ಎಳೆಯ ವಿದ್ಯಾರ್ಥಿಗಳ ಬೌದ್ಧಿಕ ಜ್ಞಾನದ ವಿಕಸನಕ್ಕೆ ಚೆಸ್ ಆಟ ಪ್ರಯೋಜನಕಾರಿ

July 17, 2019
1:00 PM

ಸುಬ್ರಹ್ಮಣ್ಯ: ಎಳೆಯ ಮಕ್ಕಳಿಗೆ ಜ್ಞಾನಾರ್ಜನೆಗಾಗಿ ಬೌದ್ಧಿಕ ಸಂಪತ್ತು ಅಭ್ಯುದಯಗೊಳ್ಳಲು ಚೆಸ್ ಆಟ ಪ್ರಯೋಜನಕಾರಿಯಾಗಿದೆ.ಈ ಆಟವು ಚಾಕಚಕ್ಯತೆ ಮತ್ತು ಬುದ್ದಿಮತ್ತತೆಗೆ ಹೆಚ್ಚು ಒತ್ತು ನೀಡುತ್ತದೆ.ಆದುದರಿಂದ ಮಕ್ಕಳಲ್ಲಿ ಜ್ಞಾನ ಗಳಿಸಲು ಸಹಕಾರ ನೀಡುತ್ತದೆ.ಈ ಆಟವು ಏಕಾಗೃತಾ ಪಾಠವನ್ನು ಬೋಧಿಸುವುದರಿಂದ ಪಠ್ಯ ವಿಚಾರಗಳನ್ನು ಶೀಘ್ರ ಮನನ ಮಾಡಿಕೊಳ್ಳಲು ಉತ್ತಮವಾಗಿದೆ ಎಂದು ಚೆಸ್ ಆಟಗಾರ ಮತ್ತು ಉದ್ಯಮಿ ರತ್ನಾಕರ ಶೆಟ್ಟಿ ಹೇಳಿದರು.

Advertisement
Advertisement

ಸುಬ್ರಹ್ಮಣ್ಯದ ಅನುಗ್ರಹ ಎಜುಕೇಶನ್ ಟ್ರಸ್ಟ್ ಆಶ್ರಯದ ಕುಮಾರಸ್ವಾಮಿ ವಿದ್ಯಾಲಯದಲ್ಲಿ ನೂತನವಾಗಿ ಆರಂಭಗೊಂಡ ಚೆಸ್ ತರಬೇತಿ ತರಗತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ವಿದ್ಯಾಲಯದಲ್ಲಿ ಮಕ್ಕಳಿಗೆ ಚೆಸ್ ತರಬೇತಿ ನೀಡುವುದರಿಂದ ಮಕ್ಕಳಿಗೆ ಬೌದ್ಧಿಕ ಸಂಪತ್ತು ಅನನ್ಯಗೊಳ್ಳುತ್ತದೆ.ಆದುದರಿಂದ ಎಲ್ಲಾ ಶಾಲೆಗಳಲ್ಲಿ ಮಕ್ಕಳಿಗೆ ಚೆಸ್ ಆಟದ ಬಗ್ಗೆ ವಿಶೇಷ ತರಬೇತಿ ನೀಡುವುದು ಅತ್ಯವಶ್ಯಕ.ಅಲ್ಲದೆ ಮಕ್ಕಳನ್ನು ಈ ಕ್ರೀಡೆ ಆಡುವಂತೆ ಪ್ರೋತ್ಸಾಹಿಸಬೇಕು ಎಂದರು.

ವಿದ್ಯಾಲಯದ ಸಂಚಾಲಕ ಚಂದ್ರಶೇಖರ ನಾಯರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಚೆಸ್ ತರಬೇತುದಾರ ಜಗನ್ನಾಥ್ ಮಂಗಳೂರು ಮುಖ್ಯಅತಿಥಿಯಾಗಿದ್ದರು. ಶಾಲಾ ಮುಖ್ಯ ಶಿಕ್ಷಕಿ ವಿದ್ಯಾರತ್ನ ವೇದಿಕೆಯಲ್ಲಿದ್ದರು.

ವಿದ್ಯಾರ್ಥಿ ಶಾಬ್ಧಿಕ್ ಸ್ವಾಗತಿಸಿ, ಅನನ್ಯ ಎಂ.ಡಿ ವಂದಿಸಿದರು. ವಿದ್ಯಾರ್ಥಿ ವೆನೆಸ್ಸಾ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ಉಪಸ್ಥಿತರಿದ್ದರು.ಈ ಬಳಿಕ ವಿದ್ಯಾರ್ಥಿಗಳಿಗೆ ಚೆಸ್ ತರಗತಿಗಳು ಆರಂಭಗೊಂಡಿತು. ಪ್ರಸಕ್ತ ವರ್ಷದಿಂದ ಪ್ರತಿ ಶುಕ್ರವಾರಂದು ಚೆಸ್ ತರಗತಿಯು ಸಂಸ್ಥೆಯಲ್ಲಿ ನಡೆಯಲಿದೆ.

 

Advertisement
Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಉದ್ಯೋಗ | ಐಟಿಐ-ಡಿಪ್ಲೊಮಾ ಅಭ್ಯರ್ಥಿಗಳಿಗೆ ಇಲ್ಲಿದೆ ಅವಕಾಶ |
July 22, 2025
10:37 PM
by: The Rural Mirror ಸುದ್ದಿಜಾಲ
ಬಿಹಾರ ಸೇರಿ ಹಲವು ರಾಜ್ಯಗಳಲ್ಲಿ 2 ದಿನ ಭಾರಿ ಮಳೆ
July 22, 2025
10:01 PM
by: The Rural Mirror ಸುದ್ದಿಜಾಲ
ಒಂದೇ ಕುಟುಂಬದ ಮೂವರ ಮೃತ್ಯು | ತರಕಾರಿಗೆ ಸಿಂಪಡಿಸಿದ್ದ ಕ್ರಿಮಿನಾಶಕ ಜೀವಕ್ಕೇ ಕುತ್ತಾಯಿತೇ ?
July 22, 2025
9:52 PM
by: The Rural Mirror ಸುದ್ದಿಜಾಲ
 ಇಂದು ವಿಶ್ವ ಮಾವು ದಿನಾಚರಣೆ | ರಾಜ್ಯದ ಮಾವಿಗೆ ಜಗತ್ತಿನಾದ್ಯಂತ ಬೇಡಿಕೆ |
July 22, 2025
9:34 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group