ಅಮೃತಾಳ ಬಾಳಿಗೆ ನೀವು ಬೆಳಕಾಗುವಿರಾ…!

June 16, 2019
1:00 PM

ಸುಳ್ಯ: ಎಲ್ಲರಂತೆ ಆಟವಾಡಿ ಬೆಳೆಯಬೇಕಾಗಿದ್ದ ಅಮೃತಾಳ ಬಾಳಿಗೆ ಬಲ ಥೋರಾಸಿಕ್ ಸ್ಕೋಲಿಯೋಸಿಸ್ ಭಾದಿಸಿ ಕೆಲ ಸಮಯದಿಂದ ಸಂಕಟ ಪಡುತ್ತಿದ್ದಾಳೆ. ಈಕೆ ಮಾವಿನಕಟ್ಟೆ ಹಿ.ಪ್ರಾ.ಶಾಲೆಯ 5ನೇ ತರಗತಿ ವಿದ್ಯಾರ್ಥಿ.

Advertisement
Advertisement

ದೇವಚಳ್ಳ ಗ್ರಾಮದ ತಳೂರು ಮೆತ್ತಡ್ಕ ನಿವಾಸಿ ಸತೀಶ್ ನಾಯ್ಕ ಮತ್ತು ಗಾಯತ್ರಿ ಯವರ ಮೂವರು ಪುತ್ರಿಯರಲ್ಲಿ ಎರಡನೆಯವಳು. ಕಳೆದ 6 ತಿಂಗಳಿಂದ ಬೆನ್ನು ನೋವು ಆರಂಭವಾಗಿ ಕ್ರಮೇಣ ಬೆನ್ನು ಸಂಪೂರ್ಣ ಬಾಗಿದೆ. ಎಲ್ಲ ಮಕ್ಕಳಂತೆ ಬೆಳೆಯಬೇಕಾಗಿದ್ದ ಅಮೃತಾಳ ಬಾಳಲ್ಲಿ ಕತ್ತಲು ಆವರಿಸಿದೆ. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದರೂ ಪ್ರಯೋಜನವಾಗಿಲ್ಲ. ಇದನ್ನು ಪರೀಕ್ಷಿಸಿದ ಮಂಗಳೂರಿನ ಯೇನಪೋಯ ಆಸ್ಪತ್ರೆಯ ವೈಧ್ಯರು ಸರಿಪಡಿಸುವ ಭರವಸೆ ನೀಡಿದ್ದಾರೆ. ಇದಕ್ಕೆ ಸುಮಾರು 4 ಲಕ್ಷಕ್ಕೂ ಅಧಿಕ ಖರ್ಚು ತಗಲಬಹುದು ಎಂದು ವೈದ್ಯರು ತಿಳಿಸಿರುತ್ತಾರೆ. ಆದರೆ ತೀರ ಬಡತನದಲ್ಲಿರುವ ಇವರ ಪೋಷಕರಿಗೆ ಚಿಕಿತ್ಸೆಗೆ ಬೇಕಾದ ವೆಚ್ಚ ಭರಿಸುವುದು ಅಸಾಧ್ಯವಾಗಿದೆ. ಇದೀಗ ಅಜ್ಜಿ ಜಾನಕಿ ಯವರು ಅಮೃತಾಳ ಬಾಳನ್ನು ಬೆಳಗಲು ತನ್ನಿಂದ ಆದ ಪ್ರಯತ್ನ ಆರಂಭಿಸಿದ್ದಾರೆ. ಇವರ ಜೊತೆ ಸಹೃದಯಿಗಳ ಸಹಾಯ ಹಸ್ತ ಬೇಕಿದೆ. ಹಿಂದಿನಂತೆ ಅಮೃತಾ ನಲಿದಾಡುವಂತಾಗಬೇಕಿದೆ. ಸಹಾಯ ಹಸ್ತ ಚಾಚುವವರು ಜಾನಕಿ ಮೆತ್ತಡ್ಕ  ಮೊ: 7760636927 ಸಂಪರ್ಕ ಮಾಡಬಹುದು.

 

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಡಿಕೆಗೆ ಕೊಳೆರೋಗ ಇದೆಯೇ…? | ಮಾಹಿತಿ ದಾಖಲಿಸಬಹುದೇ…?
July 24, 2025
5:20 PM
by: ದ ರೂರಲ್ ಮಿರರ್.ಕಾಂ
ಅಡಿಕೆಗೆ ಕೊಳೆರೋಗ | ಮಳೆಯಲ್ಲೂ ಇವರು ಔಷಧಿ ಸಿಂಪಡಿಸುತ್ತಾರೆ..!
July 24, 2025
4:42 PM
by: The Rural Mirror ಸುದ್ದಿಜಾಲ
ಕೃಷಿಕರಿಗೆ ಕೈಕೊಟ್ಟ ಹವಾಮಾನ | ಅಡಿಕೆಗೆ ವ್ಯಾಪಕವಾಗಿ ಹರಡಿದ ಕೊಳೆರೋಗ | ರೋಗನಿಯಂತ್ರಣಕ್ಕೆ ಇನ್ನಿಲ್ಲದ ಪ್ರಯತ್ನದಲ್ಲಿ ಅಡಿಕೆ ಬೆಳೆಗಾರರು |
July 24, 2025
10:48 AM
by: ವಿಶೇಷ ಪ್ರತಿನಿಧಿ
ಮಕ್ಕಳಿಗೊಂದು ಪುಟ | ನಮ್ಮದೊಂದು ಬೆಳಕು….
July 3, 2025
10:43 AM
by: ಮಹೇಶ್ ಪುಚ್ಚಪ್ಪಾಡಿ

You cannot copy content of this page - Copyright -The Rural Mirror

Join Our Group