ಮಂಗಳೂರು: ಎರಡು ಚಂಡಮಾರುತ ದಾಟಿ ಹೋಯಿತು. ಇದೀಗ ಇನ್ನೊಂದು ಚಂಡಮಾರುತ ಏಳುವ ಸೂಚನೆ ಇದೆ. ಕ್ಯಾರ್ ಬಳಿಕ ಮಹಾ ಚಂಡಮಾರುತ ಜೊತೆ ಜೊತೆಯಾಗಿಯೇ ಬಂದರೂ ಎಲ್ಲೂ ಭಾರೀ ಅಪಾಯವಾಗದೆ ದೂರವಾಗಿದೆ. ಈಗ ಮಹಾ ಚಂಡಮಾರುತವು ಗುಜರಾತ್ ಪ್ರದೇಶದಲ್ಲಿ ಕಂಡುಬಂದರೆ ಕ್ಯಾರ್ ದುರ್ಬಲವಾಗುತ್ತಾ ಒಮನ್ ಪ್ರದೇಶದಲ್ಲಿ ಹಾದು ಹೋಗಿದೆ.ಈಗ ಹಿಂದು ಮಹಾಸಾಗರದಲ್ಲಿ ಮತ್ತೊಂದು ಚಂಡಮಾರುತ ರೂಪುಗೊಳ್ಳುವ ಸಾಧ್ಯತೆ ಇದೆ. ಈ ಹಿಂದೆಯೇ ಈ ಬಗ್ಗೆ ಹವಾಮಾನ ವರದಿಗಳು ಹೇಳಿದ್ದವು.
ಅರಬ್ಬೀ ಸಮುದ್ರದಲ್ಲಿ ಎರಡು ಚಂಡಮಾರುತಗಳು ಒಮ್ಮೆಲೇ ಕಾಣಿಸಿಕೊಂಡ ಅಪರೂಪದ ಘಟನೆಗೆ ದೇಶ ಸಾಕ್ಷಿಯಾಯಿತು. ಕ್ಯಾರ್ ಹಾಗೂ ಮಹಾ ಚಂಡಮಾರುತ ಇದು. 54 ವರ್ಷಗಳ ಹಿಂದೆ ಅಂದರೆ 1965 ರಲ್ಲಿ ಇಂತಹ ವಿದ್ಯಮಾನ ಜರುಗಿತ್ತು.
‘ಮಹಾ’ ಗುಜರಾತ್ ಕಡೆಗೆ: ‘ಮಹಾ’ ಚಂಡಮಾರುತ ಗುಜರಾತ್ ಹಾಗೂ ಮಹಾರಾಷ್ಟ್ರ ಕಡೆಗೆ ಚಲಿಸಿದೆ. ಇದರಿಂದ ಆ ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಉಳಿದಂತೆ ಸೋಮವಾರ ಮಡಿಕೇರಿ, ಕಾಸರಗೋಡು, ಕಾರ್ಕಳ, ಹೊರನಾಡು ಸೇರಿದಂತೆ ವಿವಿದೆಡೆ ಮಳೆಯಾಗಬಹುದು. ಬೆಂಗಳೂರು ನಗರ, ರಾಮನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಹಾಸನ, ಮಂಡ್ಯ ಸೇರಿದಂತೆ ಕೆಲವೆಡೆ ಮೋಡಕವಿದ ವಾತಾವರಣ ಕಂಡುಬಂದಿದೆ.