ಆದರ್ಶ ಗ್ರಾಮ ಬಳ್ಪಕ್ಕೆ ಖಾಯಂ ಪಿಡಿಒ ಇಲ್ಲ….!

September 25, 2019
9:00 PM

ಬಳ್ಪ: ಆದರ್ಶ ಗ್ರಾಮವಾಗಿ ರಾಜ್ಯದಲ್ಲೇ ಗುರುತಿಸಿಕೊಂಡಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬಳ್ಪ ಗ್ರಾಮ ಪಂಚಾಯತ್ ಗೆ ಖಾಯಂ ಪಿಡಿಒ ಇಲ್ಲ …!. ಕಳೆದ ಎರಡು ದಿನಗಳಿಂದ ಬಳ್ಪ ಗ್ರಾಮದಲ್ಲಿ ರೋಗಿಯೊಬ್ಬರನ್ನು ಚಯರ್ ನಲ್ಲಿ  ಕೊಂಡೊಯ್ದ ಸಂಗತಿ ರಾಜ್ಯಮಟ್ಟದಲ್ಲಿ ಚರ್ಚೆಯಾಗುತ್ತಿರುವ ಹಿನ್ನೆಲೆಯಲ್ಲಿ  ಪಿಡಿಒ ಅವರು ಸಿಬಂದಿಗಳನ್ನು ಕಳುಹಿಸಿ ಮಾಹಿತಿ ಸಂಗ್ರಹಿಸಿದ್ದಾರೆ. ಜಿಲ್ಲೆಯ ಅಧಿಕಾರಿಗಳು ವರದಿ ಪಡೆದಿದ್ದಾರೆ. ಆದರ್ಶ ಗ್ರಾಮಕ್ಕೆ ಖಾಯಂ ಆಗಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಇಲ್ಲದೇ ಇರುವುದು ಇನ್ನೊಂದು ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎನ್ನುತ್ತಾರೆ ಜನತೆ.

Advertisement
Advertisement
Advertisement

ಆದರ್ಶ ಗ್ರಾಮ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಬಳ್ಪ ಘೋಷಣೆಯಾದ ಸಂದರ್ಭ ಇದ್ದ ಪಿಡಿಒ ಅವರು ಅಭಿವೃದ್ಧಿ ಕಾರ್ಯದ ರೂಪುರೇಷೆಯ ಬಳಿಕ ವರ್ಗಾವಣೆಯಾಗಿದ್ದರು. ಅದಾದ ನಂತರ ಮತ್ತೊಬ್ಬರು ಪಿಡಿಒ ಬಂದರೆ ಈಗ ಕಳೆದ ಒಂದು ವರ್ಷದಿಂದ ಗುತ್ತಿಗಾರು ಗ್ರಾಮ ಪಂಚಾಯತ್ ಪಿಡಿಒ ಅವರು ಹೆಚ್ಚುವರಿ ಹುದ್ದೆಯಲ್ಲಿ ಎರಡೂ ಕಡೆಯಲ್ಲೂ ಕೆಲಸ ನಿರ್ವಹಿಸುತ್ತಿದ್ದಾರೆ. ಯಾವುದೇ ಗ್ರಾಮದ ಸಮಗ್ರ ಅಭಿವೃದ್ಧಿಗೆ ಗ್ರಾಮ ಮಟ್ಟದಲ್ಲಿ ಅಧಿಕಾರಿಗಳು ಸಕ್ರಿಯವಾಗಿರಬೇಕಾಗಿದೆ. ಆದರೆ ಆದರ್ಶ ಗ್ರಾಮವಾಗಿದ್ದ ಬಳ್ಪದಲ್ಲಿ ಕಳೆದ ಒಂದು ವರ್ಷದಿಂದ ಖಾಯಂ ಪಿಡಿಒ ಇಲ್ಲ …!!

Advertisement

ಒಂದು ಗ್ರಾಮದ ಅಭಿವೃದ್ಧಿಗೆ ಅಧಿಕಾರಿಗಳು , ಜನಪ್ರತಿನಿಧಿಗಳು ಸಕ್ರಿಯವಾಗಿರಬೇಕು. ಆದರೆ ಬಳ್ಪದಲ್ಲಿ ಜನಪ್ರತಿನಿಧಿಗಳು ಸಕ್ರಿಯವಾಗಿದ್ದರೆ ಅಧಿಕಾರಿಗಳು ಸ್ವತ: ವೀಕ್ಷಣೆ ಮಾಡಿ ಅಭಿವೃದ್ಧಿ ಕೆಲಸಕ್ಕೆ ವೇಗ ನೀಡುವ ಕೆಲಸ ಸಾಧ್ಯವೇ ಎಂಬುದು ಪ್ರಶ್ನೆ. ಕಳೆದ ಎರಡು ದಿನಗಳಿಂದ  ರೋಗಿಯೊಬ್ಬರನ್ನು ಚಯರ್ ನಲ್ಲಿ ಹೊತ್ತೊಯ್ದ ಪ್ರಕರಣದಲ್ಲೂ  ಅಧಿಕಾರಿಗಳು ವರದಿ ತರಿಸಿದ್ದಾರೆ. ಅದು ಬಿಟ್ಟರೆ ಯಾವುದೇ ಅಭಿವೃದ್ಧಿ ಕಷ್ಟ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ ಎಂದು ಸ್ಥಳೀಯರು ತಿಳಿಸುತ್ತಾರೆ.

ಇದರ ಜೊತೆಗೆ ಇಲ್ಲಿ 3 ಕಡೆಯಿಂದ ರಸ್ತೆ ಇದೆ, ಆದರೆ ವಾಸ್ತವ ಸ್ಥಿತಿ ಬೇರೆಯೇ ಇದೆ, ಮಾಧ್ಯಮಗಳ ಮೂಲಕ ತಪ್ಪು ಮಾಹಿತಿ ನೀಡಲಾಗಿದೆ. ಜೀಪು ಮೂಲಕ ಸಾಗಬಹುದು , ಕಾರು ಮಾತ್ರಾ ಓಡಾಡುವುದು ಕಷ್ಟ ಎಂದು ಅಧಿಕಾರಿಗಳು ಹೇಳುತ್ತಾರೆ. ಅದರ ಜೊತೆಗೆ ಆದರ್ಶ ಗ್ರಾಮವೆಂದರೆ ರಸ್ತೆಗಳ ಅಭಿವೃದ್ಧಿ ಮಾತ್ರವೇ ಅಲ್ಲ ಎಂದೂ ಹೇಳುತ್ತಾರೆ.

Advertisement

ಈಗ  ಒಂದು ಕಡೆ ಜನತೆ ಇಲ್ಲಿ ರಸ್ತೆ ಸರಿ ಇಲ್ಲ ಎಂದರೆ,  ರಾಜಕೀಯವಾಗಿ ಇನ್ನೊಂದು ವಾದ ಕೇಳಿಬರುತ್ತದೆ,  ರಸ್ತೆ ಸರಿ ಇದೆ, ಕೆಲವೇ ಮೀಟರ್ ದೂರ ಮಾತ್ರವೇ ಸರಿ ಇಲ್ಲ ಎಂಬ ವಾದ ಇದೆ.

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಸಿರಿಧಾನ್ಯ  ಬಳಕೆ  ಕುರಿತು  ಕೃಷಿ ಇಲಾಖೆಯಿಂದ  ಸಿರಿಧಾನ್ಯ ಓಟ
January 19, 2025
10:13 PM
by: The Rural Mirror ಸುದ್ದಿಜಾಲ
ಬೆಂಗಳೂರಿನಲ್ಲಿ ತುಂತುರು ಮಳೆ | ರಾಜ್ಯಾದ್ಯಂತ ಮುಂದಿನ ಐದು ದಿನ ಮಳೆ ಸಾಧ್ಯತೆ
January 19, 2025
10:06 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 19.01.2025 | ಇಂದು ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಕೃಷಿಕರೇ ಇರಲಿ ಎಚ್ಚರ |
January 19, 2025
11:01 AM
by: ಸಾಯಿಶೇಖರ್ ಕರಿಕಳ
ಸರ್ಕಾರದ ಯೋಜನೆಗಳನ್ನು ರೈತರು ಸದುಪಯೋಗಪಡಿಸಿಕೊಳ್ಳುವಂತೆ ಸಚಿವ ಈಶ್ವರ್ ಖಂಡ್ರೆ ಕರೆ
January 19, 2025
7:22 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror