ಆಕಾಶದತ್ತ ಒಮ್ಮೆಗಮನಿಸಿ ಅಚ್ಚರಿಯ ನೋಡಿ……….

July 24, 2020
11:04 AM

ಆಕಾಶ ಯಾವಾಗಲೂ ಅಚ್ಚರಿಯ ತಾಣ . ಕುತೂಹಲ ಕೆರಳಿಸುವ ಲೋಕ. ಕೊನೆ ಮೊದಲಿಲ್ಲದ ಆಕರ್ಷಣೆ.  ಬೆಳದಿಂಗಳಿಲ್ಲದ ರಾತ್ರಿಯಲ್ಲಿ  ಮನೆಯಂಗಳದಲ್ಲಿ ಮಲಗಿ ಆಕಾಶ ನೋಡುತ್ತಾ ಕುಳಿತರೆ ಸಮಯ ಹೋದದ್ದೇ ತಿಳಿಯದು.

Advertisement
ಬಾಲ್ಯದಲ್ಲಿ ಅಪ್ಪ ತೆಂಗಿನ ಗಿಡಗಳಿಗೆ ಪೈಪ್ ನಲ್ಲಿ ರಾತ್ರಿಯ ಹೊತ್ತು ನೀರು ಹಿಡಿಯುತ್ತಿದ್ದಾಗ ಅವರೊಂದಿಗೆ ನಾನು ,ತಂಗಿ ಇಬ್ಬರೂ ಹೋಗುತ್ತಿದ್ದೆವು. ಮಿನುಗುವ ನಕ್ಷತ್ರ, ಹೊಳೆಯುವ ಗ್ರಹಗಳು, ಚಲಿಸುವ ಉಪಗ್ರಹಗಳತ್ತ ಎಂದಿಗೂ ಕುಂದದ ಆಕರ್ಷಣೆ. ಆಕಾಶದಲ್ಲಿ ದಿನನಿತ್ಯ ಅಚ್ಚರಿಯ ಘಟನೆಗಳು ವೈಚಿತ್ರ್ಯ ಗಳು ‌ನಡೆಯುತ್ತಿರುತ್ತವೆ. ಅನಂತವಾಗಿರುವ  ಆಗಸ ದಿನದಿನವೂ  ಹೊಸಪ್ರಪಂಚವನ್ನು , ಕಲ್ಪನೆಯನ್ನು ತೆರೆದಿಡುತ್ತದೆ.  ನೋಡ ನೋಡುವಂತೆಯೇ ಬೀಳವ ಉಲ್ಕೆಗಳು  ನಮ್ಮ ಕನಸಿನ ಹಾದಿಗೆ ಆಶೀರ್ವಾದವೆಂದೇ ಅನಿಸುತ್ತದೆ.
ಅಗಣಿತ ನಕ್ಷತ್ರಗಳ ಲೋಕವೆಂದರೆ‌ ಊಹೆಗೆ  ನಿಲುಕದ  ವಿಸ್ಮಯ ಲೋಕ.
ಮನೆಯಲ್ಲಿ ಸಂಜೆ ಏಳು ಕಾಲು  ಗಂಟೆಯಾಗುತ್ತಿದ್ದಂತೆ  ನಮ್ಮೆಜಮಾನ್ರು ಹೊರಗೆ ಒಳಗೆ ಸುತ್ತಲಾರಂಭಿಸಿದರು. ಟೆರೇಸ್ ಮೇಲೆ  ಹೋಗಿ ಆಕಾಶದತ್ತ ಮುಖ ಮಾಡಿ ಏನೋ ಹುಡುಕುತ್ತಿದ್ದರು.  ಸುಮಾರು ಹೊತ್ತು ನೋಡಿದಾಗ ಅವರು ಕಂಡು ಹಿಡಿದೇ ಬಿಟ್ಟರು. ಅದುವೇ   ನಿಯೋವೈಸ್ ಧೂಮಕೇತು .  ಈ ಶತಮಾನದ ಅಪರೂಪದ ಧೂಮಕೇತು  ದೊಡ್ಡದಾದ ಆಕಾಶಕಾಯ. ನಮ್ಮ ಜೀವಿತಾವಧಿಯಲ್ಲಿ ಸಿಕ್ಕ ದೊಡ್ಡ ಅವಕಾಶ.  ಈಗ ನಾವು  ಆಕಾಶದಲ್ಲಿ ಕಾಣಬಹುದು.  ಬರಿಗಣ್ಣಿಗೇ ಗೋಚರಿಸುತ್ತಿದೆ.  ಸಪ್ತ ಋಷಿ ಮಂಡಲದ ಕೆಳಗೆ ವಾಯವ್ಯ ದಿಕ್ಕಿನಲ್ಲಿ  ನಿಯೋ ವೈಸ್ ಧೂಮಕೇತು ಕಾಣಿಸುತ್ತಿದೆ. ಮೋಡಗಳಿಲ್ಲದ ಶುಭ್ರ ಆಕಾಶದಲ್ಲಿ ಧೂಮಕೇತು  ಸಂಜೆ 7.30 ರ ಸುಮಾರಿಗೆ ಕಾಣಸಿಗುತ್ತದೆ. ಒಂದು ಗಂಟೆಗಳ ಕಾಲ  ನೋಡಲು ಸಾಧ್ಯ.  ಆಗಸ್ಟ್ 15 ರವರೆಗೂ ಈ ದೃಶ್ಯ ಲಭ್ಯ ವಿರಬಹುದೆಂಬ ಅಂದಾಜು.  ಈ ಧೂಮಕೇತು ವನ್ನು ಇನ್ನೊಮ್ಮೆ ನೋಡಬೇಕೆಂದರೆ 6800 ವರ್ಷಗಳು ಬೇಕಾಗುತ್ತದೆ. ಹಾಗಾಗಿ ಮೋಡವಿಲ್ಲದ ಆಕಾಶ ಲಭ್ಯವಾದರೆ  ಧೂಮಕೇತು ವನ್ನು  ತಪ್ಪದೆ ವೀಕ್ಷಿಸಿ ಆನಂದಿಸಿ
 # ಅಶ್ವಿನಿ ಮೂರ್ತಿ ಅಯ್ಯನಕಟ್ಟೆ

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ಭಾರತದ ತೋಟಗಾರಿಕಾ ಹಣ್ಣಿನ ಬೆಳೆಗಳತ್ತ ಚಿತ್ತ | ಜಾಗತಿಕ ಮಾರುಕಟ್ಟೆಗೆ ಭಾರತೀಯ ತಾಜಾ ಹಣ್ಣುಗಳ ಪರಿಚಯ |
April 22, 2025
7:18 AM
by: ದ ರೂರಲ್ ಮಿರರ್.ಕಾಂ
ಮಕ್ಕಳಿಗೆ ಪರಿಸರದ ಬಗ್ಗೆ ಕಾಳಜಿ ಕುರಿತು ಹೆಚ್ಚು ತಿಳುವಳಿಕೆ ನೀಡಬೇಕಾದ ಅಗತ್ಯವಿದೆ
April 22, 2025
6:51 AM
by: The Rural Mirror ಸುದ್ದಿಜಾಲ
ಜಮ್ಮು-ಕಾಶ್ಮೀರದಲ್ಲಿ ಮೇಘಸ್ಫೋಟ | ಆಲಿಕಲ್ಲು, ಗುಡುಗು ಸಹಿತ ಭಾರಿ ಮಳೆ
April 22, 2025
6:30 AM
by: The Rural Mirror ಸುದ್ದಿಜಾಲ
ರೈತರಿಗೆ 400 ಕೋಟಿ ರೂಪಾಯಿ ವೆಚ್ಚದಲ್ಲಿ ಕೃಷಿ ಮತ್ತು ಯಂತ್ರೋಪಕರಣ ವಿತರಣೆ
April 22, 2025
6:22 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group