ನವದೆಹಲಿ: ಕೊರೊನಾ ಸೋಂಕಿನ ನಿಯಂತ್ರಣಕ್ಕೋಸ್ಕರ ದೇಶಾದ್ಯಂತ ಹೇರಲಾಗಿದ್ದ ಲಾಕ್ಡೌನ್ ಹಂತ ಹಂತವಾಗಿ ಅನ್ ಲಾಕ್ ಆಗುತ್ತಿದ್ದು, ದೇಶಾದ್ಯಂತ ಅನ್ವಯವಾಗುವ ಅನ್‌ಲಾಕ್ 3.0 ಮಾರ್ಗಸೂಚಿಗಳನ್ನು ಕೇಂದ್ರ ಸರಕಾರ ಬುಧವಾರ ಸಂಜೆ ಪ್ರಕಟಿಸಿದೆ.
ಅದರ ಪ್ರಕಾರ ಶಾಲೆ, ಕಾಲೇಜು, ಇತರ ಶೈಕ್ಷಣಿಕ ಸಂಸ್ಥೆಗಳು, ಕೋಚಿಂಗ್ ಕ್ಲಾಸ್‌ಗಳು ಆ. 31ರವರೆಗೆ ತೆರೆಯಲು ಅನುಮತಿ ಇಲ್ಲ. ಆನ್‌ಲೈನ್ ಶಿಕ್ಷಣ, ದೂರ ಶಿಕ್ಷಣಕ್ಕೆ ಅನುಮತಿ ನೀಡುವುದಲ್ಲದೇ ಪ್ರೋತ್ಸಾಹಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಇದರೊಂದಿಗೆ ಈವರೆಗೆ ಇದ್ದ ನೈಟ್ ಕರ್ಫ್ಯೂ ಅನ್ನು ರದ್ದು ಮಾಡಲಾಗಿದೆ. ಅದಲ್ಲದೇ ಮೆಟ್ರೋ ಸಂಚಾರ ಹಾಗೂ ಅಂತರಾಜ್ಯ ಸಂಚಾರಕ್ಕೆ ಅನುಮತಿ ನೀಡಲಾಗಿದೆ.
ಸಿನಿಮಾ ಹಾಲ್, ಸ್ವಿಮಿಂಗ್ ಪೂಲ್, ಬಾರ್, ಆಡಿಟೋರಿಯಂ ಮುಂತಾದವುಗಳನ್ನೂ ತೆರೆಯುವಂತಿಲ್ಲ. ಯೋಗ ಸಂಸ್ಥೆಗಳು ಮತ್ತು ಜಿಮ್‌ಗಳನ್ನು ಆ. 5ರ ಬಳಿಕ ತೆರೆಯಬಹುದು. ಇದಕ್ಕಾಗಿ ಪ್ರತ್ಯೇಕ ನಿಯಮಗಳನ್ನು ಕೇಂದ್ರ ಸರಕಾರ ಸದ್ಯದಲ್ಲೇ ಹೊರಡಿಸಲಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel