ಅಮೃತಾಳ ಬಾಳಿಗೆ ಬೆಳಕಾಗೋಣ… ಆನ್ ಲೈನ್ ಮೂಲಕವೂ ಸಹಾಯ ಮಾಡಬಹುದು

August 5, 2019
8:00 AM

ಸುಳ್ಯ ತಾಲೂಕಿನ ದೇವಚಳ್ಳ ಗ್ರಾಮದ ತಳೂರು ಮೆತ್ತಡ್ಕದ ನಿವಾಸಿ ಸತೀಶ್ ನಾಯ್ಕ್ ಮತ್ತು ಗಾಯತ್ರಿ ನಾಯ್ಕ ಅವರ ಪುತ್ರಿಗೆ ಶಸ್ತ್ರಚಿಕಿತ್ಸೆಯಾಗಬೇಕಿದೆ. ಈಗ ಅವರಿಗೆ ನೆರವು ಬೇಕಾಗಿದೆ. ಆನ್ ಲೈನ್ ಮೂಲಕವೂ ನೆರವು ನೀಡಬಹುದಾಗಿದ್ದು ಕೋಟೆ ಫೌಂಡೇಶನ್ ಈ ಕಾರ್ಯ ಮಾಡುತ್ತಿದೆ. ಈಗಾಗಲೇ  ದಾನಿಗಳು ಆನ್ ಲೈನ್ ಮೂಲಕ ಸಹಾಯ ಮಾಡಿದ್ದ8ು ಸುಮಾರು 35 ಸಾವಿರಕ್ಕೂ ಅಧಿಕ ಸಂಗ್ರಹವಾಗಿದೆ. ಇನ್ನಷ್ಟು ಸಹಾಯ ಬೇಕಾಗಿದೆ. ಬಾಲಕಿಯೊಬ್ಬಳ ಬದುಕಿಗೆ ಬೆಳಕಾಗಲು ನಮ್ಮ ಇಂದಿನ ಫೋಕಸ್…


 

ಸುಳ್ಯ ತಾಲೂಕು ದೇವಚಳ್ಳ ಗ್ರಾಮದ ತಳೂರು ಮೆತ್ತಡ್ಕ ನಿವಾಸಿ ಸತೀಶ್ ನಾಯ್ಕ ಮತ್ತು ಗಾಯತ್ರಿ ನಾಯ್ಕ ಅವರ ಮೂವರು ಪುತ್ರಿಯರಲ್ಲಿ ಎರಡನೆಯವಳಾದ ಅಮೃತಾ ಕಳೆದ 6 ತಿಂಗಳಿನಿಂದ Thoracic Scoliosis ಎಂಬ ರೋಗಕ್ಕೆ ತುತ್ತಾಗಿದ್ದಳು.

 

 

 

ಬೆನ್ನು ನೋವು ಆರಂಭವಾಗಿ ಕ್ರಮೇಣ ಬೆನ್ನು ಸಂಪೂರ್ಣ ಬಾಗಿದೆ. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರೂ ಪ್ರಯೋಜನವಾಗಿಲ್ಲ. ಇದನ್ನು ಪರೀಕ್ಷಿಸಿದ ಮಂಗಳೂರಿನ ಖಾಸಗಿ ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆಗೆ ಒಳಪಡಿಸುವ ಮೂಲಕ ಸರಿಪಡಿಸುವ ಭರವಸೆ ನೀಡಿದ್ದಾರೆ. ವೈದ್ಯರು ಆಸ್ಪತ್ರೆಯ ಪ್ರಮುಖ ವೆಚ್ಚಗಳನ್ನು ಮಾತ್ರವೇ ಪಡೆದುಕೊಳ್ಳುವುದಾಗಿ ಹೇಳಿದ್ದಾರೆ, ಹೀಗಾದರೂ ಇದಕ್ಕೆ ಸುಮಾರು 3 ಲಕ್ಷಕ್ಕೂ ಅಧಿಕ ಖರ್ಚು ತಗಲಬಹುದು ಎಂದು ವೈದ್ಯರು ತಿಳಿಸಿದ್ದಾರೆ.

 

 

 

ಬಡ ಕುಟುಂಬ ಇದು. ಈಗಾಗಲೇ ಸ್ಥಳೀಯರು ಸಹಾಯ ಮಾಡಿದ್ದಾರೆ. ಶಸ್ತ್ರಚಿಕಿತ್ಸೆಗೆ 3 ಲಕ್ಷ ಹೊಂದಿಸಲು ಕಷ್ಟವಾಗುತ್ತಿದೆ. ಇದನ್ನು ಮನಗಂಡ ಕೋಟೆ ಫೌಂಡೇಶನ್ ಆನ್ ಲೈನ್ ಮೂಲಕ ದಾನಿಗಳ ನೆರವಿಗೆ ಮುಂದಾಗಿದೆ. ಕೋಟೆ ಫೌಂಡೇಶನ್ ಸಾಮಾಜಿಕವಾದ ಹಲವಾರು ಕೆಲಸ ಕಾರ್ಯ ಮಾಡುತ್ತಿದೆ. ಅಮೃಳಾ ಬಾಳಿಗೂ ಬೆಳಕಾಗಲು ಆನ್ ಲೈನ್ ಮೂಲಕ ನೆರವು ಕೇಳಿದೆ. ಪಾರದೆರ್ಶಕವಾದ ಈ ವ್ಯವಸ್ಥೆಯಲ್ಲಿ ಈಗಾಗಲೇ 35 ಸಾವಿರಕ್ಕೂ ಸಂಗ್ರಹವಾಗಿದೆ. ದಾನಿಗಳು ಆನ್ ಲೈನ್ ಮೂಲಕ ನೆರವು ನೀಡಬಹುದಾಗಿದೆ. ಈ ಮೂಲಕ ಅಮೃತಾ ಬಾಳಿಗೆ ಬೆಳಕಾಗಬಹುದು.  ನೆರವು ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೂಲಕ ಹೋಗಿ ಆನ್ ಲೈನ್ ನಲ್ಲಿ  ನೆರವು ನೀಡಬಹುದು.

 

http://all reports and details are in https://www.righttolive.org/rtl/#/user/donate/project-details/21262

 

 

 

 

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ದೇಶಾದ್ಯಂತ ಮುಂಗಾರು ಬಿತ್ತನೆ 1,086 ಲಕ್ಷ ಹೆಕ್ಟೇರ್ ದಾಟಿದೆ – ಕರ್ನಾಟಕದಲ್ಲಿ ಭತ್ತ, ದ್ವಿದಳ ಧಾನ್ಯ ಕೃಷಿ ಕುಸಿತ
September 8, 2026
10:02 PM
by: ದ ರೂರಲ್ ಮಿರರ್.ಕಾಂ
ಜಾನುವಾರುಗಳ ಮೇವಿನ ಕೊರತೆಗೆ ಅಜೋಲಾ ಪರಿಹಾರ – ರಾಜ್ಯದಲ್ಲಿ 12 ಸಾವಿರ ಘಟಕಗಳ ಸ್ಥಾಪನೆಗೆ ಚಾಲನೆ
September 8, 2026
9:38 PM
by: ದ ರೂರಲ್ ಮಿರರ್.ಕಾಂ
‘ಅರ್ಧ ಎಕರೆ ಸಾಕು… ಹಳ್ಳಿಯಲ್ಲೇ ಜೀವನ ಮಾಡಬಹುದು’ ಈ ಮಾತಿನ ಹಿಂದೆ ಇರುವ ದೊಡ್ಡ ಪ್ರಶ್ನೆ ಏನು..?
September 8, 2026
9:43 AM
by: ದ ರೂರಲ್ ಮಿರರ್.ಕಾಂ
ಭಾರತದ ಆಹಾರ ನಾಳೆ ಬೆಳೆಯೋರು ಯಾರು? ರೈತರ ವಯಸ್ಸು ಹೆಚ್ಚುತ್ತಿದೆ, ಯುವಕರು ಕೃಷಿಯಿಂದ ದೂರವಾಗುತ್ತಿದ್ದಾರೆ..!
September 7, 2026
9:38 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror