ಎನ್ನೆಂಸಿ: ರೆಡ್‍ಕ್ರಾಸ್‍ಘಟಕದಿಂದವನಮಹೋತ್ಸವಆಚರಣೆ

July 25, 2019
3:00 PM

ಸುಳ್ಯ: ಸುಳ್ಯದ ನೆಹರೂ ಮೆಮೋರಿಯಲ್‍ ಕಾಲೇಜಿನ ಯುವರೆಡ್‍ಕ್ರಾಸ್‍ ಘಟಕದ ವತಿಯಿಂದಅರಣ್ಯ ಇಲಾಖೆ, ಸುಳ್ಯ ಇವರ ಸಹಯೋಗದೊಂದಿಗೆ ವಿಶ್ವಪರಿಸರ ದಿನಾಚರಣೆ ಪ್ರಯುಕ್ತ ವನಮಹೋತ್ಸವ ಕಾರ್ಯಕ್ರಮವನ್ನು ಸರಕಾರಿ ಪ್ರೌಢ ಶಾಲೆ  ಅಜ್ಜಾವರದಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಯಿತು.

Advertisement

ಕಾಲೇಜಿನ ಯುವರೆಡ್‍ಕ್ರಾಸ್‍ ಘಟಕದ ಸುಮಾರು 70 ವಿದ್ಯಾರ್ಥಿಗಳು, ಕಾರ್ಯಕ್ರಮಾಧಿಕಾರಿ ಡಾ| ಅನುರಾಧಾ ಕುರುಂಜಿಯವರ ನೇತೃತ್ವದಲ್ಲಿ ಅಜ್ಜಾವರ ಪರಸರದಲ್ಲಿ ಗಿಡಗಳನ್ನು ನೆಡುವಮೂಲಕ ವಿಶ್ವಪರಿಸರದಿನವನ್ನು ಆಚರಿಸಿದರು.ಸರಕಾರಿ ಪ್ರೌಢ ಶಾಲೆ, ಅಜ್ಜಾವರದ ಮುಖ್ಯೋಪಾಧ್ಯಾರಾದ ನಾಗರಾಜ ಅವರುಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪರಿಸರವನ್ನು ನಾವು ಕಾಪಾಡಿಕೊಳ್ಳದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ನೀರು ಹಾಗೂ ಶುದ್ಧ ಗಾಳಿಯಅಭಾವಅತೀವವಾಗಿ ನಮ್ಮನ್ನುಕಾಡಲಿದೆ. ಬೆಂಗಳೂರಲ್ಲಿ ಆಕ್ಸಿಜನ್ ಕ್ಲಬ್‍ಗಳು ಈಗಾಗಲೇ ಆರಂಭವಾಗಿವೆ. ದುಡ್ಡುಕೊಟ್ಟು ಗಾಳಿ ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ. ಗಿಡವನ್ನು ನೆಟ್ಟು ಪೋಷಿಸಿದರೆ ಮುಂದಿನ ತಲೆಮಾರಿಗೆ ಒಳ್ಳೆಯ ಪರಿಸರವನ್ನುಕೊಡಬಹುದುಎನ್ನುವ ನಿಟ್ಟಿನಲ್ಲಿಇಂತಹ ಕಾರ್ಯಕ್ರಮಗಳು ಹೆಚ್ಚು ಪರಿಣಾಮಕಾರಿಯಾಗಿಆಯೋಜನೆಯಾಗಬೇಕುಎಂದರು.

ಮುಖ್ಯಅತಿಥಿಯಾಗಿ ಭಾಗವಹಿಸಿದ್ದ ಅರಣ್ಯಇಲಾಖೆಯ ಉಪ ವಲಯಅರಣ್ಯಾಧಿಕಾರಿ ಯಶೋಧರ ಅವರು ಮಾತನಾಡಿ, ಒಂದುಗಿಡವನ್ನು ನೆಟ್ಟರೆಅದು ಮನುಷ್ಯನ ಬದುಕಿನಲ್ಲಿ ನಾಲ್ಕು ಕೋಟಿ ಬೆಲೆಯನ್ನು ಬಾಳುತ್ತದೆ. ಗಿಡಗಳ ಪ್ರಾಮುಖ್ಯತೆಯನ್ನುಅರಿತುಅದನ್ನು ನೆಟ್ಟು ಪೋಷಿಸಿ, ಬೆಳೆಸುವ ಕಾಯಕದಲ್ಲಿತಮ್ಮನ್ನುತಾವು ತೊಡಗಿಸಿಕೊಳ್ಳಿ. ಮಕ್ಕಳಿಗೆ ಪರಿಸರ ಕಾಳಜಿ ಮೂಡಿಸುವತಮ್ಮ ಕೆಲಸ ಶ್ಲಾಘನೀಯಎಂದರು.

ಕಾರ್ಯಕ್ರಮಾಧಿಕಾರಿಡಾ| ಅನುರಾಧಾಕುರುಂಜಿಯವರು ಮಾತನಾಡಿಅರಣ್ಯಗಳು ನಾಶವಾಗಿ ಕಾಂಕ್ರೀಟೀಕರಣಗೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಮರದ ಪ್ರಾಮುಖ್ಯತೆಯನ್ನು ತಿಳಿಸುವ ಮತ್ತು ಆ ಮೂಲಕ ಪರಿಸರವನ್ನು ಉಳಿಸುವ ಕೆಲಸ ಮಕ್ಕಳಿಂದಾಗಬೇಕು ಎನ್ನುವನಿಟ್ಟಿನಲ್ಲಿಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿದ್ದೇವೆ ಎಂದರು.

ಅಜ್ಜಾವರದಅರಣ್ಯರಕ್ಷಕ ದಿವೀಶ್ ಕೆ, ಸರಕಾರಿ ಪ್ರೌಢ ಶಾಲೆಅಜ್ಜಾವರದಎಸ್‍ಡಿಎಂಸಿ ಅಧ್ಯಕ್ಷಸುಂದರ, ಕಾಲೇಜಿನ ಹಿಂದಿ ವಿಭಾಗದಉಪನ್ಯಾಸಕ ಮನೋಜ್‍ಕುಮಾರ್, ಅರಣ್ಯಇಲಾಖೆಯ ಶ್ರೀಧರ್ ಹಾಗೂ ಸಿಬ್ಬಂದಿಗಳು, ರೆಡ್‍ಕ್ರಾಸ್‍ಘಟಕದನಾಯಕರುಗಳಾದ ಭುವನ್ ಪಿ, ಕುಮುದಾ ಪಿ. ಎಸ್, ಬ್ರಿಜೇಶ್ ಕೆ ಮೊದಲಾದವರುಉಪಸ್ಥಿತರಿದ್ದರು. ಸ್ವಾತಿ ಸ್ವಾಗತಿಸಿ,ಕಾರ್ಯಕ್ರಮ ನಿರೂಪಿಸಿ ಅಕ್ಷತಾ ವಂದಿಸಿದರು.

Advertisement
Advertisement

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 04.07.2025| ರಾಜ್ಯದ ಕರಾವಳಿ ಭಾಗದಲ್ಲಿ ಏಕೆ ಉತ್ತಮ‌ ಮಳೆಯಾಗುತ್ತಿದೆ..? | ಇಂದೂ‌ ಸಾಮಾನ್ಯ ಮಳೆ
July 4, 2025
12:56 PM
by: ಸಾಯಿಶೇಖರ್ ಕರಿಕಳ
ಪುತ್ತೂರು ಪ್ರಕರಣ | ಶಾಸಕ ಅಶೋಕ್‌ ಕುಮಾರ್‌ ರೈ ಅವರ ಬರಹ ಇದು… | ನಾವೀಗ ಆಕೆಗೆ ನೀಡಬೇಕಾಗಿರುವುದು ಧೈರ್ಯ ಮತ್ತು ಸ್ಥೈರ್ಯ
July 4, 2025
9:45 AM
by: ದ ರೂರಲ್ ಮಿರರ್.ಕಾಂ
ರಾಸಾಯನಿಕ ಉದ್ಯಮ | ಭಾರತವು ರಾಸಾಯನಿಕಗಳ ಪ್ರಮುಖ ಉತ್ಪಾದಕ ರಾಷ್ಟ್ರ
July 4, 2025
7:36 AM
by: The Rural Mirror ಸುದ್ದಿಜಾಲ
ಬುಧ ಮತ್ತು ಶನಿ ಕಾಟದಿಂದ ಈ ರಾಶಿಯವರು ಸ್ವಲ್ಪ ಜೋಪಾನವಾಗಿರಬೇಕು
July 4, 2025
7:24 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group