕೊಂಡಾಡಿದರು.

 

 

ಕೃಷಿ ಯಂತ್ರದ ಅಭಿವೃದ್ಧಿ ಕಡೆಗೆ ಆಸಕ್ತರಾಗಿರುವ ಗಣಪತಿ ಭಟ್ ಅವರು ಈಗಾಗಲೇ  ಸುಮಾರು 50 ಲಕ್ಷ ರೂಪಾಯಿಯಷ್ಟು  ಖರ್ಚು ಮಾಡಿದ್ದಾರೆ. ಇದೀಗ ಅಡಿಕೆ ಮರ  ಏರುವ ಯಂತ್ರ ಯಶಸ್ಸಾಗಿದೆ. ಅಡಿಕೆ ಬೆಳೆಗಾರರ ಮನ ಗೆದ್ದಿದೆ.

ಬಳಿಕ ಮಾತನಾಡಿದ ಗಣಪತಿ ಭಟ್,                         

ಕಳೆದ 2 ವರ್ಷಗಳ ನಿರಂತರ ಪ್ರಯತ್ನದಿಂದ ಈ ಮಾದರಿ ತಯಾರಾಗಿದೆ. ಈ ಹಿಂದೆ ಹಲವು ಯಂತ್ರಗಳ ರಚನೆ ಮಾಡಿದ್ದಾಗಿ ಹೇಳಿದ್ದಾರೆ. ಮುಂದೆ ತೆಂಗಿನ ಮರ ಏರುವ ಯಂತ್ರ ಹಾಗೂ   ಅಡಿಕೆ ಮರ ಏರುವ ಈ ಮಾದರಿಯನ್ನು  ಅಭಿವೃದ್ಧಿ ಪಡಿಸುವ ಉದ್ದೇಶ ಕೂಡಾ ಇದೆ ಎಂದು ಹೇಳುತ್ತಾರೆ.

 

 

 

 

 

 

 

ಅಡಿಕೆ ಮರ ಏರುವ ಯಂತ್ರದ ಪ್ರಾತ್ಯಕ್ಷಿಕೆಯ ವಿಡಿಯೋ ಇಲ್ಲಿದೆ….

 

 

 

 

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಡಿಕೆ ಎಲೆಚುಕ್ಕೆರೋಗ – ಸಿಪಿಸಿಆರ್‌ಐ ನೇತೃತ್ವದಲ್ಲಿ ಸುಳ್ಯದ ಗುತ್ತಿಗಾರಿನಲ್ಲಿ ಸಂವಾದ
April 26, 2026
7:33 AM
by: ದ ರೂರಲ್ ಮಿರರ್.ಕಾಂ
2026 ಎಲ್ ನಿನೊ ಎಚ್ಚರಿಕೆ..! ಭಾರತ ಸೇರಿ ಏಷ್ಯಾದಲ್ಲಿ ಬರ-ಬಿಸಿಲಿನ ಡಬಲ್ ಶಾಕ್
April 25, 2026
9:16 PM
by: ದ ರೂರಲ್ ಮಿರರ್.ಕಾಂ
ಭಾರೀ ಬಿಸಿ ಹೊಡೆತ..! ಜಗತ್ತಿನ 1 ಬಿಲಿಯನ್ ಜನರ ಬದುಕಿಗೆ ಬಿಸಿ ಹೊಡೆತ
April 25, 2026
9:04 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 25-04-2026 | ಕರಾವಳಿ, ಮಲೆನಾಡಿನಲ್ಲಿ ಗುಡುಗು ಮಳೆ – ಮಳೆ ಹೆಚ್ಚಳ ಯಾವಾಗಿನಿಂದ…?
April 25, 2026
3:00 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror