ಉಳುವಾರು ಕಪ್ ಕ್ರಿಕೆಟ್- ಉಳುವಾರು ಚಾಂಪಿಯನ್, ಮೇಲ್ ಚೆಂಬು ರನ್ನರ್ಸ್ ಅಪ್

November 19, 2019
9:40 PM

ಸುಳ್ಯ: ಉಳುವಾರು ಕುಟುಂಬಸ್ಥರ ಆಶ್ರಯದಲ್ಲಿ ಹತ್ತು ಕುಟುಂಬ, ಹದಿನೆಂಟು ಗೋತ್ರದ, ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಕುಟುಂಬವಾರು ಆಹ್ವಾನಿತ ಕುಟುಂಬಗಳ ನಡುವಿನ ಕ್ರಿಕೆಟ್ ಪಂದ್ಯಾಟ ಹಾಗೂ ಮಹಿಳೆಯರ ಹಗ್ಗಜಗ್ಗಾಟ ಪಂದ್ಯಾಟವು ನೆಹರು ಸ್ಮಾರಕ ಪದವಿಪೂರ್ವ ಕಾಲೇಜು ಅರಂತೋಡುವಿನಲ್ಲಿ ನಡೆಯಿತು.

ಕುಟುಂಬವಾರು ಕ್ರಿಕೆಟ್ ಪಂದ್ಯಾಟದಲ್ಲಿ ಉಳುವಾರು ಕುಟುಂಬ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿತು. ರನ್ನರ್ಸ್ ಪ್ರಶಸ್ತಿಯನ್ನು ಮೇಲ್ ಚೆಂಬು ಕುಟುಂಬಸ್ಥರು ಪಡೆದುಕೊಂಡರು.

ಸೆಮಿಫೈನಲ್ಸ್ ನಲ್ಲಿ ಮೇಲ್ ಚೆಂಬು ಕುಟುಂಬವು ದೇರಜೆ ಕುಟುಂಬವನ್ನು ಸೋಲಿಸಿ ಪೈನಲ್ ಪ್ರವೇಶಿಸಿದರೆ, ಆತಿಥೇಯ ಉಳುವಾರು ಕುಟುಂಬವು ಅಮೆಮನೆ ತಂಡವನ್ನು ಮಣಿಸಿ ಪೈನಲ್ ಪ್ರವೇಶಿಸಿದವು. ಪೈನಲ್ ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಉಳುವಾರು ಕುಟುಂಬವು ನಿಗದಿತ 6 ಓವರ್ ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 44 ರನ್ ಗಳಿಸಿತ್ತು.
ಈ ಮೊತ್ತವನ್ನು ಬೆನ್ನಟ್ಟಿದ ಮೇಲ್ ಚೆಂಬು ಕುಟುಂಬವು 5 ವಿಕೆಟ್‌ ನಷ್ಟಕ್ಕೆ 41ರನ್ ಗಳಿಸಿ 3 ರನ್ ಗಳ ಸೋಲು ಅನುಭವಿಸಿತು.

ಮಹಿಳೆಯರ ಹಗ್ಗಜಗ್ಗಾಟದಲ್ಲಿ ಕಾಯರ ಕುಟುಂಬಸ್ಥರು ಪ್ರಥಮ ಸ್ಥಾನ ಹಾಗೂ ಕುರುಂಜಿ ಕುಟುಂಬಸ್ಥರು ದ್ವಿತೀಯ ಸ್ಥಾನ ಗಳಿಸಿದರು. ತೀರ್ಪುಗಾರರಾಗಿ ಪ್ರಶಾಂತ್ ಊರುಬೈಲು ಮತ್ತು ಪ್ರದೀಪ ಕುಂಬಳಚೇರಿ ಕಾರ್ಯ ನಿರ್ವಹಿಸಿದರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು. ಈ ಸಂದರ್ಭದಲ್ಲಿ ಸಂತೋಷ್ ಕುತ್ತಮಟ್ಟೆ, ದಯಾನಂದ ಕುರುಂಜಿ, ಅಯ್ಯಣ್ಣ ಉಳುವಾರು, ಲೋಕನಾಥ ಸಣ್ಣಮನೆ, ಪುನೀತ ಕೂಸಪ್ಪ ಸಣ್ಣಮನೆ, ಹುಕ್ರಪ್ಪಗೌಡ, ಸುಮಿತ್ರಗೌಡ ಉಳುವಾರು, ದಮಯಂತಿ ಕೇಶವಗೌಡ ಉಳುವಾರು, ವೇದಿಕೆಯಲ್ಲಿ ಉಪಸ್ಥಿತರಿದ್ದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಂಗಳೂರು ಅಡಿಕೆ ಮಾರುಕಟ್ಟೆ | ಸ್ಥಿರತೆಯಿಂದ ಏರಿಕೆಯತ್ತ ಮುಖ ಮಾಡಿದ ಧಾರಣೆ
April 2, 2026
6:56 AM
by: ಅರುಣ್‌ ಕುಮಾರ್ ಕಾಂಚೋಡು
ಜನಗಣತಿ 2026 – ಏಪ್ರಿಲ್ 1ರಿಂದ ಸ್ವಯಂ-ಎಣಿಕೆ ಆರಂಭ – ಸಹಕರಿಸಲು ಜಿಲ್ಲಾಧಿಕಾರಿ ಕರೆ
April 2, 2026
6:37 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 01-04-2026 | ಕರಾವಳಿ-ಮಲೆನಾಡಿನಲ್ಲಿ ಗುಡುಗು ಮಳೆ ಮುಂದುವರಿಕೆ – ಏ.10 ರಿಂದ ಮತ್ತೆ ಮಳೆ ಚುರುಕು ಸಾಧ್ಯತೆ!
April 1, 2026
2:30 PM
by: ಸಾಯಿಶೇಖರ್ ಕರಿಕಳ
ಮಳೆಯ ನಡುವೆಯೂ ಉರಿಯುವ ಬಿಸಿಲು..! ಏಪ್ರಿಲ್–ಜೂನ್‌ನಲ್ಲಿ ಹವಾಮಾನ ಸವಾಲು..!
April 1, 2026
6:29 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror