ಇಂದು(ಜ.5) ಪುತ್ತೂರಿನಲ್ಲಿ ಸಾವಯವ ಹಬ್ಬ ಸಮಾರೋಪ

January 5, 2020
9:28 AM

ಪುತ್ತೂರು: ಪುತ್ತೂರಿನ ನವಚೇತನ ಸ್ನೇಹಸಂಗಮ ಹಾಗೂ ಜೆಸಿಐ ಪುತ್ತೂರು ಆಯೋಜನೆಯಲ್ಲಿ  ನಡೆಯುತ್ತಿರುವ  ‘ಸಾವಯವ ಹಬ್ಬ’  ಜನವರಿ  5 ರಂದು(ಇಂದು) ಸಮಾರೋಪಗೊಳ್ಳಲಿದೆ.

ಬೆಳಗ್ಗೆ 10-30ಕ್ಕೆ ಪುತ್ತೂರಿನ ಫಾರ್ಮರ್ ಫಸ್ಟ್ ಟ್ರಸ್ಟ್ ಅಧ್ಯಕ್ಷ ಮಂಚಿ ಶ್ರೀನಿವಾಸ ಆಚಾರ್ ಅವರ ಅಧ್ಯಕ್ಷತೆಯಲ್ಲಿ ‘ಸಾವಯವ ವೈವಿಧ್ಯ’ ಎನ್ನುವ ಗೋಷ್ಠಿ ಸಂಪನ್ನವಾಗಲಿದೆ. ಬೆಂಗಳೂರಿನ ಊಟ ಫ್ರಮ್ ಯುವರ್ ತೋಟ ಇದರ ಸಂಚಾಲಕ ರಾಜೇಂದ್ರ ಹೆಗಡೆಯವರು ‘ತಾರಸಿ ಕೈತೋಟ’ದ ಕುರಿತು ಮತ್ತು ತಿಥಿ, ವಾರ, ನಕ್ಷತ್ರ ಆಧಾರಿತ ತರಕಾರಿ ಕೃಷಿ ತಜ್ಞ ಪೆರ್ಲದ ಶಿವಪ್ರಸಾದ್ ವರ್ಮುಡಿಯವರ ತರಕಾರಿ ಕೃಷಿ ಅನುಭವಗಳ ವಿಶೇಷ ಉಪನ್ಯಾಸಗಳು ನಡೆಯಲಿವೆ. ಪುತ್ತೂರಿನ ಕೋಡಿಬೈಲು ಆಗ್ರೋ ಮ್ಯಾಕ್ ಇದರ ಮುಖ್ಯಸ್ಥ ಕೆ.ಸತ್ಯನಾರಾಯಣ ಉಪಸ್ಥಿತಿ.

ಸಂಜೆ ಗಂಟೆ 4ಕ್ಕೆ ಸಾವಯವ ಹಬ್ಬದ ಸಮಾಪನ. ಪುತ್ತೂರಿನ ನವಚೇತನ ಸ್ನೇಹ ಸಂಗಮದ ಅಧ್ಯಕ್ಷ ಅನಂತಪ್ರಸಾದ್ ನೈತ್ತಡ್ಕ ಅಧ್ಯಕ್ಷತೆ. ಜೇಸಿಐ ಪುತ್ತೂರು ಇದರ ಕಾರ್ಯದರ್ಶಿ  ಪ್ರಮಿತಾ ಸಿ. ಹಾಸ್ ಅವರು ಸಮಾರೋಪ ನುಡಿಗಳನ್ನಾಡಲಿದ್ದಾರೆ. ಪುತ್ತೂರಿನ ಮಾಜಿ ಶಾಸಕಿ  ಶಕುಂತಳಾ ಟಿ.ಶೆಟ್ಟಿ, ಕಹಳೆ ನ್ಯೂಸ್ ಇದರ ಮುಖ್ಯಸ್ಥ ಶ್ಯಾಮ ಸುದರ್ಶನ ಮತ್ತು ಜೆಸಿಐ ಭಾರತ ವಲಯ ಕಾರ್ಯಕ್ರಮ ವಿಭಾಗದ ವಲಯ ನಿರ್ದೇಶಕ ಜೆ.ಎಫ್.ಎಮ್. ಅಶ್ವಿನಿ ಐತಾಳ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಉತ್ತರ ಕರ್ನಾಟಕದಿಂದ ತಂತಮ್ಮ ಸಾವಯವ ಉತ್ಪನ್ನಗಳೊಂದಿಗೆ ಕೃಷಿಕರೇ ಸ್ವತಃ ಮಳಿಗೆ ತೆರೆದು ಮಾಹಿತಿಯೊಂದಿಗೆ ಉತ್ಪನ್ನಗಳನ್ನು ಮಾರುತ್ತಿರುವುದು ಹಬ್ಬದ ಹೈಲೈಟ್.

 ಬೆಳಿಗ್ಗೆ ಗಂಟೆ ಏಳರಿಂದ ಸಾವಯವ ತರಕಾರಿ ಸಂತೆ ನಡೆಯುತ್ತಿದೆ.

 

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 02-10-2026 | ಸುಳ್ಯದಲ್ಲಿ 100 ಮಿ.ಮೀ.ವರೆಗೆ ಮಳೆ – ಕರಾವಳಿ–ಮಲೆನಾಡಿನಲ್ಲಿ ಮುಂದಿನ 10 ದಿನವೂ ಮಳೆಯ ಸಾಧ್ಯತೆ
October 2, 2026
12:46 PM
by: ಸಾಯಿಶೇಖರ್ ಕರಿಕಳ
ಕಬ್ಬು ಬೆಳೆಗಾರರ ಹಿತರಕ್ಷಣೆಗೆ ಕೇಂದ್ರ ಸರ್ಕಾರ ಬದ್ಧ: ಎಥೆನಾಲ್ ಖರೀದಿ 1,200 ಕೋಟಿ ಲೀಟರ್‌ಗೆ ಏರಿಕೆ
October 2, 2026
7:41 AM
by: ದ ರೂರಲ್ ಮಿರರ್.ಕಾಂ
ಅಂತಾರಾಷ್ಟ್ರೀಯ ಕಾಫಿ ದಿನಾಚರಣೆ – ಕಾಫಿ ಬಗ್ಗೆ ಜಾಗೃತಿಗೆ ಚಿಕ್ಕಮಗಳೂರಿನಲ್ಲಿ ಸೈಕಲ್ ಜಾಥಾ
October 2, 2026
7:28 AM
by: ದ ರೂರಲ್ ಮಿರರ್.ಕಾಂ
ಏಷ್ಯನ್ ಗೇಮ್ಸ್‌ ಕ್ರಿಕೆಟ್‌ : ಚಿನ್ನದ ಪದಕಕ್ಕಾಗಿ ಭಾರತ–ಪಾಕಿಸ್ತಾನ ಫೈನಲ್‌
October 2, 2026
7:03 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror