ಎಲಿಮಲೆ: ಎಲಿಮಲೆಯ ಜ್ಞಾನದೀಪ ವಿದ್ಯಾಸಂಸ್ಥೆಯಲ್ಲಿ ಜ್ಞಾನದೀಪ ಯಕ್ಷಗಾನ ಕಲಾ ತಂಡದ ಉದ್ಘಾಟನೆ ಹಾಗೂ ತರಬೇತಿ ಕಾರ್ಯಕ್ರಮ ಶನಿವಾರ ಉದ್ಘಾಟನೆಗೊಂಡಿತು.
ಕಾರ್ಯಕ್ರಮವನ್ನು ಮರ್ಕಂಜ ಪಂಚಸ್ಥಾಪನೆ ದೇವಸ್ಥಾನದ ಮಾಜಿ ಮೊಕ್ತೇಸರ ಹಾಗೂ ಹಿರಿಯ ಯಕ್ಷಗಾನ ಕಲಾವಿದ ಯುವರಾಜ ಜೈನ್ ಉದ್ಘಾಟಿಸಿದರು. ಯಕ್ಷಗಾನ ಗುರುಗಳಾದ ಶೇಖರ ಮಣಿಯಾಣಿ ಸುಳ್ಯ ಸ್ವರಚಿತ ಹಾಡಿನ ಮೂಲಕ ಯಕ್ಷಗಾನ ತರಬೇತಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಸಭಾಧ್ಯಕ್ಷತೆ ವಹಿಸಿದ್ದ ಜ್ಞಾನದೀಪ ವಿದ್ಯಾಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ತಳೂರು, ಯಕ್ಷಗಾನವು ನಮ್ಮ ಕರಾವಳಿಯ ಪ್ರಸಿದ್ಧ ಕಲೆಗಳಲ್ಲಿ ಒಂದು. ಇದನ್ನು ಉಳಿಸಿ ಬೆಳೆಸಲು ಇಂದಿನ ಮಕ್ಕಳಿಗೆ ಇದರ ಕಲಿಕೆ ಅಗತ್ಯ ಎಂದರು.
ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿ ನಿರ್ದೇಶಕರುಗಳಾದ ರಾಧಾಕೃಷ್ಣ ಮಾವಿನಕಟ್ಟೆ, ಮಹಾವೀರ ಜೈನ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಭಾಸ್ಕರ ರಾವ್ ಉಬರಡ್ಕ, ಶಾಲಾ ಆಡಳಿತಾಧಿಕಾರಿ ಅನಿಲ್ ಅಂಬೆಕಲ್ಲು, ಪ್ರಾಥಮಿಕ ವಿಭಾಗದ ಮಖ್ಯೋಪಾಧ್ಯಾಯ ಪುನೀತ್ ರವಿ , ಯಕ್ಷಗುರು ರಾಧಾಕೃಷ್ನ ಕಲ್ಲುಗುಂಡಿ ಉಪಸ್ಥಿತರಿದ್ದರು
ಶಾಲಾ ಶಿಕ್ಷಕಿಯರಾದ ಹರ್ಷಿತಾ ಸ್ವಾಗತಿಸಿ, ಶ್ರೀಮತಿ ಭಾರತಿ ವಂದಿಸಿದರು. ಶ್ರೀಮತಿ ಪವಿತ್ರಾ ಕಾರ್ಯಕ್ರಮ ನಿರೂಪಿಸಿದರು.