ಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ

October 1, 2019
10:40 AM

ಮಡಿಕೇರಿ: ಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಗಾಂಧಿ ಮೈದಾನದ ಭವ್ಯ ಕಲಾ ಸಂಭ್ರಮ ವೇದಿಕೆಯಲ್ಲಿ ವರ್ಣರಂಜಿತ ಚಾಲನೆಯನ್ನು ನೀಡಲಾಯಿತು.

Advertisement

ಮಂಜು ಮಳೆಯ ನಡುವೆ, ಉತ್ಸಾಹಿ ಪ್ರೇಕ್ಷಕರ ಸಮ್ಮುಖದಲ್ಲಿ ನಡುವೆ ವಿಜಯದಶಮಿಯವರೆಗೆ ಆಯೋಜಿತವಾಗಿರುವ ಅತ್ಯಾಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಿರ್ವಿಘ್ನವಾಗಿ ನಡೆಯಲೆಂದು ಪ್ರಾರ್ಥಿಸುವ ಮೂಲಕ, ಶಕ್ತಿ ದೇವತೆಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.

ಜ್ಯೋತಿ ಬೆಳಗಿ, ಬ್ಯಾಂಡ್ ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮಾತನಾಡಿ, ಮಡಿಕೇರಿ ದಸರಾ ಉತ್ಸವಾಚರಣೆಯಲ್ಲಿ ದಸರಾ ಸಮಿತಿಯ ಆಡಳಿತಾಧಿಕಾರಿಯಾಗಿ ಪಾಲ್ಗೊಳ್ಳಲು ಅವಕಾಶ ದೊರಕಿರುವುದು ಹೆಮ್ಮೆಯ ವಿಚಾರವೆಂದು ತಿಳಿಸಿ, ಉತ್ಸವದ ಯಶಸ್ವಿ ಆಯೋಜನೆಗೆ ಜಿಲ್ಲಾಡಳಿತ ಸಂಪೂರ್ಣ ಸಹಕಾರ ನೀಡಲಿದೆ. ಉತ್ಸವದಲ್ಲಿ ಜಿಲ್ಲೆ ಮತ್ತು ಹೊರ ಜಿಲ್ಲೆಯವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ಎಸ್‍ಪಿ ಡಾ. ಸುಮನ್ ಡಿ. ಪನ್ನೇಕರ್ ಮಾತನಾಡಿ, ಹತ್ತು ದಿನಗಳ ಅವಧಿಯ ಉತ್ಸವ ಯಶಸ್ವಿಯಾಗಿ ನಡೆಯಲೆಂದು ಹಾರೈಸಿದರೆ, ಎಡಿಸಿ ಸ್ನೇಹ, ಸಿಇಒ ಲಕ್ಷ್ಮೀಪ್ರಿಯ ಸಾಂಸ್ಕೃತಿಕ ಕಾರ್ಯಕ್ರಗಳೊಂದಿಗೆ ಉತ್ಸವ ಯಶಸ್ವಿಯಾಗಿ ನಡೆಯಲೆಂದು ಶುಭ ಹಾರೈಸಿದರು. ದಸರಾ ಸಮಿತಿಯ ಗೌರವ ಕಾರ್ಯದರ್ಶಿ ಎಂ.ಎಲ್. ರಮೇಶ್ ಮಾತನಾಡಿ, ದಸರಾ ಉತ್ಸವದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಕಲಾವಿದರಿಗೆ ಪ್ರೋತ್ಸಾಹ ನೀಡುವ ಉದ್ದೇಶವೂ ಅಡಗಿದೆಯೆಂದು ತಿಳಿಸಿ ಉತ್ಸವದ ಯಶಸ್ಸಿಗೆ ಶುಭ ಹಾರೈಸಿದರು.

ಅಧ್ಯಕ್ಷರಾದ  ರಾಬಿನ್ ದೇವಯ್ಯ, ಕೊಡಗಿನಲ್ಲಿ ಯಾವುದೇ ಕಾರ್ಯಕ್ರಗಳ ಆಯೋಜನೆಗೆ ಮಳೆ ಸೇರಿದಂತೆ ಮೊದಲಾದ ಅಡ್ಡಿ ಆತಂಕಗಳ ನಡುವೆ ಕಾರ್ಯನಿರ್ವಹಿಸಬೇಕಾಗುತ್ತದೆ. ಆದರೆ ಜಿಲ್ಲೆಯ ಜನತೆ ಮಳೆ ಬಂದರೂ, ಪ್ರಕೃತಿ ಮುನಿಸಿಕೊಂಡರು ಎದೆಗುಂದದೆ ಕೆಲಸ ನಿರ್ವಹಿಸಿಕೊಂಡು ಬರುತ್ತಿದ್ದಾರೆಂದು ಮೆಚ್ಚುಗೆಯ ನುಡಿಗಳನ್ನಾಡಿದರು. ಮೈಸೂರು ದಸರಾ ಸರ್ಕಾರದ ಮೂಲಕ ನಡೆಯುವ ಉತ್ಸವವಾಗಿದ್ದರೆ, ಮಡಿಕೇರಿ ದಸರಾ ಉತ್ಸವದಲ್ಲಿ ಜಿಲ್ಲಾಡಳಿತ ಮತ್ತು ದಸರಾ ಸಮಿತಿ ಒಂದಾಗಿ ಭಿನ್ನಾಭಿಪ್ರಾಯಗಳಿಗೆ ಅವಕಾಶ ಇಲ್ಲದೆ ಕಾರ್ಯನಿರ್ವಹಿಸುವುದು ವಿಶೇಷವೆಂದು ತಿಳಿಸಿದರು.

Advertisement

ಈ ಬಾರಿಯ ದಸರಾ ಸಾಂಸ್ಕೃತಿಕ ಕಾರ್ಯಕ್ರಗಳ ಜೊತೆಗೆ ಅ. 2 ರಂದು ಮಕ್ಕಳ ದಸರಾ, 4 ಕ್ಕೆ ಕವಿಗೋಷ್ಠಿ, 5 ರಂದು ಯುವ ದಸರಾ , ಅ.6 ರಂದು ಮಹಿಳಾ ದಸರಾ ಆಯೋಜಿತವಾಗಿದೆ. ಅ.7 ರಂದು ಆಯುಧ ಪೂಜೆಯೊಂದಿಗೆ ಅಲಂಕೃತ ವಾಹನಗಳ ಸ್ಪರ್ಧಾ ಕಾರ್ಯಕ್ರಮ ನಡೆಯಲಿದ್ದು, ಅ.8 ರಂದು ವಿಜಯದಶಮಿಯ ಶೋಭಾಯಾತ್ರೆ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳ ಯಶಸ್ವಿ ಆಯೋಜನೆಗೆ ಜಿಲ್ಲಾಡಳಿತ ಪೂರಕ ಸಹಕಾರವನ್ನು ನೀಡುತ್ತಿರುವ ಬಗ್ಗೆ ಮೆಚ್ಚುಗೆಯ ನುಡಿಗಳಾಡಿದರು.

ವೇದಿಕೆಯಲ್ಲಿ ದಸರಾ ಸಮಿತಿ ಪದಾಧಿಕಾರಿಗಳು, ವಿವಿಧ ದಸರಾ ಉಪ ಸಮಿತಿಗಳ ಪ್ರಮುಖರು ಉಪಸ್ಥಿತರಿದ್ದರು. ಸಜಿತ ಗಂಗಮ್ಮ ಪ್ರಾರ್ಥಿಸಿ, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಆರ್.ಬಿ ರವಿ ಸ್ವಾಗತಿಸಿದರು. ಅನಿಲ್ ಹೆಚ್.ಟಿ. ಕಾರ್ಯಕ್ರಮ ನಿರೂಪಿಸಿದರು. ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ಬಿ. ಕೆ. ಜಗದೀಶ್ ವಂದಿಸಿದರು.

Advertisement

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಂತರ ರಾಷ್ಟ್ರೀಯ ಹಲಸು ದಿನ | ಗ್ರಾಮೀಣ ಉದ್ಯಮಿಗಳ ಸಬಲೀಕರಣಕ್ಕೆ ಹಲಸು ಬೆಳೆ ಪೂರಕ |
July 5, 2025
8:12 AM
by: ದ ರೂರಲ್ ಮಿರರ್.ಕಾಂ
ಇಲ್ಲಿ ಅಡಿಕೆ ಧಾರಣೆಯಲ್ಲಿ ಏರಿಳಿವಾದಾಗಲೇ ಅಲ್ಲಿ ಬರ್ಮಾ ಅಡಿಕೆ ವಶಕ್ಕೆ…! | ಕಾರಣ ಏನು..?
July 5, 2025
7:41 AM
by: ದ ರೂರಲ್ ಮಿರರ್.ಕಾಂ
ಶುಕ್ರ- ಶನಿ ಸೇರಿ ಲಾಭ ದೃಷ್ಟಿ ಯೋಗ: ಈ 5 ರಾಶಿಯವರಿಗೆ ಶ್ರೀಮಂತಿಕೆಯ ಸುಯೋಗ..!
July 5, 2025
7:17 AM
by: ದ ರೂರಲ್ ಮಿರರ್.ಕಾಂ
ಸಂಶೋಧನಾ ಕಾರ್ಯಕ್ಕೆ ರಾಜ್ಯ ಸರ್ಕಾರದಿಂದ ಪ್ರೋತ್ಸಾಹ
July 4, 2025
10:40 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group