ಆರ್ ಸಿ ಇ ಪಿ ಒಪ್ಪಂದಕ್ಕೆ ಭಾರತದ ಒಪ್ಪಿಗೆ ಇಲ್ಲ : ಒಪ್ಪಂದ ಮುಂದೂಡಿಕೆ ಸಾಧ್ಯತೆ

November 4, 2019
7:25 AM

ನವದೆಹಲಿ : ಆರ್ ಸಿ ಇ ಪಿ ಒಪ್ಪಂದದಿಂದ ಭಾರತ ದೂರ ಉಳಿಯುವ ನಿರ್ಧಾರವನ್ನು ಸೂಚ್ಯವಾಗಿ ತಿಳಿಸಿದ ಬೆನ್ನಲ್ಲೇ ಬ್ಯಾಂಕಾಕ್‌ ನಲ್ಲಿ ಭಾನುವಾರ ನಡೆದ ಸಭೆಯಲ್ಲಿ ಒಪ್ಪಂದವನ್ನು ಅಂತಿಮಗೊಳಿಸುವ ನಿರೀಕ್ಷೆ ಹುಸಿಯಾಗಿದೆ ಎಂದು ತಿಳಿದುಬಂದಿದೆ. ಹೀಗಾಗಿ ಒಂದು ವರ್ಷದ ಮಟ್ಟಿಗೆ ಈ ಒಪ್ಪಂದವನ್ನು  ಮುಂದೂಡುವ ಬಗ್ಗೆ ಕರಡು ಹೇಳಿಕೆಯಲ್ಲಿ ತಿಳಿಸಲಾಗಿದೆ. ಭಾರತವೂ ಒಂದು ವರ್ಷದ ಅವಧಿಗೆ ಈ ಒಪ್ಪಂದದಲ್ಲಿ ಭಾಗಿಯಾಗುವುದಿಲ್ಲ ಎಂದು ತಿಳಿಸಿತ್ತು.

Advertisement
Advertisement

16 ದೇಶಗಳು ಒಳಗೊಂಡಿರುವ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಪಂದ(ಆರ್‌ಸಿಇಪಿ) ಮುಂದೂಡುವ ಚಿಂತನೆ ನಡೆದಿದೆ. ಈ ಒಪ್ಪಂದದ ಕೆಲವು ಅಂಶಗಳ ಬಗ್ಗೆ ಭಾರತವು ಆಕ್ಷೇಪ ವ್ಯಕ್ತಪಡಿಸಿ ತಾನು ದೂರ ಉಳಿಯುವ ಬಗ್ಗೆ ಸೂಚ್ಯವಾಗಿ ತಿಳಿಸಿತ್ತು. ಈ ಹಿಂದೆಯೇ ಭಾರತವ ಈ ಬಗ್ಗೆ ಸೂಚನೆಯನ್ನೂ ನೀಡಿತ್ತು. ಅದರ ಜೊತೆಗೆ ಪರ್ಯಾಯ ಒಪ್ಪಂದದ ಕಡೆಗೂ ಚಿಂತನೆ ನಡೆಸಿತ್ತು. ಪ್ರಮುಖವಾಗಿ ಈ ಒಪ್ಪಂದದ ನಂತರ ಚೀನಾ ನಿರ್ಮಿತ ಕಡಿಮೆ ಬೆಲೆಯ ಸರಕುಗಳು ಭಾರತದ ಮಾರುಕಟ್ಟೆಗೆ ಬರುವ ಕಾರಣ  ಸಣ್ಣ ಉದ್ದಿಮೆಗಳಿಗೆ ಸಮಸ್ಯೆಯಾಗಬಹುದು, ದೇಶದ ರೈತರಿಗೂ ಸಮಸ್ಯೆಯಾಗಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಆಕ್ಷೇಪ ಹಾಗೂ ಆತಂಕವನ್ನು  ವ್ಯಕ್ತಪಡಿಸಿದ್ದರು.

ಭಾನುವಾರ ಬ್ಯಾಂಕಾಕ್‌ ನಲ್ಲಿ ನಡೆದ ಸಭೆಯಲ್ಲಿ ಭಾರತ ಎತ್ತಿರುವ ಆಕ್ಷೇಪಗಳ ಬಗ್ಗೆ ಚರ್ಚೆ ನಡೆದು ಒಪ್ಪಂದವನ್ನು ಅಂತಿಮಗೊಳಿಸುವ ತೀರ್ಮಾನಕ್ಕೆ ಬರಲಾಗಲಿಲ್ಲ. ಹೀಗಾಗಿ ಒಂದು ವರ್ಷ ಮುಂದೂಡುವ ನಿರ್ಧಾರಕ್ಕೆ ಬರಲಾಗುತ್ತಿದೆ ಎಂದು ತಿಳಿದುಬಂದಿದೆ. ಆಸಿಯಾನ್’ಗುಂಪಿನ 10 ರಾಷ್ಟ್ರಗಳ ಜೊತೆ ಚೀನಾ, ಭಾರತ, ಜಪಾನ್, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ ,  ನ್ಯೂಜಿಲ್ಯಾಂಡ್ ದೇಶಗಳು ಸೇರಿಕೊಂಡು ಆರ್‌ ಸಿ ಇ ಪಿ ಒಪ್ಪಂದ ರೂಪಿಸಿವೆ. ವಿಶ್ವದ ಜಿಡಿಪಿಯ ಶೇ.30ರಷ್ಟು ಮತ್ತು ವಿಶ್ವದ ಅರ್ಧಾಂಶದಷ್ಟು ಜನತೆ ಈ ಒಪ್ಪಂದದ ವ್ಯಾಪ್ತಿಯಡಿ ಬರುತ್ತಾರೆ. ಭಾರತವು ಒಂದು ವರ್ಷದ ಮಟ್ಟಿಗೆ ಈ ಒಪ್ಪಂದದಲ್ಲಿ  ಭಾಗಿಯಾಗುವುದಿಲ್ಲ ಎಂದು ತಿಳಿಸಿತ್ತು. ನಂತರ ಈ ಬಗ್ಗೆ ನಿರ್ಧಾರವಾಗಲಿದೆ.

 

Advertisement
Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಆಟಿ ಅಂದರೇ ಪರಿಸರ….! ; ತುಳುನಾಡಿನ ವಿಶೇಷ ಆಚರಣೆ
July 24, 2025
6:39 AM
by: ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ
ರಾಸಾಯನಿಕ ರಹಿತ ದಂತಮಂಜನ ‘ದಂತಸುರಭಿ’ ಲೋಕಾರ್ಪಣೆ | ಜನಜೀವನ ವಿಷದಿಂದ ಅಮೃತದತ್ತ ಸಾಗಲಿ: ರಾಘವೇಶ್ವರ ಶ್ರೀ ಆಶಯ
July 24, 2025
6:19 AM
by: The Rural Mirror ಸುದ್ದಿಜಾಲ
ಗೋವುಗಳಿಂದ ಖಂಡಿತಾ ಅರಣ್ಯಕ್ಕೆ ಅಪಾಯವಿಲ್ಲ – ರಾಘವೇಶ್ವರ ಶ್ರೀ
July 23, 2025
11:31 PM
by: The Rural Mirror ಸುದ್ದಿಜಾಲ
ದೇಶದ ಹಲವು ಭಾಗಗಳಲ್ಲಿ ಮಳೆ ಮುಂದುವರಿಕೆ | ಉತ್ತರ ಭಾರತದ ಹಲವೆಡೆ ಭಾರಿ ಮಳೆ | ಉತ್ತರ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆ |
July 23, 2025
10:05 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group