ಅನ್ಸಾರಿಯಾ ಯುಎಇ – ಮೌಲೂದ್ ಪಾರಾಯಣ ಹಾಗೂ ಅಬ್ಬಾಸ್ ಹಾಜಿ ಅನುಸ್ಮರಣೆ

November 2, 2019
10:52 AM

ದುಬೈ: ನ.1 ಅನ್ಸಾರಿಯ ಯತೀಮ್ ಖಾನ ಮತ್ತು ನಿರ್ಗತಿಕರ ಕೇಂದ್ರ ಸುಳ್ಯ ಇದರ ಯು ಎ ಇ ಸಮಿತಿ ವತಿಯಿಂದ ಮೀಲಾದ್ ಸಮಾವೇಶ ಹಾಗು ಇತ್ತೀಚಿಗೆ ನಿಧನರಾದ ಮರ್ಹೂಂ ಅಬ್ಬಾಸ್ ಹಾಜಿ ಕಟ್ಟೆಕ್ಕಾರ್ ರವರ ಅನುಸ್ಮರಣಾ ಕಾರ್ಯಕ್ರಮವು ಶುಕ್ರವಾರ ಅಸರ್ ನಮಾಝ್ ಬಳಿಕ ದುಬೈನ ನೈಫ್ ನಲ್ಲಿರುವ ಮದರಸಾ ಸಭಾಂಗಣದಲ್ಲಿ ನಡೆಯಿತು.

Advertisement

ಪ್ರವಾದಿ ಮುಹಮ್ಮದ್ ಮುಸ್ತಫಾ [ಸ.ಅ] ರವರವರನ್ನು ಸ್ತುತಿಸುವ ಮೌಲೂದ್ ಪಾರಾಯಣದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ದುಬೈನಲ್ಲಿ ಕೆಸಿಎಫ್ ಸಂಘಟನೆಯ ಕನ್ವೀನರ್ ಆಗಿರುವ ಕಬೀರ್ ಜಟ್ಟಿಪ್ಪಳ್ಳ ಮೌಲೂದ್’ ಹಾಗೂ ದುವಾಗೆ ನೇತೃತ್ವ ನೀಡಿದರು.

ಬಳಿಕ ಇತ್ತೀಚೆಗೆ ನಿಧನರಾದ ಸುಳ್ಯದ ಹಿರಿಯ ಸಾಮಾಜಿಕ ಮುಂದಾಳು ಹಾಗೂ ಹಿರಿಯ ಉದ್ಯಮಿಯಾಗಿದ್ದ ಅಬ್ಬಾಸ್ ಹಾಜಿ ಕಟ್ಟೆಕ್ಕಾರ್ಸ್ ಅವರಿಗೆ ತಹಲೀಲ್ ಸಮರ್ಪಿಸಲಾಯಿತು.
ಅನ್ಸಾರಿಯಾ ಯುಎಇ ಸಮಿತಿಯ ಅಧ್ಯಕ್ಷರಾದ ಝೈನುದ್ದೀನ್ ಬೆಳ್ಳಾರೆಯವರು ಮಾತನಾಡಿ, ಅಬ್ಬಾಸ್ ಹಾಜಿ ಅವರ ನಿಧನವು ಸುಳ್ಯದ ಜನತೆಗೆ ತುಂಬಲಾರದ ನಷ್ಟ. ಸುಳ್ಯ ದಲ್ಲಿ ಸರ್ವಧರ್ಮದವರು ಸಹಬಾಳ್ವೆಯಿಂದ ಜೀವನ ನಡೆಸಲು ಅಬ್ಬಾಸ್ ಹಾಜಿಯವರ ಮುಂದಾಳತ್ವ ಪ್ರಮುಖ ಪಾತ್ರ ವಹಿಸಿತ್ತು ಎಂದು ಹೇಳಿದರು.

ಸುಳ್ಯದ ಅನ್ಸಾರಿಯಾದ ವಠಾರದಲ್ಲಿ ನಿರ್ಮಾಣಗೊಳ್ಳುತ್ತಿರುವ ಶಾದಿ ಮಹಲ್ ಕಟ್ಟಡದ ಕಾಮಗಾರಿ ಸಾಧ್ಯವಾದಷ್ಟು ವೇಗದಲ್ಲಿ ಪೂರ್ತಿಗೊಳಿಸಲು ಸರ್ವರ ಸಹಕಾರ ಕೋರಿದರು.
ನಾಸಿರ್ ಜಟ್ಟಿಪ್ಪಳ್ಳ ಸ್ವಾಗತಿಸಿ, ಮುಖ್ತಾರ್ ಅರಂತೋಡು ವಂದನಾರ್ಪಣೆ ಮಾಡಿದರು. ಸಮಿತಿಯ ಪ್ರಮುಖರಾದ ಮುಹಮ್ಮದ್ ಇಂಜಿನಿಯರ್ ಮೇನಾಲ, ಖಜಾಂಚಿ ಮುನೀರ್ ಜಟ್ಟಿಪ್ಪಳ್ಳ, ಗೌರವಾಧ್ಯಕ್ಷರಾದ ಹಮೀದ್ ಕೆಯು, ಹಮೀದ್ ಪೆರಾಜೆ ಕಬಾಯಿಲ್, ಅಜ್ಮಾನ್ ಯುನಿಟ್ ಅಧ್ಯಕ್ಷರಾದ ಅಝೀಝ್ ಕುಂಬಕ್ಕೋಡು, ಅಬುಧಾಬಿ ಯುನಿಟ್ ಅಧ್ಯಕ್ಷರಾದ ಲತೀಫ್ ನ್ಯಾಷನಲ್, ಅಜ್ಮಾನ್ ಜಿಎಂಸಿ ಗ್ರೂಪ್, ಮೊಯ್ದೀನ್ ಕಬಾಯಿಲ್, ರಫೀಕ್ ಜಟ್ಟಿಪ್ಪಳ್ಳ ಸೇರಿ ಸುಳ್ಯ ತಾಲೂಕಿನ ಹಲವಾರು ಯುವಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ತಬರ್ರುಖ್ ವಿತರಿಸಲಾಯಿತು.

Advertisement

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಸಂಶೋಧನಾ ಕಾರ್ಯಕ್ಕೆ ರಾಜ್ಯ ಸರ್ಕಾರದಿಂದ ಪ್ರೋತ್ಸಾಹ
July 4, 2025
10:40 PM
by: The Rural Mirror ಸುದ್ದಿಜಾಲ
ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ | ಪ್ರವಾಹ ಮತ್ತು ಭೂಕುಸಿತದಿಂದ ತೀವ್ರ ಪರಿಣಾಮ
July 4, 2025
9:22 PM
by: ದ ರೂರಲ್ ಮಿರರ್.ಕಾಂ
ಗ್ರಾಮೀಣ ಭಾಗಕ್ಕೂ ತಲುಪಿದ ಆಧುನಿಕ ಸಂಸ್ಕೃತಿ | ಕುಕ್ಕೆ ಸುಬ್ರಹ್ಮಣ್ಯದ ವಿದ್ಯಾರ್ಥಿಗಳ ವಿಡಿಯೋ ವೈರಲ್ | ಸೋಶಿಯಲ್‌ ಮೀಡಿಯಾದಲ್ಲಿ ಹಲವರಿಂದ ಅಸಮಾಧಾನ |
July 4, 2025
8:27 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 04.07.2025| ರಾಜ್ಯದ ಕರಾವಳಿ ಭಾಗದಲ್ಲಿ ಏಕೆ ಉತ್ತಮ‌ ಮಳೆಯಾಗುತ್ತಿದೆ..? | ಇಂದೂ‌ ಸಾಮಾನ್ಯ ಮಳೆ
July 4, 2025
12:56 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group