ಅರೆಭಾಷೆಯಲ್ಲೊಂದು ವಿನೂತನ ರಂಗಪ್ರಯೋಗ : ಮನ ಸೆಳೆದ ‘ಎಮ್ಮ ಮನೆಯಂಗಳದಿ’

August 3, 2019
2:24 PM
ಸುಳ್ಯ: ಸಮೃದ್ಧ ಭಾಷೆಯಾದ ಅರೆಭಾಷೆಯಲ್ಲಿ ಸೃಷ್ಠಿಯಾಗುವ ನಾಟಕಗಳು ತನ್ನ ಆಕರ್ಷಕ ಅಭಿನಯ, ಮನೋಜ್ಞ ಭಾಷಾ ಪ್ರಯೋಗದ ಮೂಲಕ ಗಮನ ಸೆಳೆಯುತ್ತವೆ.
ರಂಗಭೂಮಿಯಲ್ಲಿ ಅರೆಭಾಷಾ ಪ್ರಯೋಗಗಳು ವಿರಳವಾದರೂ ಬಂದಿರುವ ನಾಟಕಗಳು ಬದುಕಿಗೆ ಆಪ್ತವಾಗಿ ಜನ ಮನ ಗೆಲ್ಲುತ್ತದೆ. ಇದಕ್ಕೆ ಒಂದು ಸೇರ್ಪಡೆ ರಂಗಭೂಮಿಯ ಭರವಸೆಯ ಕಲಾವಿದ ರಂಗಮಯೂರಿ ಕಲಾ ಶಾಲೆಯ ನಿರ್ದೇಶಕ ಲೊಕೇಶ್ ಊರುಬೈಲು ನಿರ್ದೇಶನದ ‘ಎಮ್ಮ ಮನೆಯಂಗಳದಿ’ ಅರೆಭಾಷೆ, ಸಂಸ್ಕೃತಿ ಪ್ರತಿಬಿಂಬಿಸುವ ನಾಟಕ
ಗ್ರಾಮೀಣ ಜನಪದ ಕಥಾಹಂದರದಲ್ಲಿ ರಚಿತವಾದ ರಂಗ ಪ್ರಯೋಗ.  ಬೇಸಾಯ, ಬಿಸುಕಾಣಿಕೆ, ಬೇಟೆ, ಮಾಗಣೆ ಪಟೇಲರು ಮತ್ತು ಸಾಮಾನ್ಯ ರೈತರ ಬಾಂಧವ್ಯ ಜೊತೆಗೆ ಜಾತಿ,ಧರ್ಮ,  ಆಸ್ತಿ ,ಅಂತಸ್ತು ಮೀರಿದ ಪ್ರೇಮ, ಹಿರಿಯರ ಸಮ್ಮುಖದ ವಿವಾಹ , ಮದುವೆಯ  ಸಂಭ್ರಮದ ಜೊತೆಗೆ  ಅರೆಭಾಷಿಕ ಸಂಪ್ರದಾಯದ ಸೋಬಾನೆ ಹಾಡಿನ  ನವೀರಾದ ಸಂಗೀತದ ಜೊತೆಗೆ ಕಚಗುಳಿಯಿಡುವ ಸಂಭಾಷಣೆಗಳಿಗೆ ಅದ್ಭುತವಾಗಿ ರಂಗದ ಮೇಲೆ ಜೀವ ತುಂಬುವ ಕಲಾವಿದರು. ಸುಮಾರು ಒಂದು ಗಂಟೆಗಳ ಕಾಲ ಪ್ರೇಕ್ಷಕರನ್ನು ಹಿಡಿದಿಟ್ಟು ರಂಜಿಸುವ ,”ಎಮ್ಮ ಮನೆಯಂಗಳದಿ”ನಾಟಕಕ್ಕೆ ಸಾಕ್ಷಿಯಾಗಿದ್ದು ಪಂಜದ ಶ್ರೀ ಪಂಚಲಿಂಗೇಶ್ವರ ಸಭಾಂಗಣ.
ರಂಗದಲ್ಲಿ ಭವಾನಿ ಶಂಕರ್ ಅಡ್ತಲೆ, ಶಿವಪ್ರಸಾದ್ ಆಲೆಟ್ಟಿ, ದೇವಿಪ್ರಸಾದ್ ಕಾಯರ್ತೋಡಿ, ಪುಷ್ಪರಾಜ್ ಗೋಳಿತೊಟ್ಟು,ಸಂಪ್ರೀತಾ ರೈ ಕಾಯರ್ತೋಡಿ,ಶಶಿಕಾಂತ್ ಮಿತ್ತೂರು, ಶ್ವೇತಾ ಕೇರ್ಪಳ, ರಕ್ಷಿತ್ ಉಬರಡ್ಕ,  ಗಾನ, ಅಶ್ವಿನಿ ಪೇರಾಲು, ಮೋಕ್ಷಿತ್ ಕನಕಮಜಲು,  ಜವಾಹರ್ ಕೊಯಿಂಗಾಜೆ,ಜೈದಿಪ್, ಕೇಶವ ಪ್ರಸನ್ನ ಮನೋಜ್ಞ ಅಭಿನಯ ಪ್ರದರ್ಶಿಸಿದರು. ನೇಪಥ್ಯದಲ್ಲಿ ಶುಭದಾ .ಆರ್. ಪ್ರಕಾಶ್, ಮೇಘಕೃಷ್ಣ ಕಾಯರ್ತೋಡಿ, ಲೋಹಿತಾಶ್ವ ಪರಮಂಡಲ, ಕಮಲಾಕ್ಷ ಆಚಾರ್ಯ, ವಿಜಯಕುಮಾರ್ ಮಯೂರಿ
ಸಹಕರಿಸಿದರು.
ಕರ್ನಾಟಕ ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿ ಮತ್ತು ಜೇಸಿಐ ಪಂಜ ಕಾರ್ಯಕ್ರಮ ಪ್ರಾಯೋಜಿಸಿದ್ದರು. ಲೋಕೇಶ್ ಊರುಬೈಲು ನಿರ್ದೇಶನದ ಅರೆಭಾಷೆ ನಾಟಕ ‘ಮಾಯಕ’ ವು ಹತ್ತಾರು ಪ್ರದರ್ಶನ ಕಂಡು ಜನ ಮನ ಗೆದ್ದಿತ್ತು.
Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ವಳಲಂಬೆಯಲ್ಲಿ ಯಕ್ಷಗಾನ | ಯಕ್ಷಗಾನ ಕಲಾವಿದ ಉಬರಡ್ಕ ಉಮೇಶ್ ಶೆಟ್ಟಿಯವರಿಗೆ ಗೌರವಾರ್ಪಣೆ | ಕಲಾವಿದರನ್ನು ಗೌರವಿಸುವುದು ಉತ್ತಮ ಕೆಲಸ -ಹರೀಶ್ ಬಳಂತಿಮೊಗರು |
May 14, 2024
10:05 PM
by: ದ ರೂರಲ್ ಮಿರರ್.ಕಾಂ
ಮೇ.11 ವಳಲಂಬೆಯಲ್ಲಿ ಯಕ್ಷಗಾನ ಬಯಲಾಟ | ಕಲಾವಿದ ಉಬರಡ್ಕ ಉಮೇಶ್‌ ಶೆಟ್ಟಿಯವರಿಗೆ ಗೌರವಾರ್ಪಣೆ |
May 7, 2024
3:13 PM
by: ದ ರೂರಲ್ ಮಿರರ್.ಕಾಂ
ಕನ್ನಡದ ಎರಡು ಭಾರೀ ಬಜೆಟ್ ಸಿನಿಮಾಗಳು ಒಂದೇ ದಿನ ಶೂಟಿಂಗ್ ಆರಂಭ | ‘ಕಾಂತಾರ’ ಪ್ರೀಕ್ವೆಲ್ ಶೂಟಿಂಗ್ ದಿನವೇ ‘ಟಾಕ್ಸಿಕ್’ ಶೂಟಿಂಗ್ ಶುರು
April 12, 2024
8:42 PM
by: The Rural Mirror ಸುದ್ದಿಜಾಲ
ವಿಕಿಮೀಡಿಯ ಸಮಿತ್‌ 2024 | ಭರತೇಶ ಅಲಸಂಡೆಮಜಲು ಆಯ್ಕೆ
April 8, 2024
11:45 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror