ಇಎಸ್‍ಐ ಯೋಜನೆಯಡಿ ಕಾರ್ಮಿಕರ ನೋಂದಾಣಿ ಪ್ರಕ್ರಿಯೆ

February 1, 2020
6:59 AM

ಮಂಗಳೂರು : ಉಡುಪಿ ಜಿಲ್ಲೆಯಲ್ಲಿ ಇಎಸ್‍ಐ ವತಿಯಿಂದ ಸುಸಜ್ಜಿತ ಆಸ್ಪತ್ರೆಯನ್ನು ತೆರೆಯುವ ಉದ್ದೇಶ ಹೊಂದಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಇಎಸ್‍ಐ ಯೋಜನೆಯಡಿ ಕಾರ್ಮಿಕರು ನೋಂದಾಯಿಸಿಕೊಳ್ಳಬೇಕಾಗುತ್ತದೆ.

Advertisement

ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸುಮಾರು 30 ಸಾವಿರಕ್ಕೂ ಹೆಚ್ಚು  ಗೋಡಂಬಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದು, ಇವರಿಗೆ ಇಎಸ್‍ಐ ಆಸ್ಪತ್ರೆ ಸೌಲಭ್ಯ ಕಲ್ಪಿಸಿಕೊಡುವಂತೆ ಲೋಕಸಭಾ ಸದಸ್ಯೆ  ಶೋಭ ಕರಂದ್ಲಾಜೆ, ನಿರ್ದೇಶಿಸಿರುವುದರಿಂದ ಜನವರಿ 27 ರಿಂದ ಫೆಬ್ರವರಿ 10 ರ ವರೆಗೆ ಎಲ್ಲಾ ಕಾರ್ಮಿಕರನ್ನು ಇಎಸ್‍ಐ ವ್ಯಾಪ್ತಿಗೆ ಒಳಪಡಿಸಲು ಕಾರ್ಮಿಕ ಸಂಘಟನೆಗಳು, ಗೋಡಂಬಿ ಉದ್ದಿಮೆದಾರರ ಸಂಘ, ಸ್ವತಃ ಕಾರ್ಮಿಕರು, ಇಎಸ್‍ಐ ಅಧಿಕಾರಿಗಳು, ಕಾರ್ಮಿಕ ಇಲಾಖಾ ಅಧಿಕಾರಿಗಳು ಹಾಗೂ ಎಲ್ಲಾ ಭಾಗೀದಾರರು ಸಮರೋಪಾದಿಯಲ್ಲಿ ನೋಂದಣಿ ಕಾರ್ಯದಲ್ಲಿ ಭಾಗವಹಿಸುವಂತೆ ರಾಜ್ಯದ ಕಾರ್ಮಿಕ ಇಲಾಖೆಯ ಕಾರ್ಯದರ್ಶಿಗಳು ತಿಳಿಸಿರುತ್ತಾರೆ. ಎಲ್ಲಾ ಕಾರ್ಮಿಕರು ಇಎಸ್‍ಐ ಯೋಜನೆಯಲ್ಲಿ ನೋಂದಾಯಿಸಿ, ಸೌಲಭ್ಯಗಳನ್ನು ಪಡೆದುಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ ಇಎಸ್‍ಐ ಕಚೇರಿ ಹಾಗೂ ಕಾರ್ಮಿಕ ಇಲಾಖೆಯನ್ನು ಸಂಪರ್ಕಿಸಲು ಸಹಾಯಕ ಕಾರ್ಮಿಕ ಆಯುಕ್ತರು, ಮಂಗಳೂರು ವಿಭಾಗ ಇವರ ಪ್ರಕಟಣೆ ತಿಳಿಸಿದೆ

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಪುತ್ತೂರಿನಲ್ಲಿ ಫೆ.21 ರಂದು ಜಿಲ್ಲಾ ಮಟ್ಟದ ಉದ್ಯೋಗ ಮೇಳ
February 6, 2026
9:37 PM
by: ಮಿರರ್‌ ಡೆಸ್ಕ್
ಸ್ವಾವಲಂಬನೆಯ ಸಂಭ್ರಮ | ಮಂಗಳೂರಲ್ಲಿ ರಾಷ್ಟ್ರಮಟ್ಟದ ಮಹಿಳಾ ಉತ್ಪನ್ನಗಳ ಬೃಹತ್ ಮೇಳ
February 6, 2026
8:54 PM
by: ಮಿರರ್‌ ಡೆಸ್ಕ್
ದಕ್ಷಿಣ ಕನ್ನಡ ರೈತರಿಗೆ ಫೆ.20-21 ರಂದು ಕೋಳಿ ಸಾಕಾಣಿಕೆ ತರಬೇತಿ | ಮಂಗಳೂರು ಪಶುಪಾಲನಾ ಇಲಾಖೆ ಪ್ರಕಟಣೆ
February 4, 2026
7:55 AM
by: ಮಿರರ್‌ ಡೆಸ್ಕ್
ಬಡವರಿಗೆ ಉಚಿತ ಗ್ಯಾಸ್ ಸಿಲಿಂಡರ್ ಮತ್ತು ಸ್ಟೌವ್ | ಉಜ್ವಲ ಯೋಜನೆ 2.0ಗೆ ಅರ್ಜಿ ಹೇಗೆ ?
January 17, 2026
7:09 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror