ಅವಳು ಬದುಕುತ್ತಿದ್ದಾಳೆ

July 10, 2019
11:00 AM
ಅವಳು ಬದುಕುತಿದ್ದಾಳೆ
ಅವಳಿಗಾಗಿ ಅಲ್ಲ…..
ಕಷ್ಟದ ಕದ ತೆರೆದಿದೆ
ಸಹನೆಯ ಕಟ್ಟೆಯೊಡೆದಿದೆ..
ಈ ಬದುಕು ಅವಳಿಗಾಗಿ ಅಲ್ಲ…!
ಕರಿಮಣ್ಣ ಹಗಲಿರುಳು ಹದ ಮಾಡುತಿಹಳು
ಹೊನ್ನ ಬೆಳೆಯ ಕಾಣುವಾಸೆಯಲಿ
ಆಸರೆಗೊಂದು ಸೂರು,ಹಸಿವಿಗಾಗಿ ಅನ್ನ
ಇನ್ನೇನು ಕಂಡವಳಲ್ಲ ಅವಳು
ನಿಜ!ಈ ಬದುಕು ಅವಳಿಗಾಗಿ ಅಲ್ಲ
ತುಸು ವಿಶ್ರಾಂತಿಯಿರದ ಬದುಕಲಿ ನೆಮ್ಮದಿಯು ಕನಸು
ಮರೆಮಾಚಿಹಳು ಸೆರಗಿನ ಮರೆಯಲ್ಲಿ ಕಣ್ಣೀರು
ಕಾಲಿಗೆ ಚಕ್ರ ಕಟ್ಟಿಕೊಂಡವಳಂತೆ
ಹಗಲಿರುಳ ದುಡಿಮೆಯೇ ಅವಳ ಬದುಕು..
ನಿಜ!ಅವಳ ಬದುಕು ಅವಳಿಗಾಗಿ ಅಲ್ಲ..
ತನ್ನೊಡನೆ ಸಪ್ತಪದಿಯ ತುಳಿದಾತ.
ಕಷ್ಟದಲಿ ಜೊತೆಯಿರುವೆನೆಂದು ವಚನ ಗೈದಾತ
ಸುಖವ ಅರಸಿ ಬಂದಾಕೆಗೆ ಕಷ್ಟದ ಬಾಗಿಲನು ತೆರೆದಾತ ಅವನೊಬ್ಬ ಹೆಂಡಕುಡುಕ
ನಿಜ!ಈ ಬದುಕು ಅವಳಿಗಾಗಿ ಅಲ್ಲ
ಅವರಿವರ ಚುಚ್ಚುಮಾತಿಗೆ ಕಿವಿಮುಚ್ಚಿ
ಗಂಡನ ಕುಡುಕತನದಾಟಕ್ಕೆ ಸೋತು ಕುಸಿಯದೆ
ಸೆರಗ ಮರೆಯಲ್ಲಿ ಮಕ್ಕಳ ಮರೆಮಾಚಿ ಸನ್ಮಾರ್ಗದಿ ನಡೆಸಿದಾಕೆ
ನಿಜ!ಈ ಬದುಕು ಅವಳಿಗಾಗಿ ಅಲ್ಲ
ತಂದೆಯಾದವ ಜವಬ್ಧಾರಿ ಮರೆತಾಗ
ಹೆಂಡಕುಡಿವುದೊಂದೇ ನಿತ್ಯ ಕಾಯಕ ಎಂದಾಗ
ತನ್ನುದರದ ಕುಡಿಗಳಿಗಾಗಿ ಬದುಕ ಸವೆಸಿದಾಕೆ…
ತನ್ನ ಕನಸುಗಳ ಕೊಂದು ಬದುಕಿದಾಕೆ
ನಿಜ! ಅವಳ ಬದುಕು  ಅವಳಿಗಾಗಿ ಅಲ್ಲ…..
Advertisement
Advertisement

Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಅಪೂರ್ವಚೇತನ್ ಪೆರಂದೋಡಿ

ಶಿಕ್ಷಕಿ

ಇದನ್ನೂ ಓದಿ

ತಾಪಮಾನ – ಬರಗಾಲ – ಪೆನ್ ಡ್ರೈವ್ ಮತ್ತು ಸೆಕ್ಸ್… ಯಾವುದು ನಮ್ಮ ಆದ್ಯತೆಯಾಗಬೇಕು……. |
May 2, 2024
6:51 AM
by: ವಿವೇಕಾನಂದ ಎಚ್‌ ಕೆ
ತಾಪಮಾನದಿಂದ ಅಡಿಕೆ ಕೃಷಿ ರಕ್ಷಣೆ | ಗೋವು ಹಾಗೂ ಗೋಉತ್ಪನ್ನ ಪರಿಣಾಮಕಾರಿ ಹೇಗೆ..? | ಗೋ ಆಧಾರಿತ ಕೃಷಿಯ ಬಗ್ಗೆ ಜಾಗೃತಿ ಏಕೆ ಬೇಕು ?
May 2, 2024
6:38 AM
by: ಮುರಳಿಕೃಷ್ಣ ಕೆ ಜಿ
ಜೀವಕ್ಕೇ ಅಮೃತ – ಜೀವಾಮೃತ | ಜೀವಾಮೃತವು ಗಿಡ-ಮರಗಳನ್ನು ಬಿಸಿ ಮತ್ತು ಬರ, ನೀರಿನ ಕೊರತೆಯ ಸಹಿಷ್ಣುತೆ ಹೆಚ್ಚಿಸುತ್ತದೆ | |
May 1, 2024
5:44 PM
by: The Rural Mirror ಸುದ್ದಿಜಾಲ
ನಮ್ಮ ಮಕ್ಕಳಿಗಾಗಿ ಒಂದು ನೀತಿ ಕಥೆ | ಸಾಧ್ಯವಾದರೆ ಇದನ್ನು ಮಕ್ಕಳಿಗೆ ಓದಿ ಹೇಳಿ ಅಥವಾ ಓದಲು ಹೇಳಿ |
May 1, 2024
4:34 PM
by: ವಿವೇಕಾನಂದ ಎಚ್‌ ಕೆ

You cannot copy content of this page - Copyright -The Rural Mirror