ಎಣ್ಮೂರು ಗ್ರಾಮ ಪಂಚಾಯತ್ ಆಗಿ ಕಡಬದಲ್ಲಿಯೇ ಇರಲಿ – ಮನವಿ

August 24, 2019
9:44 AM

ನಿಂತಿಕಲ್ಲು: ಸುಳ್ಯ ತಾಲೂಕಿನಿಂದ ಬೇರ್ಪಟ್ಟು ನೂತನ ಕಡಬ ತಾಲೂಕಿಗೆ ಸೇರ್ಪಡೆಗೊಂಡ ಎಣ್ಮೂರು ಗ್ರಾಮವನ್ನು  ಗ್ರಾಮ ಪಂಚಾಯತ್ ಆಗಿ ಕಡಬ  ತಾಲೂಕಿನೊಳಗೆ ಉಳಿಸಬೇಕೆಂದು ಎಣ್ಮೂರು ನಾಗರೀಕರು ಕಡಬ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಸುಳ್ಯ ತಾಲೂಕಿನ ಮುರುಳ್ಯ ಹಾಗು ಎಣ್ಮೂರು ಈ ಎರಡು ಗ್ರಾಮಗಳು ಎಣ್ಮೂರು ಗ್ರಾಮ ಪಂಚಾಯತ್ ವ್ಯಾಪ್ತಿಗೊಳಪಟ್ಟಿತ್ತು. ಇತ್ತೀಚೆಗೆ ನೂತನವಾಗಿ ರಚನೆಯಾದ ಕಡಬ ತಾಲೂಕಿಗೆ ಎಣ್ಮೂರು ಸೇರ್ಪಡೆಯಾಗಿದೆ. ಮುರುಳ್ಯ ಗ್ರಾಮವು ಸುಳ್ಯ ತಾಲೂಕಿನಲ್ಲಿಯೇ ಉಳಿದುಕೊಂಡಿದ್ದು, ಇವುಗಳೆರಡಕ್ಕೂ ಐತಿಹಾಸಿಕ ಹಿನ್ನೆಲೆಯಿದೆ. ಈಗಾಗಲೇ ಎಲ್ಲಾ ಬಗೆಯ ಮೂಲ ಸೌಕರ್ಯಗಳೊಂದಿಗೆ ಕಾರ್ಯನಿರ್ವಹಿಸುತ್ತಿರುವ ಎಣ್ಮೂರು ಗ್ರಾಮ ಪಂಚಾಯತ್  ಎಣ್ಮೂರಿನಲ್ಲಿಯೇ ಕಾರ್ಯಾಚರಿಸುತ್ತಿದ್ದು ಎಲ್ಲಾ ವ್ಯವಸ್ಥೆ ಹೊಂದಿದೆ. ಹೀಗಾಗಿ ಎಣ್ಮೂರು ಗ್ರಾಮ ಪಂಚಾಯತ್  ಆಗಿಯೇ ಕಡಬ ತಾಲೂಕಿನಲ್ಲಿ  ಉಳಿಸಬೇಕೆಂದು ರಮೇಶ್ ಕೋಟೆಯವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.

ಈ ಸಂದರ್ಭ ಎನ್.ಜಿ ಪ್ರಭಾಕರ ರೈ, ಎನ್.ಜಿ ಲೋಕನಾಥ ರೈ, ಎಣ್ಮೂರು ಗ್ರಾಮ ಪಂಚಾಯತ್ ಸದಸ್ಯ ರಘುಪ್ರಸಾದ್ ರೈ, ಸಾದಿಕ್ ನರ್ಲಡ್ಕ, ಜನಾರ್ಧನ ,ಮಾಯಿಲಪ್ಪ ಗೌಡ, ಮಹಮ್ಮದ್ ಎಣ್ಮೂರು ಉಪಸ್ಥಿತರಿದ್ದರು.

 

Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಆನೆ ದಾಳಿ | ಅರಣ್ಯ ಸಚಿವರ ಸೂಚನೆ
December 17, 2025
9:44 PM
by: ದ ರೂರಲ್ ಮಿರರ್.ಕಾಂ
2025-26 ರಲ್ಲಿ ಅಡಿಕೆ ಕೊಳೆರೋಗ ಮತ್ತು ಎಲೆಚುಕ್ಕಿ ರೋಗ ಪ್ರಕರಣ ವರದಿಯಾಗಿಲ್ಲ…!
December 17, 2025
7:54 AM
by: ದ ರೂರಲ್ ಮಿರರ್.ಕಾಂ
ಮನೆಯ ಮೇಲ್ಛಾವಣಿಯನ್ನು ಕೃಷಿ ಭೂಮಿಯನ್ನಾಗಿಸಿದ ಆಸಿಯಾ ಇತರ ಮಹಿಳೆಯರಿಗೂ ಇಂದು ಮಾದರಿ..
December 17, 2025
7:17 AM
by: ರೂರಲ್‌ ಮಿರರ್ ಸುದ್ದಿಜಾಲ
ನಮ್ಮ ಹೊಲ ನಮ್ಮ ದಾರಿ : ರಸ್ತೆಗೆ 12.5 ಲಕ್ಷ ಸಹಾಯಧನ
December 17, 2025
7:06 AM
by: ರೂರಲ್‌ ಮಿರರ್ ಸುದ್ದಿಜಾಲ

You cannot copy content of this page - Copyright -The Rural Mirror