ಇಂದು ವೈದ್ಯರ ದಿನ ಹಾಗೂ ಪತ್ರಿಕಾ ದಿನ.
ಜುಲೈ1 ಭಾರತರತ್ನ ಡಾ.ಬಿದನ್ ಚಂದ್ರ ರಾಯ್ ಅವರ ಜನ್ಮಜಯಂತಿ.
ಅವರ ಸಾಧನೆಯನ್ನು ಪರಿಗಣಿಸಿ ಈ ದಿನವನ್ನು ಭಾರತದಲ್ಲಿ ವೈದ್ಯರ ದಿನಾಚರಣೆಯನ್ನಾಗಿ ಆಚರಿಸುತ್ತಾ ಬರಲಾಗುತ್ತಿದೆ. ಆ ಮೂಲಕ ರೋಗಿಗಳ ಶುಶ್ರೂಷೆಯಲ್ಲಿ ತೊಡಗಿ ಆರೋಗ್ಯ ಸೇವೆ ಮಾಡುವ ವೈದ್ಯರಿಗೆ ಗೌರವ ಸಲ್ಲಿಸಲಾಗುತ್ತಿದೆ. ವೈದ್ಯರ ದಿನಾಚರಣೆಯನ್ನು ಭಾರತದಲ್ಲಿ ಜುಲೈ 1 ರಂದು ಆಚರಿಸಿದರೆ, ಅಮೆರಿಕದಲ್ಲಿ ಮಾರ್ಚ್ 30ರಂದು ವೈದ್ಯ ದಿನಾಚರಣೆಯನ್ನು ಆಚರಿಸುತ್ತಾರೆ. ಏಕೆಂದರೆ ಮಾರ್ಚ್, 30-1842 ರಂದು ಡಾ.ಕ್ರಾಫರ್ಡ್ ಡಬ್ಲ್ಯು ಲಾಂಗ್ ಎನ್ನುವವರು ಮೊದಲ ಬಾರಿಗೆ ಅರಿವಳಿಕೆಯನ್ನು (ಅನೆಸ್ತೀಸಿಯ) ಪರಿಣಾಮಕಾರಿಯಾಗಿ ಬಳಸಿ ಒಂದು ಶಸ್ತ್ರಚಿಕಿತ್ಸೆಯನ್ನು ಮಾಡಿದರಂತೆ ಈ ಮಹತ್ವದ ದಿನವನ್ನು ಅವರು ರಾಷ್ಟ್ರೀಯ ವೈದ್ಯ ದಿನಾಚರಣೆಯನ್ನಾಗಿ ಆಚರಿಸುತ್ತಿದ್ದಾರೆ.
ಕನ್ನಡದ ಮೊದಲ ಪತ್ರಿಕೆ ಮಂಗಳೂರು ಸಮಾಚಾರ ಆರಂಭವಾದದ್ದು 1843 ಜುಲೈ 1. ಹೀಗಾಗಿ ಈ ದಿನವನ್ನು ಪತ್ರಿಕಾ ದಿನವನ್ನಾಗಿ ಆಚರಿಸಲಾಗುತ್ತಿದೆ.
ಇದೆರಡೂ ಸೇವೆಯೂ ಸಮಾಜದ ಹಿತಕ್ಕಾಗಿ. ರೋಗ ಮುಕ್ತಗೊಳಿಸುವ ಪ್ರಕ್ರಿಯೆ. ಒಂದು ಆರೋಗ್ಯದ ಹಿತವಾದರೆ ಮತ್ತೊಂದು ಸಾಮಾಜಿಕ ಹಿತ. ಕಳಕಳಿ, ಕಾಳಜಿ ಎರಡೂ ದೊಡ್ಡದೇ. ಜವಾಬ್ದಾರಿ ನೆನಪಿಸುವ ದಿನ ಇದು. ನಡೆದು ಬಂದ ಹಾದಿ, ನಡೆಯಬೇಕಾದ ಹಾದಿ, ನಡೆಯಬಹುದಾದ ದಾರಿಯ ಬಗ್ಗೆ ಯೋಚಿಸುವ ಸಮಯ ಇದು.
ಎಲ್ಲರಿಗೂ ಶುಭಾಶಯ.
ಸುಳ್ಯನ್ಯೂಸ್.ಕಾಂ