ಸುಳ್ಯ: ಸುಳ್ಯದಲ್ಲಿ ಈಗಾಗಲೇ ಪ್ರಸಿದ್ಧಿ ಪಡೆದಿರುವ ಮಂಗಳೂರು ಫರ್ನೀಚರ್ಸ್ ಸಂಸ್ಥೆಯ ನೂತನ ಅಲಂಕಾರಿಕ ದೀಪಗಳ ಮಳಿಗೆ ‘ಮಂಗಳೂರು ಶೋ ಲೈಟ್ಸ್’ ಸುಳ್ಯ ಶ್ರೀರಾಮ್ ಪೇಟೆಯಲ್ಲಿರುವ ಶ್ರೀದುರ್ಗಾ ಕಾಂಪ್ಲೆಕ್ಸ್ನಲ್ಲಿ ಅಕ್ಟೋಬರ್ 6 ರವಿವಾರದಂದು ಉದ್ಘಾಟನೆಗೊಂಡಿತು.
ಮಂಗಳೂರು ಶೋ ಲೈಟ್ಸ್ ನೂತನ ಮಳಿಗೆಯನ್ನು ಸುಳ್ಯ ತಹಶೀಲ್ಧಾರ್ ಹಾಗೂ ತಾಲೂಕು ದಂಡಾಧಿಕಾರಿ ಎನ್.ಎ ಕುಂಞ ಅಹಮ್ಮದ್ ಉದ್ಘಾಟಿಸಿ ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಸುಧಾಕರ ರೈ, ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎನ್.ಎ. ರಾಮಚಂದ್ರ, ಎಂ.ಬಿ. ಫೌಂಡೇಶನ್ ಅಧ್ಯಕ್ಷ ಎಂ.ಬಿ. ಸದಾಶಿವ, ಬುಶ್ರಾ ಶಾಲೆಯ ಮಾಲಕರಾದ ಅಝೀಝ್ ಬುಶ್ರಾ, ಸುಳ್ಯ ಬಾರ್ ಕೌನ್ಸಿಲ್ ಅಧ್ಯಕ್ಷ ಎಂ. ವೆಂಕಪ್ಪ ಗೌಡ, ರಾಜೀವ್ ಗಾಂಧಿ ಪ್ರತಿಷ್ಠಾನ ರಾಜ್ಯಾಧ್ಯಕ್ಷ ಟಿ.ಎಂ. ಶಹೀದ್, ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಸ್. ಸಂಶುದ್ದೀನ್, ಜಿಲ್ಲಾ ವಖ್ಫ್ ಬೋರ್ಡ್ ಸದಸ್ಯ ಕೆ.ಎಂ. ಮುಸ್ತಫ, ನಗರ ಪಂಚಾಯತ್ ಸದಸ್ಯೆ ಕಿಶೋರಿ ಶೇಟ್, ವೆಂಕಟ್ರಮಣ ಸೊಸೈಟಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ. ವಿಶ್ವನಾಥ್, ಕಶ್ಯಪ್ ಕಾಂಪ್ಲೆಕ್ಸ್ ಮಾಲಕರಾದ ಮೋಹನ್ ಭಟ್, ಆ್ಯಶನ್ ವುಡ್ ಪುತ್ತೂರು ಮಾಲಕರಾದ ಕೆ.ಎಂ. ಇಸ್ಮಾಯೀಲ್, ಶ್ರೀ ದುರ್ಗಾ ಕಾಂಪ್ಲೆಕ್ಸ್ ಮಾಲಕರಾದ ರಾಮಕೃಷ್ಣ ಭಟ್, ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ ನಾಸಿರ್ ಪೆರಾಜೆ ಮೊದಲಾದವರು ಉಪಸ್ಥಿತರಿದ್ದರು.
‘ಮಂಗಳೂರು ಶೋ ಲೈಟ್ಸ್’ ನೂತನ ಮಳಿಗೆಯಲ್ಲಿ ವಿಶಾಲವಾದ ಸ್ಥಳವಿದ್ದು, ವೈವಿಧ್ಯಮಯ ಅಲಂಕಾರಿಕ ದೀಪಗಳ ಅಪಾರ ಸಂಗ್ರಹವಿದೆ. ಗ್ರಾಹಕರಿಗಾಗಿ ಅತಿ ಕಡಿಮೆ ದರದಲ್ಲಿ ದೇಶ ವಿದೇಶಗಳ ಖ್ಯಾತ ಕಂಪೆನಿಗಳ ಉತ್ಪನ್ನಗಳನ್ನು ಒಂದೇ ಸೂರಿನಡಿಯಲ್ಲಿ ಸಂಗ್ರಹ ಮಾಡಲಾಗಿದೆ.
ಗ್ರಾಹಕರಿಗೆ ಸುಲಭವಾಗಿ ತಲುಪಲು ಸುಳ್ಯದಲ್ಲಿ ನೂತನವಾಗಿ ಮಳಿಗೆಯನ್ನು ಆರಂಭಿಸಲಾಗಿದ್ದು, ಆಕರ್ಷಕ ವೈವಿಧ್ಯಮಯ ಲೈಟಿಂಗ್ಸ್ ಹಾಗೂ ಅಲಂಕಾರಿಕ ಉತ್ಪನ್ನಗಳನ್ನು ಇರಿಸಲಾಗಿದೆ. ಗ್ರಾಹಕರು ಮಂಗಳೂರು ಶೋ ಲೈಟ್ಸ್ ಸಂಸ್ಥೆಗೆ ಉತ್ತಮ ಸ್ಪಂದನೆ ನೀಡುವ ಭರವಸೆ ಇದೆ ಎಂದು ಪಾಲುದಾರರಾದ ಅಬ್ದುಲ್ ರಝಾಕ್ ಹಾಗೂ ಮಹಮ್ಮದ್.ಕೆ ಆಶಾಭಾವನೆ ವ್ಯಕ್ತಪಡಿಸಿದರು.