ಆದರ್ಶ ಗ್ರಾಮದ ಬಣ್ಣ ಬಯಲು – ಎಸ್ ಡಿ ಪಿ ಐ

September 27, 2019
9:22 AM

ಸುಳ್ಯ:  ನರೇಂದ್ರ ಮೋದಿ ಮೊದಲ ಬಾರಿಗೆ ಅಧಿಕಾರ ವಹಿಸಿಕೊಂಡ ಸಮಯದಲ್ಲಿ ಆದರ್ಶ ಗ್ರಾಮದ ಪರಿಕಲ್ಪನೆ ಎಂಬ ಹೆಸರಿನ ಬಹುದೊಡ್ಡ ನಾಟಕದ ವಸ್ತುವಾಗಿದೆ.ಅದರಲ್ಲಿ ದ.ಕ ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲ್ ಆಯ್ದುಕೊಂಡ ಸುಳ್ಯ ತಾಲೂಕಿನ ಬಳ್ಪ  ಗ್ರಾಮ ಕೂಡ ಹೊರತಾಗಿಲ್ಲ ಎಂಬ ವಾಸ್ತವ ಇದೀಗ ಜಗಜ್ಜಾಹಿರಾಗಿದೆ ಎಂದು ಎಸ್ ಡಿಪಿಐ ಜಿಲ್ಲಾ ಪ್ರ.ಕಾರ್ಯದರ್ಶಿ ಶಾಹುಲ್ ಎಸ್ ಎಚ್ ಪತ್ರಿಕಾ ಪ್ರಕಟಣೆಯಲ್ಲಿ  ತಿಳಿಸಿದ್ದಾರೆ.

Advertisement
Advertisement
Advertisement

ಅನಾರೋಗ್ಯ ಪೀಡಿತ ಒಬ್ಬ ರೋಗಿಯನ್ನು ರಸ್ತೆ ವ್ಯವಸ್ಥೆ ಇಲ್ಲದೆ ಮರದ ಚಯರ್ ನಲ್ಲಿ ಕೂರಿಸಿ ಹೊತ್ತುಕೊಂಡು ಹೋಗುವಂತಹ ಪರಿಸ್ಥಿತಿ ಕೋಟಿಗಟ್ಟಲೆ ಖರ್ಚು ಮಾಡಿ ನಿರ್ಮಾಣ ಮಾಡಿದ ಬುದ್ದಿವಂತರ ಜಿಲ್ಲೆಯ ಒಂದು ಆದರ್ಶ ಗ್ರಾಮದಲ್ಲಿಯೇ ಇರುವುದಾದರೆ,ಇಡೀ ದೇಶದಲ್ಲಿ ಉಳಿದ ಆದರ್ಶ ಮತ್ತು ಸಾಮಾನ್ಯ ಗ್ರಾಮಗಳ ಅವ್ಯವಸ್ಥೆ ಯಾವ ರೀತಿಯಲ್ಲಿ ಇರಬಹುದು ಎಂದು ಗಂಭೀರವಾಗಿ ಆಲೋಚಿಸಬೇಕಾದ ವಿಚಾರವಾಗಿದೆ. ಕಳೆದ ಐದು ವರ್ಷಗಳಿಂದ ಯಾವುದೇ ಅಬಿವೃದ್ದಿಯಾಗಿಲ್ಲ ಎಂಬ ವಾಸ್ತವ ಇದಾಗಿದೆ.

Advertisement

ಒಂದು ವೇಳೆ ಬಿಜೆಪಿಗೆ ಅಬಿವೃದ್ದಿ ರಾಜಕಾರಣ ಮಾಡುವುದಿದ್ದರೆ ನಳಿನ್ ಕುಮಾರ್ ರಂತಹ ಅಸಮರ್ಥ ವ್ಯಕ್ತಿಯನ್ನು ಸಂಸದರನ್ನಾಗಿ ಮತ್ತು ಬಿಜೆಪಿಯ ರಾಜ್ಯಾದ್ಯಕ್ಷರನ್ನಾಗಿ ಮಾಡಿ ಮತದಾರರಿಗೆ ದ್ರೋಹ ಬಗೆಯುವ ಕೆಲಸ ಮಾಡುತ್ತಾ  ಇರಲಿಲ್ಲ.ಆದುದರಿಂದ ಮತದಾರರು ಮುಂದಿನ ದಿನಗಳಲ್ಲಿ ಬಿಜೆಪಿಯ ಸುಳ್ಳು ಆಶ್ವಾಸನೆ ಮತ್ತು ಭರವಸೆಗಳಿಗೆ ಮಾರುಹೋಗದೆ ಗಂಭೀರವಾಗಿ ಆಲೋಚಿಸಿ ಪರ್ಯಾಯ ರಾಜಕೀಯದ ಬಗ್ಗೆ ಆಲೋಚಿಸಬೇಕೆಂದು ಎಸ್ ಡಿಪಿಐ ಜಿಲ್ಲಾ ಪ್ರ.ಕಾರ್ಯದರ್ಶಿ ಶಾಹುಲ್ ಎಸ್ ಎಚ್  ಹಾಗೂ ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ಪ್ರಕಟಣೆಯಲ್ಲಿ  ತಿಳಿಸಿದ್ದಾರೆ.

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಜ.4 ರಿಂದ ಮಂಗಳೂರಿನಲ್ಲಿ ಗೆಡ್ಡೆಗೆಣಸು-ಸೊಪ್ಪಿನ ಮೇಳ
January 3, 2025
9:57 PM
by: The Rural Mirror ಸುದ್ದಿಜಾಲ
ಜಾಗತಿಕ ತಾಪಮಾನ ಏರಿಕೆ | ಪಶ್ಚಿಮ ಘಟ್ಟಗಳು ಹೇಗೆ ಬದಲಾಗಿವೆ..? | ಕೃಷಿ ಉಳಿವಿಗೆ ಏನು ಮಾಡಬೇಕು..? | 2025 ರಲ್ಲಿ ಏನು ಮಾಡಬಹುದು..?
January 2, 2025
7:23 AM
by: ಮಹೇಶ್ ಪುಚ್ಚಪ್ಪಾಡಿ
ಮಲೇಷ್ಯಾದಿಂದ ಬೆಂಗಳೂರಿಗೆ ಕಳ್ಳ ಸಾಗಣೆಯಾಗುತ್ತಿದ್ದ 379 ವನ್ಯಜೀವಿಗಳ ರಕ್ಷಣೆ
January 2, 2025
6:42 AM
by: The Rural Mirror ಸುದ್ದಿಜಾಲ
ಪಿಎಂ ಫಸಲ್‌‌‌‌ಬಿಮಾ ಯೋಜನೆ ವಿಸ್ತರಣೆ | ಕೇಂದ್ರ ಸಚಿವ ಸಂಪುಟ ಒಪ್ಪಿಗೆ
January 2, 2025
6:34 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror