ಅಲೆಕ್ಕಾಡಿ: ಅಲೆಕ್ಕಾಡಿ ಮುರುಳ್ಯದ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2019-20ನೇ ಶೈಕ್ಷಣಿಕ ವರ್ಷದಲ್ಲಿ ಪ್ರಾರಂಭವಾಗಲಿರುವ ಆಂಗ್ಲ ಮಾಧ್ಯಮ ಪೂರ್ವ ಪ್ರಾಥಮಿಕ ಶಾಲೆಯ ಪೂರ್ವಭಾವಿ ಸಭೆ ಹಾಗೂ ಸಮಿತಿ ರಚನೆ ಮಾಡಲಾಯಿತು.
ಆಲಂಕಾರು ಸ.ಹಿ.ಪ್ರಾ ಶಾಲೆಯ ಮುಖ್ಯೋಪಾಧ್ಯಾಯ ನಿಂಗರಾಜು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಪೂರ್ವ ಪ್ರಾಥಮಿಕ ಶಾಲೆಯ ಆರಂಭಿಕ ಸವಾಲುಗಳು ಹಾಗು ಪರಿಹಾರದ ಬಗ್ಗೆ ಮಾಹಿತಿ ನೀಡಿದರು. 5 ಲಕ್ಷ ರೂ ವೆಚ್ಚದಲ್ಲಿ ಸರಕಾರಿ ಆಂಗ್ಲ ಮಾಧ್ಯಮ ಪೂರ್ವ ಪ್ರಾಥಮಿಕ ಶಾಲೆ ಆರಂಭಗೊಳ್ಳುತ್ತಿದ್ದು, ಸಮಾನ ಶಿಕ್ಷಣ ಎನ್ನುವ ಧ್ಯೇಯದೊಂದಿಗೆ 4 ವರ್ಷ 5 ತಿಂಗಳು ತುಂಬಿದ ಮಕ್ಕಳಿಗೆ ಈ ತರಗತಿಗಳನ್ನು ನಡೆಸಲಾಗುವುದು.
ಸುಮಾರು 20 ಗ್ರಾಮಸ್ಥರು ತಮ್ಮ ಮಕ್ಕಳನ್ನು ದಾಖಲಿಸುವ ಹಾಗೂ ಯೋಜನೆಗೆ ಧನಸಹಾಯ ಮಾಡುವ ಭರವಸೆಯನ್ನು ನೀಡಿದರು. ನಿವೃತ್ತ ಶಿಕ್ಷಕ ಮಿಲ್ಕ್ ಮಾಸ್ಟರ್ ರಾಘವ ಗೌಡ 1 ಲಕ್ಷ ರೂ ದೇಣಿಗೆ ನೀಡುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್‍ಡಿಎಂಸಿ ಅಧ್ಯಕ್ಷೆ ಮಧು ಪಿ.ಆರ್ ವಹಿಸಿದ್ದರು. ಮುಖ್ಯ ಶಿಕ್ಷಕಿ ಚಂದ್ರಿಕಾ ಬಿ., ವಲಯ ಸಂಪನ್ಮೂಲ ವ್ಯಕ್ತಿ ಜಯಂತ ಕೆ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬಾಲಕೃಷ್ಣ ಪೂಜಾರಿ ನೂಜಾಡಿ, ವೆಂಕಪ್ಪ ಗೌಡ, ಭುವನಮಣಿ, ವಾರಿಜಾ, ದಾಮೋದರ ಗೌಡ, ಸುಂದರ ಗೌಡ ಪಿಲಿಕುಂಜೆ, ಸುಪ್ರಿಯಾ ವಸಂತ್‍ಕುಮಾರ್, ಲಕ್ಷ್ಮೀಶ ಕೇರ್ಪಡ, ಜಲಜಾ ಶೆಟ್ಟಿ ಲಂಡನ್, ಐತಪ್ಪ ಅಲೆಕ್ಕಾಡಿ, ಸುಶಾಂತ್ ಅಲೆಕ್ಕಾಡಿ, ಉಪಸ್ಥಿತರಿದ್ದರು.ಸಹಶಿಕ್ಷಕಿ ನಳಿನಾಕ್ಷಿ ಕಾರ್ಯಕ್ರಮ ನಿರೂಪಿಸಿದರು.
ಆಂಗ್ಲ ಮಾಧ್ಯಮ ಪೂರ್ವ ಪ್ರಾಥಮಿಕ ಶಾಲಾ ಸಮಿತಿಯ ಅಧ್ಯಕ್ಷರಾಗಿ ಅವಿನಾಶ್ ದೇವರಮಜಲು, ಗೌರವಾಧ್ಯಕ್ಷರಾಗಿ ಸುದೇಶ್ ರೈ ಅಲೆಕ್ಕಾಡಿ, ಸುಂದರ ಗೌಡ, ಉಪಾಧ್ಯಕ್ಷರಾಗಿ ಐತ್ತಪ್ಪ ಅಲೆಕ್ಕಾಡಿ, ಕಾರ್ಯದರ್ಶಿಯಾಗಿ ಮಧು ಪಿ.ಆರ್ ಆಯ್ಕೆಯಾದರು.