ಆಲೆಟ್ಟಿ ಗ್ರಾಮದಲ್ಲಿ ಕಾಡಾನೆ ಹಾವಳಿ | ನಿದ್ರೆ ಬಿಟ್ಟು ತೋಟ ಕಾಯುತ್ತಿದ್ದಾರೆ ಕೃಷಿಕರು | ವ್ಯಾಟ್ಸಪ್‌ ಗುಂಪು ಮೂಲಕ ಕಾಡಾನೆ ಚಲನವಲನ ಮಾಹಿತಿ | ಅಧಿಕಾರಿಗಳೇ, ಜನಪ್ರತಿನಿಧಿಗಳೇ ಇತ್ತ ಗಮನಿಸಿ |

July 25, 2020
6:07 PM
ಸುಳ್ಯ: ಆಲೆಟ್ಟಿ ಹಾಗೂ ಅಜ್ಜಾವರ ಗ್ರಾಮದ ಕೆಲವು ಕಡೆಗಳಲ್ಲಿ ಕಳೆದ ಹಲವು ದಿನಗಳಿಂದ ಕಾಡಾನೆಗಳ ಹಿಂಡು ಕೃಷಿಕರ ತೋಟಕ್ಕೆ ನುಗ್ಗಿ ಅಪಾರ ಪ್ರಮಾಣದ ಕೃಷಿ , ಬೆಳೆಯನ್ನು ನಾಶಪಡಿಸುತ್ತಿದೆ. ಕಳೆದ ಹಲವಾರು ಸಮಯಗಳಿಂದ ಈ ಹಾನಿಯಾಗುತ್ತಿದ್ದರೂ ಯಾವುದೇ ಶಾಶ್ವತ ಪರಿಹಾರ ಕೃಷಿಕರಿಗೆ ಸಿಗಲಿಲ್ಲ. ಸದ್ಯ ನಿದ್ರೆ ಬಿಟ್ಟು ಕೃಷಿಕರು ತೋಟ ಕಾಯುತ್ತಿದ್ದಾರೆ. ಆನೆಗಳ ಓಡಾಟದ ಬಗ್ಗೆ ಮಾಹಿತಿ ನೀಡಲು ಕೃಷಿಕರೇ ವಾಟ್ಸಪ್‌ ಗ್ರೂಪ್‌ ರಚನೆ ಮಾಡಿ ಮಾಹಿತಿ ರವಾನಿಸುತ್ತಿದ್ದಾರೆ. ಅಧಿಕಾರಿಗಳೇ, ಜನಪ್ರತಿನಿಧಿಗಳೇ ಈ ಕಡೆ ಒಮ್ಮೆ ಗಮನಿಸಿ ಎಂದು ಕೃಷಿಕರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.
ಕಳೆದ ಹಲವು ಸಮಯಗಳಿಂದ ಕಾಡಾನೆ ಹಾವಳಿ ಇರುವ ಮಂಡೆಕೋಲು, ಅಜ್ಜಾವರ, ಆಲೆಟ್ಟಿ ಪ್ರದೇಶದ ಕೃಷಿಕರು ಕಂಗಾಲಾಗಿದ್ದಾರೆ. ಬೆಳೆ , ಫಸಲು ನಾಶದಿಂದ ರೋಸಿ ಹೋಗಿದ್ದಾರೆ. ಜು.24 ರಂದು  ರಾತ್ರಿ ಮತ್ತೆ ತುದಿಯಡ್ಕ ಕೃಪಾಶಂಕರ,  ಬಿಸಿಲುಮಲೆ ನಾಗರಾಜ ಭಟ್, ಜನಾರ್ಧನ ಭಟ್, ರಾಮನಾರಾಯಣ ಬೆಳ್ಳಪಾರೆ, ಚಳ್ಳಂಗಾರು ಬಾಬು ಗೌಡ ಮುಂತಾದವರ ತೋಟಕ್ಕೆ ಆನೆಗಳ ಹಿಂಡು ದಾಳಿ ನಡೆಸಿ ಅಪಾರ ಪ್ರಮಾಣದ ಕೃಷಿ ಬೆಳೆಯನ್ನು ನಾಶಪಡಿಸಿದೆ. ಹಲವಾರು ದಿನಗಳಿಂದ ನಿರಂತರವಾಗಿ ಆಲೆಟ್ಟಿ-ಅಜ್ಜಾವರ  ಗ್ರಾಮದ ಹಲವು ಕಡೆಗಳಲ್ಲಿ ತೋಟವನ್ನು ನಾಶಪಡಿಸುತ್ತಿರುವ ಘಟನೆ ದಿನೇ ದಿನೇ ವರದಿಯಾಗುತ್ತಲೆ ಇದೆ. ಶ್ರಮ ವಹಿಸಿ ಕೃಷಿ ಮಾಡಿ ಈಗ ನಾಶವಾಗುವುದನ್ನು ದಿನನಿತ್ಯ ತೋಟ ನೋಡಿ ಕಣ್ಣೀರಿಡುವ ಸ್ಥಿತಿ ಕೃಷಿಕನಿಗೆ ಬಂದಿದೆ.
ಕಳೆದ ಕೆಲವು ಸಮಯಗಳಿಂದ  ಇಲ್ಲಿನ ಕೃಷಿಕರು ಸೇರಿದಂತೆ ಒಂದು ವಾಟ್ಸಾಪ್ ಗ್ರೂಪ್ ಮಾಡಿಕೊಂಡು ಆನೆಗಳು ಯಾವ ಭಾಗದಲ್ಲಿ ಇದೆ ಎಂಬ ಮಾಹಿತಿ ಸಂಗ್ರಹಿಸಿ ತಾವೆ ಸ್ವತಃ ರಾತ್ರಿಯೆಲ್ಲ ನಿದ್ದೆ ಬಿಟ್ಟು ತಮ್ಮ ತಮ್ಮ ತೋಟಕ್ಕೆ ದಾಳಿ ಮಾಡದಂತೆ ಜಾಗರಣೆ ಮಾಡುವಂತಹ ಪರಿಸ್ಥಿತಿಯಲ್ಲಿ ನಿರ್ಮಾಣವಾಗಿದೆ. ಕಳೆದ ಎರಡು ವಾರಗಳಿಂದ ಗ್ರಾಮದಲ್ಲಿ ಬೀಡುಬಿಟ್ಟಿರುವ ಮರಿ ಸೇರಿ ನಾಲ್ಕು  ಆನೆಗಳ ಹಿಂಡು ನಿರಂತರ ದಾಳಿ ಮಾಡಿ ಕೃಷಿ ನಾಶ ಪಡಿಸುತ್ತಿದೆ.
ಕಳೆದ ಎರಡು ವರ್ಷದ ಹಿಂದೆ ಮಂಡೆಕೋಲು ಪ್ರದೇಶದಲ್ಲಿ  ಸದಾ ಕಾಡಾನೆ ಹಾವಳಿ ಇತ್ತು. ಈ ಬಗ್ಗೆ ಶಾಲಾ ಬಾಲಕಿಯೊಬ್ಬಳು ಪ್ರಧಾನಿಗಳಿಗೆ ಪತ್ರ ಬರೆದಿದ್ದಳು. ಇದಕ್ಕೆ ತಕ್ಷಣ ಪ್ರತಿಕ್ರಿಯೆ ಬಂದಿತ್ತು, ಅರಣ್ಯ ಇಲಾಖಾ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ಬಂದಿತ್ತು , ಸೂಕ್ತ ಕ್ರಮ ಕೈಗೊಳ್ಳಲು ಸಲಹೆಯೂ ಪ್ರಧಾನಿಗಳ ಕಚೇರಿಯಿಂದ ಬಂದಿತ್ತು. ಆದರೆ ಅದಾದ ಬಳಿಕ ಯಾವುದೇ ಜನಪ್ರತಿನಿಧಿ ಈ ಬಗ್ಗೆ ಫಾಲೋಅಪ್‌ ಮಾಡಿದ ಬಗ್ಗೆ ಮಾಹಿತಿ ಇಲ್ಲ. ಈಗಲೂ ಪರಿಸ್ಥಿತಿ ಹಾಗೆಯೇ ಉಳಿದುಕೊಂಡಿದೆ. ಕೃಷಿಕರು ನಿತ್ಯವೂ ಸಂಕಟ ಪಡುವಂತಾಗಿದೆ.
Advertisement

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಸಂಶೋಧನಾ ಕಾರ್ಯಕ್ಕೆ ರಾಜ್ಯ ಸರ್ಕಾರದಿಂದ ಪ್ರೋತ್ಸಾಹ
July 4, 2025
10:40 PM
by: The Rural Mirror ಸುದ್ದಿಜಾಲ
ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ | ಪ್ರವಾಹ ಮತ್ತು ಭೂಕುಸಿತದಿಂದ ತೀವ್ರ ಪರಿಣಾಮ
July 4, 2025
9:22 PM
by: ದ ರೂರಲ್ ಮಿರರ್.ಕಾಂ
ಗ್ರಾಮೀಣ ಭಾಗಕ್ಕೂ ತಲುಪಿದ ಆಧುನಿಕ ಸಂಸ್ಕೃತಿ | ಕುಕ್ಕೆ ಸುಬ್ರಹ್ಮಣ್ಯದ ವಿದ್ಯಾರ್ಥಿಗಳ ವಿಡಿಯೋ ವೈರಲ್ | ಸೋಶಿಯಲ್‌ ಮೀಡಿಯಾದಲ್ಲಿ ಹಲವರಿಂದ ಅಸಮಾಧಾನ |
July 4, 2025
8:27 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 04.07.2025| ರಾಜ್ಯದ ಕರಾವಳಿ ಭಾಗದಲ್ಲಿ ಏಕೆ ಉತ್ತಮ‌ ಮಳೆಯಾಗುತ್ತಿದೆ..? | ಇಂದೂ‌ ಸಾಮಾನ್ಯ ಮಳೆ
July 4, 2025
12:56 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group