ಆ.31 : ಮುಕ್ಕೂರಿನಲ್ಲಿ ಹತ್ತರ ಹುತ್ತರಿ ಸಂಭ್ರಮ; ಅಖಿಲಾ, ಮಂದಾರ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ

August 24, 2019
4:19 PM

ಬೆಳ್ಳಾರೆ : ಮುಕ್ಕೂರು ಕುಂಡಡ್ಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ದಶಮಾನೋತ್ಸವ ಪ್ರಯುಕ್ತ ಆ.31 ರಂದು ರಾತ್ರಿ ಹತ್ತರ ಹುತ್ತರಿ ಸಮಾರಂಭವುಮುಕ್ಕೂರು ಶಾಲಾ ವಠಾರದಲ್ಲಿ ನಡೆಯಲಿದೆ.

ಸಂಜೆ 6.45 ಕ್ಕೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಉದ್ಘಾಟಿಸಲಿದ್ದಾರೆ. ಪುತ್ತೂರು ಸ.ಮಹಿಳಾ ಪದವಿ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ತ ಡಾ|ನರೇಂದ್ರ ರೈ ದೇರ್ಲ ಪ್ರಧಾನ ಭಾಷಣ ಮಾಡಲಿದ್ದಾರೆ. ತಹಶೀಲ್ದಾರ್ ಕುಂಞಿ ಅಹ್ಮದ್ ಸಮ್ಮಾನ ನೆರವೇರಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ, ಬೆಳ್ಳಾರೆ ಪೊಲೀಸ್ ಠಾಣಾ ಎಸ್‌ಐ ಈರಯ್ಯ ಡಿ.ಎನ್., ಬೆಟ್ಟಂಪಾಡಿ ಸ.ಪ್ರ.ದ.ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ|ಪೊಡಿಯಾ, ಡಿಸಿಸಿ ಬ್ಯಾಂಕ್ ಮಾರಾಟಾಧಿಕಾರಿ ಸಂತೋಷ್ ಕುಮಾರ್ ಮರಕ್ಕಡ, ಶಿಕ್ಷಕಿ ಲಲಿತಾ, ವಸಂತಿ ಭಾಗವಹಿಸಲಿದ್ದಾರೆ.

ಈ ಸಂದರ್ಭ ವಿವಿಧ ಕ್ಷೇತ್ರದಲ್ಲಿ ಸಾಧನೆ ತೋರಿದ ಡಾ| ನರಸಿಂಹ ಶರ್ಮಾ ಕಾನಾವು, ಸಂಧ್ಯಾ ಕುಮಾರಿ ಬಿ.ಎನ್., ಜಗನ್ನಾಥ ಪೂಜಾರಿ ಮುಕ್ಕೂರು, ಇಸ್ಮಾಯಿಲ್ ಕುಂಡಡ್ಕ, ಅಶ್ವಿನಿ ಕೋಡಿಬಲು, ಯಶೋಧಾ ಬೀರುಸಾಗು, ಕೊರಗ್ಗು ಅನವುಗುಂಡಿ, ಕಂಜೋಲಿ ಅವರಿಗೆ ಸಮ್ಮಾನ ನಡೆಯಲಿದೆ.

ಶೈಕ್ಷಣಿಕ ಸಾಧಕರಾದ ಸಿಂಧೂ ಎನ್.ಎಸ್ ನೀರ್ಕಜೆ, ಸ್ಪುರಣ್ ರೈ ಎ ಕಾಪು, ರಕ್ಷಿತಾ ಕೆ ಕಾನಾವು ಕಜೆ, ಶ್ರಾವ್ಯ ರೈ ಪೂವಾಜೆ, ರುಮೈಝಾ ಮುಕ್ಕೂರು, ಕವನ್ ಕಂಡಿಪ್ಪಾಡಿ, ಸೃಜನ್ ರೈ ಕಾನಾವು ಹೊಸೊಕ್ಲು, ಅನ್ವಿತಾ ಕಾನಾವುಜಾಲು, ಸ್ವಾತಿ ಪಿ ಜಾಲು, ತನ್ವಿ ಡಿ ತೋಟ ಮರಿಕೇಯಿ, ಶರಿಕ್ ಮುಕ್ಕೂರು ಅವರನ್ನು ಗೌರವಿಸಲಾಗುವುದು.

Advertisement

ಸಾಂಸ್ಕೃತಿಕ ಸಮಾರಂಭದಲ್ಲಿ ಮುಕ್ಕೂರು ಅಂಗನವಾಡಿ ಮತ್ತು ಶಾಲಾ ಮಕ್ಕಳಿಂದ ವಿವಿಧ ಕಾರ್ಯಕ್ರಮ, ಅವನಿ ಕೋಡಿಬೈಲು ಅವರಿಂದ ಭರತನಾಟ್ಯ, ತ್ರಿನಯನ ನಾಟ್ಯಾಲಯದ ವಿದುಷಿ ಆರಾಽತಾ ಕಾಯರ್‌ಮಾರ್ ಅವರಿಂದ ಭರತನಾಟ್ಯ, ಕನ್ನಡ ಕೋಗಿಲೆ ಖ್ಯಾತಿಯ ಅಖಿಲಾ ಪಜಿಮಣ್ಣು ಮತ್ತು ತಂಡದಿಂದ ಗಾನಯಾನ ಸಂಗೀತ ರಸಸಂಜೆ ಹಾಗೂ ಸುಂದರ ರೈ ಮಂದಾರ ಅಭಿನಯದ ಬಲೆ ತೆಲಿಪಾಲೆ ಕಾಮಿಡಿ ಕಾರ್ಯಕ್ರಮ ಪ್ರದರ್ಶನಗೊಳ್ಳಲಿದೆ.

Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಅರಣ್ಯ ಉಳಿದರೆ ಮಾತ್ರ ಭೂಮಿ ಉಳಿಯಲು ಸಾಧ್ಯ – ವನ್ಯಜೀವಿ ಸಪ್ತಾಹ ಸಮಾರೋಪದಲ್ಲಿ ಮುಖ್ಯಮಂತ್ರಿ
October 9, 2025
7:05 AM
by: The Rural Mirror ಸುದ್ದಿಜಾಲ
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಹೊಸದಾಗಿ 900 ಬಸ್ ಗಳು ಸೇರ್ಪಡೆ
October 9, 2025
7:01 AM
by: The Rural Mirror ಸುದ್ದಿಜಾಲ
ಗದಗದಲ್ಲಿ ಶೇಂಗಾ ಹುಟ್ಟುವಳಿ  ಖರೀದಿಸಲು ಪ್ರತಿ ಕ್ವಿಂಟಾಲ್ ಗೆ 7263 ರೂಪಾಯಿ ದರ ನಿಗದಿ
October 9, 2025
6:57 AM
by: The Rural Mirror ಸುದ್ದಿಜಾಲ
ಸರ್ಕಾರದಿಂದ 200 ಕಾಲು ಸಂಕ ನಿರ್ಮಾಣದ ಗುರಿ
October 9, 2025
6:54 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group