ಅಯೋಧ್ಯೆ ತೀರ್ಪಿಗೆ ಕ್ಷಣಗಣನೆ : ದೇಶದಲ್ಲಿ ಇಂದಿನಿಂದ ಹೊಸ ಅಧ್ಯಾಯ : ಇನ್ನು ಸಾಮರಸ್ಯದ ಪರೀಕ್ಷೆ….

November 9, 2019
8:30 AM

ಶತಮಾನದ ವಿವಾದಕ್ಕೆ ಇಂದು ತೆರೆ ಬೀಳಲಿದೆ. ಅಯೋಧ್ಯೆ ರಾಮಜನ್ಮಭೂಮಿ ಮತ್ತು ಬಾಬರಿ ಮಸೀದಿ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್ ಸಿಜೆಐ ರಂಜನ್ ಗೊಗಾಯ್ ನೇತೃತ್ವದ ಪಂಚ ಪೀಠ ಇಂದು 10.30ಕ್ಕೆ ಐತಿಹಾಸಿಕ ತೀರ್ಪನ್ನು ಪ್ರಕಟಿಸಲಿದೆ. ಈ ಹಿನ್ನೆಲೆಯಲ್ಲಿ  ದೇಶದಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಈ ತೀರ್ಪಿನ ಬಳಿಕ ಸಾಮರಸ್ಯದ ಪರ್ವ ದೇಶದಲ್ಲಿ  ಆರಂಭವಾಗಲಿದೆ ಎಂದು ಧಾರ್ಮಿಕ ಮುಖಂಡರು ಈಗ ಭರವಸೆ ವ್ಯಕ್ತಪಡಿಸಿದ್ದಾರೆ.

ಅಯೋಧ್ಯೆಯ ಈ ವಿವಾದಿತ ಪ್ರದೇಶದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ 1885 ರಲ್ಲಿ ಮೊದಲ ಬಾರಿಗೆ ಚರ್ಚೆ ಆರಂಭವಾಗಿತ್ತು. ಹೀಗಾಗಿ ಸುಮಾರು 135 ವರ್ಷ ವರ್ಷಗಳಿಂದಲೂ ಈ ವಿವಾದ ನಡೆಯುತ್ತಿದ್ದರೂ,  ಸದ್ಯ ಸುಮಾರು 70 ವರ್ಷಗಳಿಂದ ನ್ಯಾಯಾಲಯದಲ್ಲಿ ವಾದ-ವಿವಾದ ನಡೆಯುತ್ತಿದೆ.

ವಿವಾದದ ಕೇಂದ್ರ ಬಿಂದುವಾಗಿರುವ 2.77 ಎಕರೆ ಪ್ರದೇಶದ ಕುರಿತ ತೀರ್ಪನ್ನು ಸುಪ್ರೀಂಕೋರ್ಟ್ ನ  ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್, ನ್ಯಾ.ಎಸ್.ಎ.ಬೋಬ್ಡೆ, ಡಿ. ವೈ.ಚಂದ್ರಚೂಡ್, ನ್ಯಾ.ಅಶೋಕ್ ಭೂಷಣ್ ಮತ್ತು ಎಸ್.ಅಬ್ದುಲ್ ನಜೀರ್ ಅವನ್ನೊಳಗೊಂಡ ಸಾಂವಿಧಾನಿಕ ಪೀಠವು ಪ್ರಕಟಿಸಲಿದೆ.  ಈ ಪ್ರಕರಣದ ಸಂಬಂಧ 40 ದಿನಗಳ ಕಾಲ ಸುಧೀರ್ಘ ವಿಚಾರಣೆ ನಡೆಸಿದ್ದ ಪೀಠವು ಪ್ರಕಟಿಸುವ ತೀರ್ಪು ಮಹತ್ವ ಪಡೆದಿದೆ.

ಈ ಹಿಂದೆ 2010 ರಲ್ಲಿ ಅಲಹಬಾದ್ ಹೈಕೋರ್ಟ್, ಅಯೋಧ್ಯೆಯಲ್ಲಿನ 2.77 ಎಕರೆ ವಿವಾದಿತ ಭೂಮಿಯನ್ನು ಸುನ್ನಿ ವಕ್ಫ್ ಮಂಡಳಿ, ನಿರ್ಮೋಹಿ ಅಖಾರಾ ಹಾಗೂ ರಾಮ್ ಲಲ್ಲಾ ನಡುವೆ ಸಮಾನವಾಗಿ ಹಂಚಿಕೆ ಮಾಡಲು ಅಲಹಬಾದ್ ಹೈಕೋರ್ಟ್ ಆದೇಶಿಸಿತ್ತು. ಈ  ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯ ವಿಚಾರಣೆ ನಡೆದಿತ್ತು.

ವಿವಾದದ ಸಂಕ್ಷಿಪ್ತ ವಿವರ :

ಅಯೋಧ್ಯೆಯು ಹಿಂದೂ ಆರಾಧ್ಯ ದೇವರು ರಾಮನ ಜನ್ಮಭೂಮಿ. ಇಲ್ಲಿ  ರಾಮನ ದೇವಸ್ಥಾನವೂ ಇದೆ ಎಂಬುದು ನಂಬಿಕೆ ಹಾಗೂ ಪುರಾಣಗಳ ಉಲ್ಲೇಖ. ಆದರೆ  ಮೊಘಲ್ ದೊರೆ ಬಾಬರ್ 1528 ರಲ್ಲಿ ಈ ದೇವಸ್ಥಾನದ ಮೇಲೆ ದಾಳಿ ನಡೆಸಿ ಧ್ವಂಸ ಮಾಡಿ ಅಲ್ಲಿ ಮಸೀದಿ ನಿರ್ಮಾಣ ಮಾಡಿದ್ದು ಇದು ಬಾಬರೀ ಮಸೀದಿ ಎಂದು ಹೇಳಲಾಗುತ್ತದೆ. ಈ ಪ್ರದೇಶವು ಉತ್ತರ ಪ್ರದೇಶ ರಾಜ್ಯದ ಫೈಜಾಬಾದ್ ಜಿಲ್ಲೆಯಲ್ಲಿದೆ. ಈ ಜಾಗದಲ್ಲಿ  ದೇವಸ್ಥಾನ ನಿರ್ಮಾಣ ಹಾಗೂ ಮಸೀದಿ ಮತ್ತು ಜಾಗಕ್ಕೆ ಸಂಬಂಧಿಸಿ ವಿವಾದ ಆರಂಭವಾಗಿತ್ತು. 1992 ರ ಡಿಸೆಂಬರ್ 6 ರಂದು ರಾಮ ಕರಸೇವಕರು ಈ ಮಸೀದಿ  ಕೆಡವಿ ಹಾಕಿದರು. ಆ ಬಳಿಕವೂ  2.77 ಎಕರೆ ಭೂಮಿ ಇಷ್ಟು ವರ್ಷಗಳ ಕಾಲ ವಿವಾದದ ಕೇಂದ್ರಬಿಂದುವಾಗಿತ್ತು.

 

 

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕೇರಳಂನಲ್ಲಿ ಶಿಗೆಲ್ಲಾ ಆತಂಕ – ಕೊಲ್ಲಂನಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ಸೋಂಕು ದೃಢ, ಆರೋಗ್ಯ ಇಲಾಖೆ ಅಲರ್ಟ್!
June 12, 2026
6:58 AM
by: ದ ರೂರಲ್ ಮಿರರ್.ಕಾಂ
ರಬ್ಬರ್ ಕ್ಷೇತ್ರಕ್ಕೆ ಹೊಸ ಅವಕಾಶ – ಈಗ ಅಸ್ಸಾಂ ದೇಶದ ಮೂರನೇ ಅತಿದೊಡ್ಡ ರಬ್ಬರ್ ಉತ್ಪಾದಕ ರಾಜ್ಯ
June 11, 2026
7:43 PM
by: ದ ರೂರಲ್ ಮಿರರ್.ಕಾಂ
ಕೇರಳದಲ್ಲಿ ಜೂನ್ 12-13 ರಂದು ಭಾರೀ ಮಳೆ ಎಚ್ಚರಿಕೆ – ಬೆಂಗಳೂರು ಸೇರಿ ಕರ್ನಾಟಕದ ಹಲವು ಭಾಗಗಳಲ್ಲಿ ಉತ್ತಮ ಮಳೆ ಸಾಧ್ಯತೆ
June 11, 2026
4:50 PM
by: ದ ರೂರಲ್ ಮಿರರ್.ಕಾಂ
ಭಾರತೀಯ ಮಾವಿನ ಹಣ್ಣಿಗೆ ನೇಪಾಳ ನಿಷೇಧವಿಲ್ಲ – ಸುಳ್ಳು ವರದಿಗಳಿಗೆ ಭಾರತ-ನೇಪಾಳ ಸರ್ಕಾರಗಳ ಸ್ಪಷ್ಟನೆ
June 11, 2026
10:05 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror