ಊರಿಗೆ ಊರೇ ಸಿದ್ಧವಾಗಿದೆ  ಅಯ್ಯನಕಟ್ಟೆ ಜಾತ್ರೆಗೆ…..

January 24, 2020
8:28 PM

ಮನುಜ ಸಂಘ ಜೀವಿ.  ನಿತ್ಯ ಕರ್ಮಗಳ ಜತೆ ಆತನಿಗೆ ಮನರಂಜನೆಯೂ ಬೇಕು.  ಬೇಸಾಯ,  ತೋಟ , ಕೆಲಸ,  ಮನೆವಾರ್ತೆಗಳ ನಡುವೆ ನೆಂಟಿಷ್ಟರು, ಊರವರು, ಹಿರಿಗಿರಿಯರು  ಒಟ್ಟಿಗೆ  ಸೇರಲು‌ ಒಂದು ಕಾರಣ ಬೇಕು.  ಮದುವೆ ಮುಂಜಿ,  ಹಬ್ಬ ಹರಿದಿನಗಳು  , ಊರ ಜಾತ್ರೆ, ತೇರು ಎಲ್ಲರೂ ಒಂದೇ ಸೂರಿನಡಿ ಸೇರಲು ಸಕಾರಣವಾಗಿರುತ್ತವೆ.ವರ್ಷಾವಧಿ ಜಾತ್ರೆ ನಿರ್ದಿಷ್ಟ ಸಮಯದಲ್ಲೇ ಮೊದಲೇ ಸಿದ್ಧತೆಗಳನ್ನು ಮಾಡಕೊಳ್ಳಲು ಸಾಧ್ಯ ವಾಗುತ್ತದೆ. ಅಲ್ಲಿ ಜಾತ್ರೆ ಇಲ್ಲಿ ಜಾತ್ರೆ ಎನ್ನುವಾಗ  ನಮ್ಮೂರು ಅಯ್ಯನಕಟ್ಟೆ ಯಲ್ಲಿ ಜಾತ್ರೆ ಇಲ್ಲವಲ್ಲ ಎಂದು ಬೇಜಾರಾಗುತ್ತಿತ್ತು.  ಮನೆಯಲ್ಲಿ ಅತ್ತೆಯವರು ಅಯ್ಯನಕಟ್ಟೆ ಯಲ್ಲಿ ಹಿಂದೆ ಜಾತ್ರೆ ನಡೆಯುತ್ತಿತ್ತು ಎಂಬ ಬಗ್ಗೆ ಹಲವು ಮಾಹಿತಿಗಳನ್ನು, ನಮ್ಮ ಮನೆಯ ಪಕ್ಕ ದ ಹೊಳೆಯ ಬದಿಯಲ್ಲೇ ಜಾತ್ರೆ ವೈಭವದಿಂದ ನಡೆಯುತ್ತಿದ್ದ ನೆನಪುಗಳನ್ನು ಹಂಚಿ ಕೊಳ್ಳುತ್ತಾರೆ ಕಾಯಾರ ಗಣಪ್ಪಯ್ಯನವರು.

Advertisement
Advertisement
Advertisement
Advertisement
ಅಯ್ಯನಕಟ್ಟೆ ಜಾತ್ರೆ ಎಂದರೆ ಸಾಮಾನ್ಯವಲ್ಲ. ಹತ್ತೂರಲ್ಲಿ ಹೆಸರು ಮಾಡಿದ ಜಾತ್ರೆ.  1940 ರ ಸಮಯದಲ್ಲಿ ಈ ಪರಿಸರದಲ್ಲಿ  ಬಹುಶಃ ಎರಡೇ ಜಾತ್ರೆ ನಡೆಯುತ್ತಿದ್ದುವು. ಒಂದು ಅಯ್ಯನಕಟ್ಟೆ  ಜಾತ್ರೆ ಇನ್ನೊಂದು ಕುಕ್ಕುಜಡ್ಕ ಜಾತ್ರೆ. ಅದರಲ್ಲೂ ಇಲ್ಲಿನ ಅಯ್ಯನಕಟ್ಟೆ ಜಾತ್ರೆ ವೈಭವ ಒಂದು ಕೈ ಮೇಲೆಯೇ.
ವಿಜಯನಗರದ ಕೃಷ್ಣದೇವರಾಯನ ಕಾಲದಲ್ಲಿ ಬೀದಿ ಬದಿಯಲ್ಲಿ ಚಿನ್ನ, ಬೆಳ್ಳಿ , ಮುತ್ತು ರತ್ನ ಗಳನ್ನು ಸೇರಿನಲ್ಲಿ ಅಳೆದು ಮಾರುತ್ತಿದ್ದರು ಎಂದು ಸಮಾಜ ವಿಜ್ಞಾನದ  ಅಧ್ಯಾಪಕರು ವಿವರಿಸುತ್ಯಿದ್ದರೆ ನಾವು ಕಣ್ಣು ಅರಳಿಸಿ ಪಾಠ ಕೇಳುತ್ತಿದ್ದೆವು. ಹಾಗೆಯೇ ಅಯ್ಯನಕಟ್ಟೆ ಜಾತ್ರೆಗೆ  ಪುತ್ತೂರಿನಿಂದ   ಚಿನ್ನದ ಅಂಗಡಿ ಬರುತ್ತಿತ್ತು,  ತಾಮ್ರದ ಅಂಗಡಿ , ಪಾತ್ರೆ ಸಾಮಾನುಗಳ ಅಂಗಡಿಗಳು  ವಾರಗಟ್ಟಲೆ ಇಲ್ಲೇ ಇರುತ್ತಿದ್ದವು. ಆ ದಿನಗಳಲ್ಲಿ ಊಟ, ತಿಂಡಿಯ ವ್ಯವಸ್ಥೆ ಇಲ್ಲದ ಕಾರಣ ಹೋಟೆಲ್‌ಗಳು ( ತಡಿಕೆ ಅಂಗಡಿಗಳು) ಅನಿವಾರ್ಯ.  ಬೆಳ್ಳಾರೆಯ ಬಬ್ಬುರಾಯರ ಹೋಟೆಲ್ಲು, ಸೋಡ ಸುಬ್ರಾಯರ  ಗೋಲಿ ಸೋಡ, ಕಬ್ಬಿನ ಹಾಲು . ಇನ್ನೂ ಬಟ್ಟೆಯಂಗಡಿಯಲ್ಲಿ  ವರುಷಕ್ಕಾಗುವ ಬಟ್ಟೆಗಳನ್ನು ಅಯ್ಯನಕಟ್ಟೆ ಜಾತ್ರೆಯ ಸಮಯದಲ್ಲಿ ಖರೀದಿಸುವ ಅಭ್ಯಾಸ ಊರವರಿಗೆ.  ಅಲ್ಲಿ ವರ್ಷದ ದಿನಸಿ ಸಾಮಾನುಗಳಾದ ಕುಮ್ಟೆ ಮೆಣಸು,  ಜೀರಿಗೆ , ಕೊತ್ತಂಬರಿ, ಬೆಲ್ಲ, ಸಕ್ಕರೆ ಹೀಗೆ ಎಲ್ಲಾ ಬಗೆಯವು  ಸಿಗುತ್ತಿದ್ದವು.  ಜಾತ್ರೆಯಲ್ಲೇ ಖರೀದಿಸಿ ಶೇಖರಣೆ ಮಾಡಿ  ಇಡಲಾಗುತ್ತಿತ್ತು. ಇನ್ನೂ ಪಾತ್ರೆ ಸಾಮಾನುಗಳನ್ನು  ಪುತ್ತೂರಿನಲ್ಲಿ ಹೋಗಿ ತರುವುದಾದರೆ ಒಂದು ಪಾತ್ರೆಯ ದುಡ್ಡು ಬಸ್ಸಿನ ಟಿಕೇಟ್ ಗೆ ಸರಿ.  ಹಾಗಾಗಿ ಜಾತ್ರೆಯಲ್ಲಿ  ಖರೀದಿಸಲು ಆಸಕ್ತಿ.
ಹಲವು ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು  ನಡೆಯತ್ತಿದ್ದುವೆಂದು ಅತ್ತೆ ನೆನಪಿಸಿ ಕೊಳ್ಳುತ್ತಾರೆ.  ಯಕ್ಷಗಾನ, ನಾಟಕ ಗಳು  ಪ್ರತಿ ವರ್ಷ ಇರುತ್ತಿದ್ದುವು. ನಮ್ಮ ಮಾವ ಪಿ ಎಸ್ ಗಣಪಯ್ಯರು ಶಾಲಾ ಮಕ್ಕಳಿಗೆ ನಾಟಕ ಅಭ್ಯಾಸ ಮಾಡಿಸಿ  ಜಾತ್ರಾ ವೇದಿಕೆ ಯಲ್ಲಿ ಪ್ರದರ್ಶಿಸುತ್ತಿದ್ದರು ಎಂದು ಆ ದಿನಗಳ ವೈಭವ ವನ್ನು ನಮ್ಮ ಅತ್ತೆಯವರಾದ ಪಿ.ಜಿ. ಸಾವಿತ್ರಿ ಯವರು ಸ್ಮರಿಸುತ್ತಾರೆ.
ಇಲ್ಲಿನ ಶ್ರೀ ಇಷ್ಟ ದೇವತಾ ಉಳ್ಳಾಕುಲು ಹಾಗೂ ಸಪರಿವಾರ ದೈವಗಳು ಬಹಳ ಕಾರಣೀಕವಾದವು.  ಊರಿನ ಒಳಿತನ್ನು ಸದಾ ಕಾಯುವ ದೈವಗಳ ಮೇಲೆ ಅಪಾರವಾದ ನಂಬಿಕೆ ಊರವರಿಗೆ. ಕಾಲಕಾಲಕ್ಕೆ ನಡೆಯುತ್ತಿದ್ದ  ಜಾತ್ರೆ ಯಾಕೆ ಸ್ಥಗಿತ ಗೊಂಡಿತೆಂಬ ಬಗ್ಗೆ ಸರಿಯಾ ಮಾಹಿತಿ ಯಾರಲ್ಲೂ ಇಲ್ಲ. ಕಾರಣಾಂತರದಿಂದ ನಡೆಯದಿದ್ದ ಇತಿಹಾಸ ಪ್ರಸಿದ್ಧವಾದ ‘ಅಯ್ಯನಕಟ್ಟೆ ಜಾತ್ರೆ‘ಯ ಸಂಭ್ರಮ ಮತ್ತೆ ಎಷ್ಟೋ ವರುಷಗಳ ತರುವಾಯ ನಡೆಯುತ್ತಿದೆ.   ಊರಿಗೆ ಊರೇ ಮೈಕೊಡವಿ ನಿಂತಿದೆ.   ಬ್ರಹ್ಮಕಲಶೋತ್ಸವಕ್ಕೆ    ಸರ್ವ ತಯಾರಿಯನ್ನು   ಊರಿನ ಜನತೆ ನಡೆಸುತ್ತಿದೆ.
ಅಯ್ಯನಕಟ್ಟೆ ಶ್ರೀ ಇಷ್ಟ ದೇವತಾ ಉಳ್ಳಾಕುಲು ಹಾಗೂ ಸಪರಿವಾರ ದೈವಗಳ ಪುನಃ ಪ್ರತಿಷ್ಠಾ ಬ್ರಹ್ಮ ಕಲಶೋತ್ಸವ ಹಾಗೂ ಶ್ರೀ ಇಷ್ಟದೇವತಾ ಉಳ್ಳಾಕುಲು ಹಾಗೂ ಸಪರಿವಾರ ದೈವಗಳ ನೇಮೋತ್ಸವ ಜನವರಿ 25 ರಿಂದ ಜನವರಿ 30  ರವರೆಗೆ ನಡೆಯಲಿದೆ.  ಅತ್ಯಂತ ಕಾರಣೀಕವಾದ , ಊರಿನ ಒಳಿತನ್ನು ಕಾಪಾಡುವ ಶ್ರೀ ಇಷ್ಟದೇವತಾ ಉಳ್ಳಾಕುಲು ಹಾಗೂ ಸಪರಿವಾರ ದೈವಗಳ  ನೇಮದೊಂದಿಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.  ಬಾಳಿಲ ಗ್ರಾಮದ ಮೂರುಕಲ್ಲಡ್ಕ, ತಂಟೆಪ್ಪಾಡಿ, ಬಾಳಿಲ ಹಾಗೂ ಕಳಂಜ ಗ್ರಾಮಗಡಿಯಲ್ಲಿರುವ ಕಲ್ಲಮಾಡದಲ್ಲಿ ನಡೆಯಲಿವೆ. ಊರಿಗೆ ಊರೇ ಜಾತ್ರೆಯಲ್ಲಿ ಪಾಲ್ಗೊಳ್ಳುವ  ತಯಾರಿಿ ಯಲ್ಲಿದೆ. ಯಕ್ಷಗಾನ ನಾಟಕಗಳು,  ಅಂಗಡಿಗಳು ಮತ್ತೆ ಕಾಣಲಿವೆ.
ಬಹು ಸಮಯದಿಿಂದ  ನಾನು ಕಾಯುುತ್ತಿದ್ದ ಅಯ್ಯನಕಟ್ಟೆ ಜಾತ್ರೆ  ಮತ್ತೆ    ನಡೆೆಯಲಿದೆ.  ಕುತೂಹಲದಿಿಂದ ಎದಿರು  ನೋಡುತ್ತಿದ್ದ ದಿನಗಳು ಬಂದಿವೆ. ಖುಷಿಯಿಂದ  ಪಾಲ್ಗೊಳ್ಳಲು ಸಂತೋಷ ನಮ್ಮದು.
* ಅಶ್ವಿನಿ ಮೂರ್ತಿ ಅಯ್ಯನಕಟ್ಟೆ

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ಸ್ವರ್ಗಕ್ಕಾಗಿ ಮೂರು ಕಾಲ್ತುಳಿತಗಳು
February 20, 2025
7:14 AM
by: ಡಾ.ಚಂದ್ರಶೇಖರ ದಾಮ್ಲೆ
ಸೀತೆ ಪುನೀತೆ | ಅಪೂರ್ಣ ರಾಮಾಯಣ
February 12, 2025
9:44 PM
by: ಡಾ.ಚಂದ್ರಶೇಖರ ದಾಮ್ಲೆ
ದೆಹಲಿ ಚುನಾವಣೆ “ರಾಜಕೀಯ ಅಹಂಕಾರ”ಕ್ಕೆ ಉತ್ತರ | ರಚನಾತ್ಮಕ ವಿಪಕ್ಷವಾಗಿ ಕೆಲಸ ಮಾಡಬಹುದೇ ಎಎಪಿ..?
February 8, 2025
9:29 PM
by: ಮಹೇಶ್ ಪುಚ್ಚಪ್ಪಾಡಿ
ಅಡಿಕೆಯ ಹಳದಿ ಎಲೆ ರೋಗದ ಖಾಯಂ ನಿವಾರಣೆಗಾಗಿ ಯೋಜನೆ ಅನುಷ್ಟಾನಗೊಳ್ಳುತ್ತದೆ ಎಂಬ ಭರವಸೆ ಇರಲಿ
February 7, 2025
12:15 AM
by: ರಮೇಶ್‌ ದೇಲಂಪಾಡಿ

You cannot copy content of this page - Copyright -The Rural Mirror