ಆದರ್ಶ ಶಿಕ್ಷಕ

September 5, 2019
10:30 AM

ಜೀವನದಲ್ಲಿ ಒಂದು ಉನ್ನತವಾದ ಗುರಿಯಿರಬೇಕು. ಆ ಗುರಿಯನ್ನು ತಲುಪಲು ದಾರಿ ತೋರುವಾತನೇ ಗುರುವಾಗುತ್ತಾನೆ. ಗುರುವಿನ ಸ್ಥಾನ ಈ ಸಮಾಜದಲ್ಲಿ ಅತ್ಯುನ್ನತವಾದುದಾಗಿದೆ. ಈ ಗುರು ಪರಂಪರೆಯು ಯಾವಾಗಲೂ ಇತರರಿಗೆ ಆದರ್ಶವಾಗಿರಬೇಕೆಂದೇ ಈ ಸಮಾಜ ಬಯಸುತ್ತದೆ.

Advertisement
Advertisement

ಶಿಕ್ಷಣ ಕ್ಷೇತ್ರದಲ್ಲಿ ಹಿಂದೆಗೂ ,ಇಂದಿಗೂ ಮಹತ್ತರವಾದ ಬದಲಾವಣೆಗಳಾಗಿವೆ. ಶಿಕ್ಷಕನ ಕಾರ್ಯನಿರ್ವಹಣೆಯ ಪರಿಯು ಬದಲಾಗಿದೆ. ಆದರೂ ಈ ಸಮಾಜ ಶಿಕ್ಷಕನನ್ನು ಬದಲಾವಣೆಯ ನೆರಳಿನಲ್ಲಿ ಕಾಣಲು ಇಚ್ಚಿಸುವುದಿಲ್ಲ.ಶಿಕ್ಷಕ ಹಿಂದೆಯೂ, ಇಂದೂ:ಮುಂದೆಯೂ ಇತರರಿಗೆ ಆದರ್ಶವಾಗಿರಬೇಕೆಂದೇ ಈ ಸಮಾಜ ಬಯಸುತ್ತದೆ.

ಈ ಸಮಾಜದಲ್ಲಿ ಬಾಳುತ್ತಿರುವ ಪ್ರತಿಯೊಬ್ಬರೂ ತನಗೆ ಬಾಳಲು ಅವಕಾಶ ಕೊಟ್ಟ ಸಮಾಜಕ್ಕೆ ಋಣಿಯಾಗಿರಬೇಕು.ತನ್ನಿಂದಾದ ಕೊಡುಗೆಗಳನ್ನು ಸಮಾಜಕ್ಕೆ ನೀಡಬೇಕು. ಶಿಕ್ಷಕನಾದವನಿಗೆ ಇದು ದೊರೆತ ಅದ್ಭುತ ಅವಕಾಶವಾಗಿದೆ. ಆತನೊಬ್ಬನೇ ಈ ಸಮಾಜಕ್ಕೆ ಒಳಿತನ್ನು ಬಯಸುವ ಸತ್ಪ್ರಜೆಗಳನ್ನು ಈ ಸಮಾಜಕ್ಕೆ ಕೊಡಬಲ್ಲ. ಆದರೆ ವಿದ್ಯಾರ್ಥಿಗಳನ್ನೇ ಈ ಸಮಾಜದ ಆಸ್ತಿಯನ್ನಾಗಿ ಮಾಡುವ ಚಾಕಚಕ್ಯತೆ ಗುರುವಿನಲ್ಲಿರಬೇಕು.

ಒಬ್ಬ ಆದರ್ಶ ಶಿಕ್ಷಕನು ವಿದ್ಯಾರ್ಥಿಗಳ ಬಾಳಿಗೆ ಕನ್ನಡಿಯಂತಿರಬೇಕು.ಶಿಕ್ಷಕನ ಆದರ್ಶಗಳು ವಿಧ್ಯಾರ್ಥಿಯ ಬಾಳಿನ ಪ್ರತಿಬಿಂಬವಾಗಬೇಕು.ತನ್ನ ಸುಖ ಮತ್ತು ವಿದ್ಯಾರ್ಥಿಗಳ ಒಳಿತು ಎಂಬೆರಡು ವಿಚಾರಗಳು ಬಂದಾಗ ಒಬ್ಬ ಶಿಕ್ಷಕನು ವಿದ್ಯಾರ್ಥಿಗಳ ಒಳಿತಲ್ಲಿ ತನ್ನ ಸುಖವನ್ನು ಕಾಣುವವನಾಗಿರಬೇಕು.ತಾಯಿ ಮಗುವಿಗೆ ನಡಿಗೆ ಕಲಿಸುವಾಗ ತಾನು ಮಗುವಾಗಿ ಕಲಿಸುತ್ತಾಳೆ. ಅಂಥೆಯೇ ಶಿಕ್ಷಕನಾದವನು ವಿದ್ಯಾರ್ಥಿಗಳಿಗೆ ಕಲಿಸುವಾಗ ತಾನು ವಿಧ್ಯಾರ್ಥಿಯಾಗಿ ಕಲಿಯುವ ತುಡಿತ ಹೊಂದಿರಬೇಕು. ವಿದ್ಯಾರ್ಥಿಗಳಿಗೆ ಜ್ಞಾನವನ್ನು ಎರೆಯುವ ಮೊದಲು ತಾನು ಜ್ಞಾನದಾಹವನ್ನು ಹೊಂದಿ ಆ ದಾಹವನ್ನು ನೀಗಿಸಿಕೊಳ್ಳುವಲ್ಲಿ ಸದಾ ಕಾರ್ಯ ಪ್ರವೃತ್ತನಾಗಿರಬೇಕು.

ದೇಶಕ್ಕೆ ಉತ್ತಮ ನಾಗರಿಕರನ್ನು ರೂಪಿಸಿಕೊಡುವಲ್ಲಿ ಶಿಕ್ಷಕರಿಗೆ ಪಾತ್ರ ಅನನ್ಯವಾದುದು.ಒಬ್ಬ ಶಿಕ್ಷಕನ ಜೀವನ ನಿಜಕ್ಕೂ ಸಾರ್ಥಕ್ಯ ಪಡೆಯುವುದು ಸ್ವಸ್ಥ ಸಮಾಜಕ್ಕೆ ಆದರ್ಶ ವ್ಯಕ್ತಿಯನ್ನು ನೀಡಿ ಸಮಾಜದ ಬೇಡಿಕೆಯನ್ನು ಪೂರೈಸಿದಾಗ ಮಾತ್ರ.ಹಲವಾರು ಯಂತ್ರೋಪಕರಣಗಳು ಮಾರುಕಟ್ಟೆಯಲ್ಲಿ ಇದ್ದರೂ ನಾವು ಕೊಳ್ಳುವುದು ಬಳಕೆಗೆ ಯೋಗ್ಯವಾದುದನ್ನೇ ಹಾಗೆಯೇ ಈ ಸಮಾಜವು ಬಯಸುತ್ತಿರುವುದು ಉಪಯುಕ್ತ ವಾದುದನ್ನೇ.. ಅಂತೆಯೇ ಒಬ್ಬ ಶಿಕ್ಷಕ ಸತ್ಪ್ರಜೆಯನ್ನು ನೀಡುವಂತಾಗಬೇಕೇ ಹೊರತು ವಾಸ್ತವತೆಯ ಪರಿಜ್ಞಾನವಿಲ್ಲದ ಕೇವಲ ಅಂಕಗಳನ್ನು ಪಡೆಯುವ ಯಂತ್ರಗಳಂತ ಮಕ್ಕಳನ್ನು ಈ ಸಮಾಜಕ್ಕೆ ನೀಡುವಂತಾಗಬಾರದು.ಈ ಸಮಾಜವು ಗುರುವಿನಿಂದ ಇಂತಹ ಉಡುಗೋರಯನ್ನು ನಿರೀಕ್ಷಿಸಲಾರದು. ಅಂಕದ ಬೆನ್ನತ್ತಿ ಬದುಕಿನ ವಾಸ್ತವತೆಯ ಅರಿವಿಲ್ಲದೆ ಬದುಕುತ್ತಿರುವುದರಿಂದ ಸಮಾಜದ ಒಳಿತು ಸಾಧ್ಯವಿಲ್ಲ. ಸಮಾಜದ ಬೇಡಿಕೆ ಇರುವುದು ಅನಕ್ಷರಸ್ಥರಿಗಾಗಿ ಅಲ್ಲ. ವಿದ್ಯಾವಂತರಿಗಾಗಿ.ಇಂದು ಅಕ್ಷರಸ್ಥರಾಗಿ ಅಂಕ ಪಟ್ಟಿ ಹಿಡಿದು ವಿದೇಶದಲ್ಲಿ ಉದ್ಯೋಗ ಪಡೆದು ಹೆತ್ತವರನ್ನು ಆಶ್ರಮಗಳಿಗೆ ಸೇರಿಸುವುದನ್ನು ಕಂಡಾಗ ” ಹೃದಯಕ್ಕೆ ಶಿಕ್ಷಣ ಸಿಗದೆ ಕೇವಲ ಮೆದುಳಿಗೆ ಶಿಕ್ಷಣ ಸಿಕ್ಕರೆ ಅದು ವ್ಯರ್ಥ ಶಿಕ್ಷಣ ” ಎಂಬ ಅರಿಸ್ಟಾಟಲ್‌ ರ ಮಾತು ನೆನಪಿಗೆ ಬರುತ್ತದೆ. ಶಿಕ್ಷಣ ಎಂಬುದು ಮೌಲ್ಯಗಳ ಆಗರವಾಗಿರಬೇಕು.ಆದರ್ಶ ಶಿಕ್ಷಕನು ಉನ್ನತ ಮೌಲ್ಯಗಳನ್ನು ಮೈಗೂಡಿಸಿಕೊಂಡ ವಿದ್ಯಾರ್ಥಿಗಳನ್ನು ಕೊಡುವಲ್ಲಿ ಕಾರ್ಯ ಪ್ರವೃತ್ತನಾಗಬೇಕು.

Advertisement

ಶಿಕ್ಷಕನು ತನ್ನ ಜ್ಞಾನವನ್ನು ಪುಸ್ತಕಗಳು ಚೌಕಟ್ಟಿನೊಳಗೆ ಬಂಧಿಸಿಡಬಾರದು.ಕೇವಲ ಪುಸ್ತಕದ ವಿಚಾರಗಳನ್ನು ವಿದ್ಯಾರ್ಥಿಗಳ ಮಸ್ತಕದೊಳಗೆ ತುಂಬಿದಾತ ಆದರ್ಶನೆನಿಸಿಕೊಳ್ಳಲಾರ. ಶಿಕ್ಷಕನಾದವನು ಮಕ್ಕಳಿಗೆ ತಂದೆಯೂ ಆಗಬಲ್ಲ,ತಾಯಿಯೂ ಆಗಬಲ್ಲ. ಶಿಕ್ಷಕನ ಕಲ್ಪನೆಗಳು ಸದಾ ಹರಿಯುವ ನೀರಿನಂತಿರಬೇಕು.ತನ್ನೊಳಗೆ ಹುದುಗಿದ್ದ ಜ್ಞಾನವನ್ನು ಸುಜ್ಞಾನದೆಡೆಗೆ ವಿಸ್ತರಿಸುವ ಚಾಕಚಕ್ಯತೆ ಹೊಂದಿರಬೇಕು. ಶಿಕ್ಷಕನು ” ಹೀಗೆ ಇರು” ಎಂದು ಹೇಳಿ ಆದರ್ಶಗಳನ್ನು ಬಿತ್ತುವ ಬದಲು ತನ್ನಲ್ಲೇ ಆದರ್ಶ ಗುಣಗಳನ್ನು ಮೈಗೂಡಿಸಿಕೊಂಡಿರಬೇಕು. ಯಾವಾಗ ಶಿಕ್ಷಕನೇ ಆದರ್ಶ ಬೀಜವಾಗುತ್ತಾನೋ ಆಗ ವಿದ್ಯಾರ್ಥಿಗಳಿಂದ ಆದರ್ಶ ಫಸಲನ್ನು ಪಡೆಯಲು ಸಾಧ್ಯವಾಗುವುದು…

 

Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಅಪೂರ್ವಚೇತನ್ ಪೆರಂದೋಡಿ

ಶಿಕ್ಷಕಿ

ಇದನ್ನೂ ಓದಿ

ಬದುಕು ಪುರಾಣ | ವಿಶ್ವದ ಮೊದಲ ಪತ್ರಕರ್ತ!
May 18, 2025
7:07 AM
by: ನಾ.ಕಾರಂತ ಪೆರಾಜೆ
ಹೊಸರುಚಿ | ಹಲಸಿನ ಹಣ್ಣಿನ ಜಾಮ್
May 17, 2025
8:00 AM
by: ದಿವ್ಯ ಮಹೇಶ್
ಅಡಿಕೆ ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕಾಗಿ ಸರಕಾರಗಳಿಂದ ರಚಿಸಲಾದ ಸಮಿತಿಗಳು ಏನು ಹೇಳಿವೆ..?
May 17, 2025
7:27 AM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ
ವಾರಣಾಸಿ ಎಂಬ ದ್ವಂದ್ವಗಳ ನಗರ
May 16, 2025
1:02 PM
by: ರಮೇಶ್‌ ದೇಲಂಪಾಡಿ

You cannot copy content of this page - Copyright -The Rural Mirror

Join Our Group