ಸುಳ್ಯ : ನೆಹರೂ ಮೆಮೋರಿಯಲ್ ಕಾಲೇಜಿನ ಯುವರೆಡ್‍ಕ್ರಾಸ್ ಘಟಕದ ವತಿಯಿಂದ 105 ಕ್ಕೂ ಅಧಿಕ ಬಾರಿ ರಕ್ತದಾನ ಮಾಡಿ ಕರ್ನಾಟಕ ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿರುವ ಸುಳ್ಯದ ವರ್ತಕರ ಸಂಘದ ಅಧ್ಯಕ್ಷ ಪಿ ಬಿ ಸುಧಾಕರ ರೈ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನಿಸಿದ ಕಾಲೇಜಿನ ಪ್ರಾಂಶುಪಾಲ ಡಾ. ಕೆ ಗಿರಿಧರ ಗೌಡ ಮಾತನಾಡಿ, ಕಾಲೇಜು ದಿನಗಳಿಂದಲೇ ಹಲವು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಕ್ರೀಡಾಚಟುವಟಿಕೆಯಲ್ಲಿ ಮುಂಚೂಣಿಯಲ್ಲಿದ್ದವರು. ಇಂದು ರಕ್ತದಾನ ಮಾಡುವ ಮೂಲಕ ಜನರ ಸೇವೆಗೆ ನಿಂತುಎಲ್ಲರೂ ಮೆಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದರು.
ಸನ್ಮಾನ ಸ್ವೀಕರಿಸಿದ ವರ್ತಕರ ಸಂಘದ ಅಧ್ಯಕ್ಷ, ರಕ್ತದಾನಿ ಪಿ ಬಿ ಸುಧಾಕರರೈ ಮಾತನಾಡಿ, ನನ್ನೆಲ್ಲ ಕೆಲಸಗಳಿಗೆ ನನ್ನ ಮನೆಯೇ ನನಗೆ ಪ್ರೇರಣೆ, ಕಷ್ಟಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಿ. ರಕ್ತಕ್ಕೆರಕ್ತವೇ ಪರ್ಯಾಯ. ಹಾಗಾಗಿ ಅನಿವಾರ್ಯವಾದಾಗ ರಕ್ತ ನೀಡುವ ಕಿಂಚಿತ್ ಸೇವೆ ಮಾಡುತ್ತಿದ್ದೇನೆ. 40 ವರ್ಷಗಳಿಂದ ನಿರಂತರವಾಗಿ ಈ ಸೇವೆಯಲ್ಲಿ ತೊಡಗಿಸಿಕೊಂಡಿದ್ದು ಮನಸ್ಸಿನಲ್ಲಿ ಸಂತೃಪ್ತ ಭಾವ ಇದೆ ಎಂದರು.
ಪ್ರಗತಿಪರ ಕೃಷಿಕ ಪಿ ಬಿ ಪ್ರಭಾಕರ ರೈ, ನಿವೃತ್ತ ಮುಖ್ಯೋಪಾಧ್ಯಾಯ ಜತ್ತಪ್ಪ ಎ ಕೆ.ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಕಾರ್ಯಕ್ರಮಾಧಿಕಾರಿ ಡಾ. ಅನುರಾಧಾ ಕುರುಂಜಿಯವರು ಮಾತನಾಡಿ, ಮಕ್ಕಳಿಗೆ ರಕ್ತದಾನದ ಬಗ್ಗೆ ಪ್ರೇರಣೆ ಮೂಡಿಸುವ ಹಾಗೂ ಸಾಧಕರಿಗೆಇನ್ನಷ್ಟು ಸಾಧನೆಗೆಉತ್ತೇಜನವಾಗಲಿ ಎನ್ನುವ ನಿಟ್ಟಿನಲ್ಲಿಇಂತಹಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆಎಂದರು
ಹವ್ಯಾ ಸ್ವಾಗತಿಸಿ, ಡಯಾನಾ ವಂದಿಸಿದರು. ಸ್ವಾತಿಕಾರ್ಯಕ್ರಮ ನಿರೂಪಿಸಿದರು.