ಅಮೃತಾಳಿಗೆ ನೆರವು ನೀಡಿದ ಯುವ ಸ್ಪಂದನ ಟ್ರಸ್ಟ್

July 1, 2019
11:00 AM

ಗುತ್ತಿಗಾರು:  ದೇವಚಳ್ಳ ಗ್ರಾಮದ ತಳೂರು ಮಿತ್ತಡ್ಕ ನಿವಾಸಿ ಸತೀಶ್ ನಾಯ್ಕ ಮತ್ತು ಗಾಯತ್ರಿ ಯವರ ಪುತ್ರಿ ಅಮೃತಾಳಿಗೆ ಯುವಸ್ಪಂದನ ಟ್ರಸ್ಟ್ ನೆರವು ನೀಡಿದೆ. ಈಕೆ ಮಾವಿನಕಟ್ಟೆಯ ಸರಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಐದನೇ ತರಗತಿಯ ವಿದ್ಯಾರ್ಥಿನಿ. ಈಕೆಗೆ ಸುಮಾರು 6 ತಿಂಗಳಿಂದ ಥೊರಾಸಿಕ್ ಸ್ಕೂಲ್ ಎಂಬ ರೋಗದಿಂದ ಸಂಕಟ ಪಡುತ್ತಿದ್ದಾಳೆ. ಈ ರೋಗಕ್ಕೆ ಏನೋಪೊಯಾ ಆಸ್ಪತ್ರೆಯ ವೈದ್ಯರು ಸರಿಪಡಿಸುವ ಭರವಸೆ ನೀಡಿರುತ್ತಾರೆ .

ಶಸ್ತ್ರ ಚಿಕಿತ್ಸೆಗೆ ಹಣದ ಕೊರತೆಯಿಂದ ಸಂಘ ಸಂಸ್ಥೆಗಳ ಮೊರೆ ಹೋಗಿರುವ ಯುವತಿಯ ಮನೆಯವರು ನಮ್ಮ ಸಂಸ್ಥೆಗೆ ಧನಸಹಕಾರದ ಬೇಡಿಕೆಗೆ ಸ್ಪಂದಿಸಿ ಸಂಘದ ಸದಸ್ಯರು ಮತ್ತು ಊರ ಪರವೂರ ದಾನಿಗಳಿಂದ ರೂ 6,500 (ಆರು ಸಾವಿರದ ಐನೂರು )‌ ಚೆಕ್ಕನ್ನು ನೀಡುವ ಮೂಲಕ  ಸ್ಪಂದಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಕೆ ಬಿ ನವೀನ್ ಕುಮಾರ್ ,ಉಪಾಧ್ಯಕ್ಷರು ರವೀಶ್ ಮೊಟ್ಟೆ ,ಕಾರ್ಯದರ್ಶಿ ಶರತ್ ಎನ್ ಕೆ ,ನಿರ್ದೇಶಕರಾದ ರಾಜಿತ್ ಕಂದ್ರಪ್ಪಾಡಿ ,ಚರಣ್ ಸಾಯಿ ಮಧುರ ,ಪ್ರಶಾಂತ್ ಬಾಕಿಲ,ಶಿವರಾಮ್ ಮೊಟ್ಟೆ ,ಚಂದ್ರಶೇಖರ್ ಪಾರೆಪಾಡಿ ,ಶ್ರೇಯಸ್ ಮುತ್ಲಾಜೆ ,ಚೇತನ್ ಬಳ್ಳಡ್ಕ ಉಪಸ್ಥಿತರಿದ್ದರು .

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 10-04-2026 | ಕರ್ನಾಟಕ ಹವಾಮಾನ ಅಪ್ಡೇಟ್‌- ಎಪ್ರಿಲ್ 15 ನಂತರ ಮಳೆ …! ಬಿಸಿಲಿನ ಬಿಸಿ ಮುಂದುವರಿಕೆ
April 10, 2026
3:11 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 09-04-2026 | ಕರ್ನಾಟಕದಲ್ಲಿ ಮಳೆ ಸಾಧ್ಯತೆ | ಕರಾವಳಿ–ಮಲೆನಾಡಿನಲ್ಲಿ ಗುಡುಗು ಮಳೆ ಎಚ್ಚರಿಕೆ..!
April 9, 2026
1:23 PM
by: ಸಾಯಿಶೇಖರ್ ಕರಿಕಳ
ದಕ್ಷಿಣ ಒಳನಾಡಿನಲ್ಲಿ ಗುಡುಗು ಮಳೆ ಎಚ್ಚರಿಕೆ : ಕರಾವಳಿಯಲ್ಲಿ ಒಣಹವೆ ಮುಂದುವರಿಕೆ!
April 9, 2026
6:42 AM
by: ಮಿರರ್‌ ಡೆಸ್ಕ್
ಆಟೋ ಗ್ಯಾಸ್ ಕೊರತೆ ವದಂತಿ- ರಾಜ್ಯ ಸರ್ಕಾರದಿಂದ ಸ್ಪಷ್ಟನೆ..!
April 8, 2026
10:24 PM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror