ಸುಳ್ಯ:ಕೆ.ವಿ.ಜಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಡಿಯನ್ ಸೊಸೈಟಿ ಆಫ್ ಹೀಟಿಂಗ್, ರೆಫ್ರಿಜರೇಶನ್ ಆಂಡ್ ಏರ್ ಕಂಡೀಷನಿಂಗ್ ಇಂಜಿನಿಯರ್ಸ್ (ಇಸ್ರಾಯ್) ಕ್ಲಬ್ ನ ಉದ್ಘಾಟನೆ ಹಾಗೂ ಲಾಂಛನ ಅನಾವರಣ ಸಮಾರಂಭ ಯಾಂತ್ರಿಕ ವಿಭಾಗದಿಂದ ನಡೆಯಿತು. ಯಾಂತ್ರಿಕ ವಿಭಾಗದ ಮುಖ್ಯಸ್ಥ ಡಾ. ಉಮಾಶಂಕರ್ ಕೆ. ಎಸ್. ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮೂಡಬಿದ್ರೆಯ ಎಸ್.ಕೆ.ಎಫ್ ಬೋಯ್ಲರ್ಸ್ ಆಂಡ್ ಡ್ರೈಯರ್ಸ್ ಪ್ರೈ.ಲಿಮೊಟೆಡ್ ನ ತಾಂತ್ರಿಕ ನಿರ್ದೇಶಕ ಪ್ರಜ್ವಲ್ ಆಚಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಕಾರ್ಯಕ್ರಮದ ಸಂಯೋಜಕ ಸುಧೀರ್ ಕೆ.ವಿ. ಸ್ವಾಗತಿಸಿ, ಗೋಕುಲ್ ದಾಸ್ ಅವರು ವಂದಿಸಿದರು. ಉದ್ಘಾಟನಾ ಸಮಾರಂಭದ ಬಳಿಕ ವಿದ್ಯಾರ್ಥಿಗಳಿಗೆ ಇಂಟರ್ನ್ ಶಿಪ್ ನ ಮಹತ್ವದ ಬಗ್ಗೆ ಪ್ರಜ್ವಲ್ ಆಚಾರ್ ಮಾಹಿತಿ ನೀಡಿದರು. ಕ್ಲಬ್ ನ 3ನೇ ವರ್ಷದ ಯಾಂತ್ರಿಕ ವಿದ್ಯಾರ್ಥಿಗಳಿಗೆ ತಮ್ಮ ಸಂಸ್ಥೆಯ ವತಿಯಿಂದ ಯಾಂತ್ರಿಕ ತರಬೇತಿಯನ್ನು ನೀಡುವುದಾಗಿ ಅವರು ಹೇಳಿದರು.
ಪ್ರೋ. ರಾಘವೇಂದ್ರ ಕಾಮತ್ ಹಾಗೂ ಶಶಾಂಕ್ ಕಾರ್ಯಕ್ರಮ ನಿರೂಪಿಸಿದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel