ಪಂಜ:ಸುಪ್ರೀಂಕೋರ್ಟ್ ಆಯೋಧ್ಯಾ ಪ್ರಕರಣಕ್ಕೆ ನೀಡಿರುವಾ ಐತಿಹಾಸಿಕ ತೀರ್ಪನ್ನು ದೇಶದ ಜನರು ನಾನಾ ರೀತಿಯಲ್ಲಿ ಸ್ವಾಗತಿಸುತ್ತಿದ್ದರೆ, ಪಂಜದ ಯುವಕರು ವಿಶೇಷವಾಗಿ ಇಂದು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಪೊಳೆಂಜ ಪಂಜ ಮಾರ್ಗವಾಗಿ ನೆಲ್ಲಿಕಟ್ಟೆ ತನಕ ಮೆರವಣಿಗೆ ನಡೆಯುತ್ತಿದ್ದ ಸಂದರ್ಭದಲ್ಲಿ ಪಂಜದಲ್ಲಿ ಸಿಹಿತಿಂಡಿ ಹಂಚಿ ಭಾವೈಕ್ಯತೆ ಮೆರೆದಿದ್ದಾರೆ.
ಅಯೋಧ್ಯ ವಿಚಾರವೂ ಸೌಹಾರ್ದಯುತವಾಗಿ ಮುಗಿದು ಎರಡು ಧರ್ಮದವರು ಶಾಂತಿ ಕಾಪಾಡಿಕೊಂಡು ಬಂದಂತಹ ಸಂದರ್ಭದಲ್ಲಿ ಪಂಜದ ಸಹೃದಯಿ ಹಿಂದೂ ಸಹೋದರರು ವಿಶೇಷವಾಗಿ ವಿಶೇಷ ರೀತಿಯಲ್ಲಿ ಸಂಭ್ರಮಾಚರಣೆಗೈದು ಆದರ್ಶಪ್ರಾಯರಾಗಿದ್ದಾರೆ.
ಈ ಸಂದರ್ಭದಲ್ಲಿ ಆಶಿತ್ ಕಲ್ಲಾಜೆ, ನಿಧೀಶ್ ಕಕ್ಯಾನ, ರಮೇಶ್ ಪುತ್ಯ ಪಂಜ ಬದ್ರಿಯಾ ಜುಮ್ಮಾ ಮಸೀದಿಯ ಗುರುಗಳಾದ ಝಿಯಾದ್ ಸಾಕಫಿ ಮತ್ತು ಅಧ್ಯಕ್ಷರಾದ ಉಮರ್ ಸಿಗೆಯಾಡಿ, ಅಬ್ಬಾಸ್ ಮುಸ್ಲಿಯಾರ್, ರಫೀಕ್ ಕಬಕ ಮತ್ತು ಸಿದ್ಧೀಕ್ ಪೊಳೆಂಜ, ಚಂದ್ರಶೇಖರ ಕರಿಮಜಲು ದಯಾನಂದ ಏಣ್ಮೂರು, ರೋಹಿತ್ ಚೀಮುಳ್ಳು, ಉದಯ ಪಲ್ಲೋಡಿ, ಭರತ್ ಪಂಜ, ವಸಂತ ಅಡ್ಕ, ರಂಜಿತ್ ಪಂಜ, ಕೀರ್ತನ್ ಪಲ್ಲೋಡಿ ಹಾಗೂ ನೂರಾರು ಮಂದಿ ಉಪಸ್ಥಿತರಿದ್ದರು.