ಅರಬಿ ಸಮುದ್ರದಲ್ಲಿ ವಾಯುಭಾರ ಕುಸಿತ : ಕೇರಳದಲ್ಲಿ ಭಾರೀ ಮಳೆಯೊಂದಿಗೆ ಸುಳಿಗಾಳಿ ಸಾಧ್ಯತೆ

June 10, 2019
9:23 AM

ತಿರುವನಂತಪುರ: ತಡವಾಗಿ ಆಗಮಿಸಿದ ಮುಂಗಾರು ಮಳೆ ಏನಾಗುತ್ತದೆ ? ದುರ್ಬಲವಾಗುತ್ತಾ ? ವೇಗ ಪಡೆಯುತ್ತಾ ? ಈ ಪ್ರಶ್ನೆಗೆ ಕಾರಣ ಇದೆ. ಇದೀಗ  ಅರಬಿ ಸಮುದ್ರದಲ್ಲಿ ಭಾನುವಾರ ಬೆಳಿಗ್ಗಿನಿಂದಲೇ ವಾಯುಭಾರ ಕುಸಿತ ಉಂಟಾಗಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ತೀವ್ರ ತರಹದ ವಾಯುಭಾರ ಕುಸಿತ ಉಂಟಾಗಿ ಅದು ವಾಯು ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದು  ಸುಳಿ ಗಾಳಿಯಾಗಿ ರೂಪುಗೊಳ್ಳಲಿದೆ ಎಂಬ ಸೂಚನೆ ಕೇಂದ್ರ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

Advertisement
Advertisement

ಗಾಳಿಗೆ ಹೆಸರು ನೀಡುವ ಸರದಿ ಈಗ ಭಾರತದ್ದಾಗಿದ್ದು ವಾಯು ಎಂಬ ಹೆಸರು ನೀಡಲಾಗಿದೆ. ಸೋಮವಾರ ರಾತ್ರಿ ವಾಯುಭಾರ ಕುಸಿತ ತೀವ್ರಗೊಳ್ಳಲಿದ್ದು ಅದುವರೆಗೆ ಕೇರಳದ ವಿವಿಧ ಭಾಗಗಳಲ್ಲಿ ಭಾರೀ ಮಳೆಯಾಗಲಿದೆ. ಕರ್ನಾಟಕ, ಗೋವಾ ತೀರಗಳಲ್ಲೂ ಮಳೆಯಾಗುವ ಸಂಭವ ಇದೆ. ಬುಧವಾರದ ವೇಳೆಗೆ ವಾಯುಭಾರ ಕುಸಿತ ಸುಳಿಗಾಳಿಯಾಗಿ ರೂಪಾಂತರಗೊಂಡು ದಕ್ಷಿಣ ಭಾರತದ ತೀರ ಪ್ರದೇಶಗಳಲ್ಲಿ ಭಾರೀ ಮಳೆ ಸುರಿಸುತ್ತದೆಯೇ ಹೊರತು ಗಾಳಿ ಬೀಸಿ ನಾಶ ಉಂಟು ಮಾಡುವುದಿಲ್ಲ ಎಂಬ ಸೂಚನೆ ನೀಡಿದೆ. ಇದೇ ಚಂಡಮಾರುತವಾಗಿ ಪರಿವರ್ತನೆ ಸಾಧ್ಯತೆಯೂ ಇದೆ.

ಈಗ ಭಾರೀ ಮಳೆಯಾಗುವ ಸಂಭವವಿದ್ದರೂ ಈ ಬೆಳವಣಿಗೆ ಮುಂಗಾರು ಮಳೆಯನ್ನು ದುರ್ಬಲಗೊಳಿಸುವ ಆತಂಕ ಇದೆ ಎಂಬುದು ಹವಾಮಾನ ತಜ್ಞರ ಅಭಿಪ್ರಾಯವಾಗಿದೆ. ಸುಳಿಗಾಳಿ ಗುಜರಾತ್ ತೀರದ ಮೂಲಕ ಪಾಕಿಸ್ಥಾನದ ಕರಾಚಿ ಭಾಗಕ್ಕೆ ಸಾಗುವ ಸಂಭವವಿದ್ದು ಅಲ್ಲೂ ಮಳೆಯಾಗಬಹುದು. ಅದು ಭಾರತದ ತೀರ ಪ್ರದೇಶದ ಮಳೆ ಕಡಿಮೆಯಾಗಲು ಕಾರಣವಾಗಬಹುದು ಎಂದು ವಿಶ್ಲೇಷಿಸಲಾಗುತ್ತದೆ.

 

ಮಂಗಳೂರು ಪ್ರದೇಶದಲ್ಲೂ ಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

Advertisement

 

 

Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ವಾಯುಭಾರ ಕುಸಿತ | ಕೇರಳದಲ್ಲಿ ಗುಡುಗು ಸಹಿತ ಭಾರೀ ಮಳೆ ಸಾಧ್ಯತೆ | ಆರು ಜಿಲ್ಲೆಗಳಲ್ಲಿ ಎಲ್ಲೋ ಎಲರ್ಟ್‌ | ರಾಜ್ಯದಲ್ಲೂ ಮಳೆ ಸಾಧ್ಯತೆ |
May 17, 2025
8:27 PM
by: ದ ರೂರಲ್ ಮಿರರ್.ಕಾಂ
ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಬಾಗಲಕೋಟೆ ಜಿಲ್ಲೆಯ  ಶೂರ್ಪಾಲಿಯ ಶ್ರೀಲಕ್ಷ್ಮೀ ನರಸಿಂಹ ದೇವಾಲಯ
May 16, 2025
9:59 PM
by: The Rural Mirror ಸುದ್ದಿಜಾಲ
ಡೆಂಘೀ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಅಗತ್ಯ ಕ್ರಮಕೈಗೊಳ್ಳಲು ಸರ್ಕಾರದ ಸೂಚನೆ
May 16, 2025
9:43 PM
by: The Rural Mirror ಸುದ್ದಿಜಾಲ
ವೈಜ್ಞಾನಿಕವಾಗಿ ಕಸ ವಿಲೇವಾರಿಗೆ ಕ್ರಮ ವಹಿಸಲು ಅಧಿಕಾರಿಗಳಿಗೆ ಉಪಲೋಕಾಯುಕ್ತರು ಸೂಚನೆ
May 16, 2025
9:34 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group