ಅಪ್ಪನೆಂದರೆ ಅಪ್ಪ ಅಷ್ಟೇ!!!!

June 17, 2019
1:00 PM
ಮಕ್ಕಳು ಆ ದಿನ  ಖುಷಿಯಿಂದಲೇ ಒಳ ಬಂದವು, ಅಪ್ಪ, ಅಪ್ಪ ಎಂದು ಕರೆಯುತ್ತಲೇ ಮನೆ ತುಂಬಾ ಓಡಾಡಿದರು. ಬಾಯಾರಿಕೆ ಕುಡಿಯುತ್ತಿದ್ದ ಅಪ್ಪನ ನ್ನು ನೋಡಿ ಬಹಳ ಹರ್ಷಿಸಿದರು. ಯಾವತ್ತೂ ಅಪ್ಪ ಕೆಲಸ ಮುಗಿಸಿ ಬರುವಾಗ ಮಲಗಿರುತ್ತಿದ್ದ ಮಕ್ಕಳು ಇಂದು ಶಾಲೆಯಿಂದ ಬರುವಾಗಲೇ ಮನೆಯ ಹೊರಗಿದ್ದ ಚಪ್ಪಲುಗಳನ್ನು ನೋಡಿ ಸಂತೋಷ ಪಟ್ಟವು. ಈ ದಿನ ಅಪ್ಪನೊಂದಿಗೆ ಸಂತೋಷವಾಗಿ ಕಳೆಯಬಹುದಲ್ಲಾ ಎಂದು ಕುಣಿದಾಡಿದವು. ಮನೆಗೆ ಬಂದ ಮಕ್ಕಳನ್ನು ಕರೆದುಕೊಂಡು ಪೇಟೆಗೆ ಹೋದ ಅಪ್ಪ ಬೇಕೆನಿಸಿದೆಲ್ಲವನ್ನು ತೆಗೆಸಿ ಕೊಟ್ಟು ಕಣ್ಣಿನಲ್ಲಿ ಪ್ರೀತಿಯ  ಸೂಸಿದಾಗ ಅಪ್ಪನ ಬಗೆಗಿನ ಕೋಪ ವೆಲ್ಲಾ ತಣ್ಣಗೆ ದೂರವಾಯ್ತು. ಅಪ್ಪ ಜೊತೆಗಿದ್ದರೆ ಜಗತ್ತೇ ನಮ್ಮದು ಎಂಬ ಖುಷಿಯ ಮುಂದೆ ಉಳಿದೆಲ್ಲಾ ಭಾವನೆಗಳು ಗೌಣ.
ಗೆಳೆಯರ ಅಪ್ಪಂದಿರು ವಾಕಿಂಗ್, ಔಟಿಂಗ್ ಅಂತ ಕರೆದುಕೊಂಡು ಹೋಗುತ್ತಿದ್ದರೆ ನಮ್ಮ ಅಪ್ಪನನ್ಬು ಕಾಣುವುದೇ ಅಪರೂಪ ಎಂಬಂತ ಪರಿಸ್ಥಿತಿ ಮನೆಯಲ್ಲಿ.ಬೆಳಗಿನ ಹೊತ್ತು ಎಳುವಾಗಲೇ ಅಪ್ಪ ಕೆಲಸಕ್ಕೆ ಹೋಗಿಯಾಗಿರುತ್ತಿತ್ತು.  ಮನೆ ವಾರ್ತೆ ಗಳಲ್ಲಿ  ನಿರತಳಾಗಿರುವ ಅಮ್ಮನನ್ನು  ನೋಡುತ್ತಾ ಬೆಳೆವ ಮಕ್ಕಳಿಗೆ ಅಪ್ಪನ ಭಾವನೆಗಳು ಅರ್ಥವೇ ಆಗದು.
ದಿನದಿಂದ ದಿನಕ್ಕೆ ಏರುತ್ತಿರುವ ದಿನಬಳಕೆಯ ಸಾಮಾನುಗಳ ಖರ್ಚು, ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿ, ಸ್ವಂತದ್ದು ಅಂತ ಒಂದು ಪುಟ್ಟ ಎರಡು ಬೆಡ್ ರೂಮ್ ಗಳ ಮನೆಯ  ಕನಸು ,ಇದರ ನಡುವೆ ಹೆಚ್ಚುತ್ತಿರುವ ಪ್ರಾಯ, ಅದರೊಂದಿಗೆ ಕಾಯಿಲೆ ಕಸಾಲೆಗಳು. ಓಹ್ ಒಂದೇ ಎರಡೇ ಅಪ್ಪಂದಿರ ಸಮಸ್ಯೆಗಳು. ಕೆಲವರು  ವಟವಟ ಮಾತನಾಡುವವರು ಹಂಚಿಕೊಳ್ಳುತ್ತಾರೆ ಮೌನ ದಲ್ಲಿರುವವರು ಮನಸಲ್ಲೇ ಕೊರಗುತ್ತಾರೆ. ಒಟ್ಟಾರೆ ಯಾಗಿ ತಮ್ಮ ಸುಖವನ್ನು ಬದಿಗೊತ್ತಿ  , ತನ್ನವರು, ಮನೆ ಮಕ್ಕಳು ಅಂತ ದುಡಿಯುವುದು ಅಪ್ಪ ಅಮ್ಮಂದಿರಿಗೆ ಮಾತ್ರ ಸಾಧ್ಯ. ಅಮ್ಮಂದಿರು ಕಷ್ಟ ಸುಖ ಹಂಚಿಕೊಳ್ಳುತ್ತಾರೆ, ಅಪ್ಪಂದಿರು ಭಾವನೆಗಳನ್ನು ವ್ಯಕ್ತಪಡಿಸುವುದನ್ನು ಇಷ್ಟಪಡಲಾ ರರು.  ಒಂದು ನಿರ್ದಿಷ್ಟ ವೇತನ ಪಡೆಯು ವ ಉದ್ಯೋಗವಿದ್ದಾಗ  ಮಕ್ಕಳ ಆವಶ್ಯಕತೆ ಗಳಿಗೆ ಸ್ಪಂದಿಸುವ ದೈರ್ಯವಿರುತ್ತದೆ ಆದರೆ  ಎಲ್ಲಾ ಅಪ್ಪಂದಿರಿಗೂ ಆ ಭಾಗ್ಯವಿರುವುದಿಲ್ಲ ತಾನೇ..‌?ದಿನ ನಿತ್ಯದ ಅಗತ್ಯ ಗಳನ್ನು ಪೂರೈಸಲೇ ಹೆಣಗುವ  ಹೆತ್ತವರಿರುತ್ತಾರೆ. ಒಂದು ಹೊತ್ತಿನ ಊಟಕ್ಕಾಗಿ ಪರದಾಡುವ ಎಷ್ಟೋ ಸಂಸಾರಗಳಿವೆ. ಅಲ್ಲಿ ಯಾವ ಭಾವನೆಗಳಿಗೂ ಬೆಲೆಯಿಲ್ಲ. ಆಯಾ ಹೊತ್ತಿನ ಅಗತ್ಯ ಗಳು ಪೂರೈಕೆ ಯಾದರೆ ಸಾಕು ಎಂಬ ಭಾವ ಮಾತ್ರ.
 ಅಪ್ಪನೆಂದರೆ ತನ್ನೆಷ್ಟೋ ಕನಸುಗಳನ್ನು ಮನಸಿನಲ್ಲೇ ಕಟ್ಟಿ ಹಾಕಿ ಮಕ್ಕಳಲ್ಲಿ ಹೊಸ ಬದುಕಿನ,ಒಳ್ಳೆಯ ಭವಿಷ್ಯಕ್ಕೆ ಗಟ್ಟಿಯಾದ ಅಡಿಪಾಯ ಹಾಕಲು ಅಗತ್ಯವಾದುದನ್ನು ಒದಗಿಸುವುದರಲ್ಲೇ ತನ್ನ ಸಂತೋಷ ಕಾಣುವವನು.
ಬದುಕಿನ ಹಲವು ಮುಖಗಳ ಅನಾವರಣ ನಮಗಾಗದಂತೆ ಬೆಳೆಸುವುದು ಅಪ್ಪಂದಿರಿಂದ ಮಾತ್ರವೇ ಸಾಧ್ಯ.

Advertisement
Advertisement
Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ಸಸ್ಯ ಪರಿಚಯ – ಕಿರಾತಕಡ್ಡಿ | ಮನೆಯಲ್ಲಿರಬೇಕಾದ ಗಿಡಗಳಲ್ಲಿ ಇದೂ ಒಂದು |
July 22, 2025
2:26 PM
by: ಜಯಲಕ್ಷ್ಮಿ ದಾಮ್ಲೆ
ಅರ್ಥವಾಗದ ಮಳೆಯ ನಾಡಿಬಡಿತ…….! | ಅಡುಗೆ ಮನೆಯ ಕಿಟಿಕಿಯಾಚೆಗಿನ ನೋಟ..
July 22, 2025
1:18 PM
by: ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ
ಬದುಕು ಪುರಾಣ | ರಾಮಬಾಣದ ಇರಿತ
July 20, 2025
7:39 AM
by: ನಾ.ಕಾರಂತ ಪೆರಾಜೆ
ಭಾರತದಲ್ಲಿ ಅಡಿಕೆ ಕೃಷಿ ಹೇಗಿದೆ..? ಎಷ್ಟು ಉತ್ಪಾದನೆಯಾಗುತ್ತಿದೆ…?
July 19, 2025
7:56 AM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ

You cannot copy content of this page - Copyright -The Rural Mirror

Join Our Group