ಅಫ್ಘಾನಿಸ್ಥಾನಕ್ಕೆ 225 ರನ್ ಗುರಿ ನೀಡಿದ ಭಾರತ

June 22, 2019
8:45 PM

ಸೌತಾಂಪ್ಟನ್: ನಿರಾಶಾದಾಯಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಭಾರತ ತಂಡ ಅಫ್ಘಾನಿಸ್ಥಾನ ತಂಡಕ್ಕೆ 225 ರನ್ ಗಳ ಗುರಿ ನೀಡಿದೆ. ನಾಯಕ ವಿರಾಟ್ ಕೊಹ್ಲಿ ಟೂರ್ನಿಯಲ್ಲಿ ಬಾರಿಸಿದ ಸತತ ಮೂರನೇ ಅರ್ಧಶತಕದ ಹೊರತಾಗಿಯೂ ಭಾರತ ತಂಡ ಅಫ್ಘಾನಿಸ್ತಾನ ವಿರುದ್ಧದ ವಿಶ್ವಕಪ್‌ ಪಂದ್ಯದಲ್ಲಿ ನಿರೀಕ್ಷಿತ ಸ್ಕೋರ್ ಬಂದಿಲ್ಲ.

Advertisement

ಟಾಸ್ ಜಯಿಸಿದ ಕೊಹ್ಲಿ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಭಾರತ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 224 ರನ್ ಗಳಿಸಿತು.

ಭಾರತದ ಪರ ಕೊಹ್ಲಿ ಸರ್ವಾಧಿಕ ಸ್ಕೋರ್(67, 63 ಎಸೆತ, 5 ಬೌಂಡರಿ) ಗಳಿಸಿದರೆ, ಆಲ್‌ರೌಂಡರ್ ಕೇದಾರ್ ಜಾಧವ್(52, 68 ಎಸೆತ,3 ಬೌಂಡರಿ, 1 ಸಿಕ್ಸರ್ )ಕೆಳ ಕ್ರಮಾಂಕದಲ್ಲಿ ತಂಡವನ್ನು ಆಧರಿಸಿದರು.

ಆರಂಭಿಕ ಆಟಗಾರ ರಾಹುಲ್(30), ವಿಜಯ ಶಂಕರ್(29) ಹಾಗೂ ಎಂಎಸ್ ಧೋನಿ(28) ಎರಡಂಕೆಯ ಸ್ಕೋರ್ ಗಳಿಸಿದರು.

ರೋಹಿತ್ ಶರ್ಮಾ 4.2 ನೇ ಓವರ್‌ನಲ್ಲಿ 10 ಎಸೆತ ಎದುರಿಸಿ ಕೇವಲ 1 ರನ್ ಗಳಿಸಿ ನಿರ್ಗಮಿಸಿದರು. ಬಳಿಕ 2ನೇ ವಿಕೆಟ್‌ಗೆ ರಾಹುಲ್‌ರೊಂದಿಗೆ ಕೊಹ್ಲಿ 57 ರನ್ ಹಾಗೂ 3ನೇ ವಿಕೆಟ್‌ಗೆ ವಿಜಯ ಶಂಕರ್‌ರೊಂದಿಗೆ 58 ರನ್ ಸೇರಿಸಿ ಜವಾಬ್ದಾರಿಯಿಂದ ಆಡಿದರು.

ಕೊಹ್ಲಿ 48 ಎಸೆತಗಳಲ್ಲಿ 4 ಬೌಂಡರಿಗಳ ಸಹಿತ 52ನೇ ಅರ್ಧಶತಕ ಸಿಡಿಸಿದರು.  ಇತ್ತೀಚಿನ ವರದಿ ಬಂದಾಗ ಅಫ್ಘಾನಿಸ್ಥಾನ 23 ಓವರ್ ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು 84  ರನ್ ಗಳಿಸಿದೆ

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ವಿಕಸಿತ ಭಾರತಕ್ಕೆ ಕೃತಕ ಬುದ್ಧಿಮತ್ತೆ ಅಡಿಪಾಯ : ಉತ್ಪಾದಕತೆ ಹೆಚ್ಚಳಕ್ಕೆ AI ಸಹಕಾರಿ
February 20, 2026
7:13 AM
by: ಮಿರರ್‌ ಡೆಸ್ಕ್
ಕಡಿಮೆ ದರದಲ್ಲಿ ಅಡಿಕೆ ಆಮದು ಮಾಡಿದರೆ ಸಂಪೂರ್ಣ ಜಪ್ತಿ – ದೆಹಲಿ ಹೈಕೋರ್ಟ್
February 19, 2026
8:46 PM
by: ಮಿರರ್‌ ಡೆಸ್ಕ್
ಅಡಿಕೆ ಕ್ಯಾನ್ಸರ್‌ಕಾರಕ ಅಲ್ಲ – WHOಗೆ ಅಧಿಕೃತ ಮನವಿ ಮಾಡಿದ ಉತ್ತರ ಕನ್ನಡ ಸಂಸದ
February 19, 2026
7:00 AM
by: ದ ರೂರಲ್ ಮಿರರ್.ಕಾಂ
ರೋಸ್ಟೆಡ್ ಅಡಿಕೆ ವರ್ಗೀಕರಣ ಸ್ಪಷ್ಟ | ಹೈಕೋರ್ಟ್ ತೀರ್ಪಿನ ಬಳಿಕ ಹೊಸ ಆದೇಶಕ್ಕೆ CAAR ನಿರಾಕರಣೆ
February 17, 2026
7:29 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror