ಸುಳ್ಯ: ನೆಹರೂ ಮೆಮೋರಿಯಲ್ ಕಾಲೇಜಿನ ನೇಚರ್ ಕ್ಲಬ್‍ನ 2019-20ನೇ ಶೈಕ್ಷಣಿಕ ವರ್ಷದ ಕಾರ್ಯಚಟುವಟಿಕೆಗಳ ಉದ್ಘಾಟನೆ ಇತ್ತೀಚೆಗೆ ನಡೆಯಿತು.
ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್‍ನ ಜತೆ ಕಾರ್ಐದರ್ಶೀ ಕೆ ವಿ ಹೇಮನಾಥ್ ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ ಕೆ. ಗಿರಿಧರ ಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ವಿಜ್ಞಾನ ವಿಭಾಗ ಸಂಯೋಜಕ ಸತ್ಯಪ್ರಕಾಶ್ ಡಿ. ನೇಚರ್ ಕ್ಲಬ್‍ನ ಸಂಚಾಲಕ ಕುಲದೀಪ್ ಪೆಲ್ತಡ್ಕ, ಖಜಾಂಚಿ ಜೀವನೇಶ್ ಜೆ ಆರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನೇಚರ್ ಕ್ಲಬ್‍ನ ಕಾರ್ಯದರ್ಶಿ ವರ್ಷ ಎಂ ಎನ್ ಹಿಂದಿನ ಕಾರ್ಯ ಚಟುವಟಿಕೆಗಳ ವರದಿ ಹಾಗೂ ಮುಂದಿನ ಕಾರ್ಯ ಯೋಜನೆಗಳ ಮಾಹಿತಿ ನೀಡಿದರು. ನಿಮಿಷಾ ಮತ್ತು ತಂಡದವರು ಪ್ರಾರ್ಥಿಸಿದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಸುಷ್ಮಾ ಸ್ವಾಗತಿಸಿ, ಫಾತಿಮಾ ನಸ್ರೀನ್ ಅತಿಥಿಗಳನ್ನು ಪರಿಚಯಿಸಿ, ಮಾಲತಿ ವಂದಿಸಿದರು. ಮೋನಿಷಾ ಕೆ ಎಂ ಮತ್ತು ಗೌರಿ ಕುದ್ಪಾಜೆ ಕಾರ್ಯಕ್ರಮ ನಿರೂಪಿಸಿದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel