ಅಪ್ಪಳಿಸಿದ ಮಹಾ ಚಂಡಮಾರುತ “ಅಂಫಾನ್” | 20 ವರ್ಷಗಳಲ್ಲಿ ಕಾಣಿಸಿಕೊಂಡ ಪ್ರಬಲ ಚಂಡಮಾರುತ | ಚಂಡಮಾರುತಕ್ಕೆ 3 ಬಲಿ |

May 20, 2020
8:03 PM

ನವದೆಹಲಿ: ಕಳೆದ 20 ವರ್ಷಗಳಲ್ಲಿ ಕಾಣಿಸಿಕೊಂಡ ಚಂಡಮಾರುತಗಳಲ್ಲೇ ಅತ್ಯಂತ  ಪ್ರಬಲವಾದ ಚಂಡಮಾರುತ ‘ಅಂಫಾನ್’  ಬಾಂಗ್ಲಾದೇಶ ಹಾಗೂ ಪಶ್ಚಿಮ ಬಂಗಾಳಕ್ಕೆ ಅಪ್ಪಳಿಸಿದ್ದು, ಬಾಂಗ್ಲಾದಲ್ಲಿ ಚಂಡಮಾರುತವು ಮೊದಲ ಬಲಿ ಪಡೆದಿದೆ. ಈ ನಡುವೆ ಭಾರೀ ಗಾಳಿ ಮಳೆಗೆ ಒಡಿಶಾದಲ್ಲಿ  2 ಮಂದಿ ಬಲಿಯಾಗಿದ್ದಾರೆ.  ನೂರಾರು ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿದೆ ಎಂದು ವರದಿಯಾಗಿದೆ.

Advertisement
Advertisement

ಪ್ರಬಲವಾಗಿ ಕಾಣಿಸಿಕೊಂಡ ಚಂಡಮಾರುತ ಸಂಜೆ 7 ಗಂಟೆಯ ಹೊತ್ತಿಗೆ ಕರಾವಳಿ ಹಾಗೂ ಪಶ್ಚಿಮ ಬಂಗಾಳ-ಬಾಂಗ್ಲಾದೇಶದ ಕರಾವಳಿ ಪ್ರದೇಶವನ್ನು ಪಶ್ಚಿಮ ಬಂಗಾಳದ ಕಡೆ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿತ್ತು. ಅದಕ್ಕಿಂತಲೂ ಮುನ್ನವೇ ಕರಾವಳಿ ತೀರಕ್ಕೆ ಚಂಡಮಾರುತ ಅಪ್ಪಳಿಸಿದೆ. ಚಂಡಮಾರುತವು ಮೊದಲು ಪಶ್ವಿಮ ಬಂಗಾಳದ ದಿಗಾ ಮತ್ತು ಹತಿಯಾ ನಡುವೆ ಇರುವ ಸುಂದರ್‌ಬನ್‌ ಕರಾವಳಿ ಪ್ರದೇಶಕ್ಕೆ ಅಪ್ಪಳಿಸಿ ಬಳಿಕ ಬೇರೆ ಕಡೆಗೆ ಪಸರಿಸಿಲಿದೆ ಎಂಬ ಕಾರಣದಿಂದ  ಜನರನ್ನು ಸ್ಥಳಾಂತರಿಸುತ್ತಿದ್ದ ಸಂದರ್ಭದಲ್ಲಿ ಹಡಗು ಪಲ್ಟಿಯಾಗಿ ರೆಡ್ ಕ್ರಸೆಂಡ್ ಕಾರ್ಯಕರ್ತನೊಬ್ಬ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.

Advertisement

ಅಂಫಾನ್ ಚಂಡಮಾರುತ ಅಪ್ಪಳಿಸುವ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ಮತ್ತು ಒರಿಸ್ಸಾ ಕರಾವಳಿಯಲ್ಲಿ 5 ಲಕ್ಷಕ್ಕೂ‌ ಹೆಚ್ಚು ಜನರನ್ನು ಸಮುದ್ರ ತೀರದಿಂದ ಸ್ಥಳಾಂತರ ಮಾಡಲಾಗಿದೆ.

ಅಂಫಾನ್ ಚಂಡಮಾರುತವು ಗಂಟೆಗೆ 155-165 ಕಿ.ಮೀ ಗಳಷ್ಟಿರಲಿದ್ದು, 185 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದ್ದು ಈಗಾಗಲೇ ವಿಪರೀತ ಬಿರುಗಾಳಿ ಕಂಡಿದೆ. ಬೆಳಿಗ್ಗೆಯಿಂದಲೇ ಒಡಿಶಾದ ಭದ್ರಕ್, ಪಾರಾದೀಪ್, ಬಾಲಾಸೋರ್, ಚಂಡೀಪುರ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮಳೆ ಆರಂಭವಾಗಿದ್ದು ನಿರಂತರವಾಗಿ ಮಳೆ ಸುರಿಯುತ್ತಿದೆ. ಸದ್ಯ  ಚಂಡಮಾರುತ  ಭೀಕರ  ರೂಪವನ್ನು ತಳೆದಿದೆ.

Advertisement

20 ವರ್ಷಗಳಲ್ಲೇ ಕಂಡಿರದ ಚಂಡಮಾರುತ ಇದಾಗಿದ್ದು 1999ರ ಒಡಿಶಾ ಚಂಡಮಾರುತದ ಬಳಿಕ ಎರಡನೇ ಗಂಭೀರ ಮತ್ತು ಅತಿ ದೊಡ್ಡ ಸೂಪರ್ ಸೈಕ್ಲೋನ್ ಆಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.

 

Advertisement

 

Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಳೆಯ ಜೊತೆಗೆ ಮಲೆನಾಡಲ್ಲಿ ಸಿಡಿಲಬ್ಬರ | ಸುಬ್ರಹ್ಮಣ್ಯದಲ್ಲಿ ಯುವಕ ಬಲಿ | ಮಡಿಕೇರಿಯಲ್ಲಿ ಕಾರ್ಮಿಕ ಗಂಭೀರ |
May 3, 2024
9:58 PM
by: ದ ರೂರಲ್ ಮಿರರ್.ಕಾಂ
ತಾಪಮಾನ – ಬರಗಾಲ – ಪೆನ್ ಡ್ರೈವ್ ಮತ್ತು ಸೆಕ್ಸ್… ಯಾವುದು ನಮ್ಮ ಆದ್ಯತೆಯಾಗಬೇಕು……. |
May 2, 2024
6:51 AM
by: ವಿವೇಕಾನಂದ ಎಚ್‌ ಕೆ
ತಾಪಮಾನದಿಂದ ಅಡಿಕೆ ಕೃಷಿ ರಕ್ಷಣೆ | ಗೋವು ಹಾಗೂ ಗೋಉತ್ಪನ್ನ ಪರಿಣಾಮಕಾರಿ ಹೇಗೆ..? | ಗೋ ಆಧಾರಿತ ಕೃಷಿಯ ಬಗ್ಗೆ ಜಾಗೃತಿ ಏಕೆ ಬೇಕು ?
May 2, 2024
6:38 AM
by: ಮುರಳಿಕೃಷ್ಣ ಕೆ ಜಿ
ಜೀವಕ್ಕೇ ಅಮೃತ – ಜೀವಾಮೃತ | ಜೀವಾಮೃತವು ಗಿಡ-ಮರಗಳನ್ನು ಬಿಸಿ ಮತ್ತು ಬರ, ನೀರಿನ ಕೊರತೆಯ ಸಹಿಷ್ಣುತೆ ಹೆಚ್ಚಿಸುತ್ತದೆ | |
May 1, 2024
5:44 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror