ಮರ್ಕಂಜ: ಗ್ರಾಮ ಸಭೆ ಆರಂಭಕ್ಕೆ ಗಂಟೆ ಹನ್ನೊಂದಾದರೂ ಅಧಿಕಾರಿಗಳಾರು ಗ್ರಾಮಸಭೆಗೆ ಹಾಜರಾಗದ ಹಿನ್ನಲೆಯಲ್ಲಿ ಗ್ರಾಮಸಭೆಯನ್ನು ಬಹಿಷ್ಕಾರ ಮಾಡಲು ನಿರ್ಧರಿಸಿದ ಘಟನೆ ಮರ್ಕಂಜ ಗ್ರಾಮಸಭೆಯಲ್ಲಿ ನಡೆಯಿತು.
Advertisement
ಅಧಿಕಾರಿಗಳ ಗೈರು ಕುರಿತಂತೆ ಪಂಚಾಯತ್ ಸದಸ್ಯ ರುಕ್ಮಯ್ಯ ಗೌಡ ಸಭೆಯಲ್ಲಿ ಪ್ತಸ್ತಾವಿಸಿ, ಜನರಿಗೆ ಮಾಹಿತಿ ನೀಡಲು ಯಾರೂ ಇಲ್ಲದಿದ್ದರೆ ಸಭೆ ನಡೆಸುವುದರಲ್ಲಿ ಅರ್ಥವೇನಿದೆ? ಎಂದು ಪ್ರಶ್ನಿಸಿದರು. ಇದಕ್ಕೆ ಪೂರಕವಾಗಿ ಗ್ರಾಮಸ್ಥರೂ ಸ್ಪಂದಿಸಿ ಸಭಾತ್ಯಾಗಕ್ಕೆ ಮುಂದಾದರು. ಈ ವೇಳೆ ಜಿ.ಪಂ ಸದಸ್ಯ ಹರೀಶ್ ಕಂಜಿಪಿಲಿ ಹಾಗೂ ಪಂಚಾಯತ್ ಅಧ್ಯಕ್ಷ ಮೋನಪ್ಪ ಹೈದಂಗೂರು ಗ್ರಾಮಸ್ಥರ ಮನವೊಲಿಸಿ ಗ್ರಾಮಸಭೆಯನ್ನು ಮುಂದುವರಿಸಲು ಮನವಿ ಮಾಡಿದರು. ಸ್ವಲ್ಪ ಹೊತ್ತು ಸಭೆಯಲ್ಲಿ ಗೊಂದಲ ಸೃಷ್ಟಿಯಾಗಿ ಬಳಿಕ ಅಧಿಕಾರಿಗಳಿಗೆ ಫೋನಾಯಿಸಿ ಇಲಾಖಾಧಿಕಾರಿಗಳು ಬರುವುದನ್ನು ಖಚಿತ ಪಡಿಸಿದ ಬಳಿಕ ಗ್ರಾಮಸಭೆ ಮುಂದುವರಿಯಿತು.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement