ಒತ್ತಡಗಳಿಗೆ ಮಣಿಯುತ್ತಾರಾ ಬಿಜೆಪಿ ರಾಜ್ಯಾಧ್ಯಕ್ಷರು…?

August 24, 2019
2:30 PM

ಸ್ಪೆಶಲ್ ಕರೆಸ್ಪಾಂಡೆಂಟ್, ಸುಳ್ಯನ್ಯೂಸ್.ಕಾಂ

Advertisement
Advertisement

ಸುಳ್ಯ: ಬಿ ಎಸ್ ಯಡಿಯೂರಪ್ಪ ಸಂಪುಟ ವಿಸ್ತರಣೆಯ ನಂತರ ಇದೀಗ ರಾಜ್ಯ ಬಿಜೆಪಿಯಲ್ಲಿ  ಗೊಂದಲ ಹೆಚ್ಚಾಗಿದೆ. ಈ ಗೊಂದಲಗಳ ನಡುವೆ ಸಚಿವ ಸ್ಥಾನದ ಆಕಾಂಕ್ಷಿಗಳ ಒತ್ತಡವೂ ಹೆಚ್ಚಿದೆ. ನೂತನ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಈ ಎಲ್ಲಾ ಒತ್ತಡಗಳಿಗೆ ಮಣಿಯುತ್ತಾರಾ ? ಎದುರಿಸುತ್ತಾರಾ ? ಎಂಬ ಕುತೂಹಲ ಈಗ ಮೂಡಿದೆ. ಏಕೆಂದರೆ ಕಳೆದ ಬಾರಿಯ ವಿಧಾನಸಭಾ ಚುನಾವಣೆಯ ಸಂದರ್ಭ ನಳಿನ್ ಕುಮಾರ್ ಕಟೀಲು ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ತೆಗೆದುಕೊಂಡ ನಿರ್ಧಾರಗಳು ಸಂಚಲನ ಮೂಡಿಸಿತ್ತು. ಜಿಲ್ಲೆಯಲ್ಲಿ ಗೆಲುವಿಗೂ ಕಾರಣವಾಗಿತ್ತು. ಅದೇ ನಿರ್ಧಾರಗಳೂ ಈ ಬಾರಿಯೂ ಪುನರಾವರ್ತನೆಯಾಗುತ್ತಾ ಎಂಬ ಕುತೂಹಲವಿದೆ.

Advertisement

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ಬಿಜೆಪಿಯ ಏಕೈಕ ಶಾಸಕರಾಗಿ ಸುಳ್ಯದ ಅಂಗಾರ ಅವರು ಇದ್ದರು. ಉಳಿದೆಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದರು. ಮುಂದಿನ ವಿಧಾನಸಭಾ ಚುನಾವಣೆಯ ಬಳಿಕ ಸಂಪೂರ್ಣ ಚಿತ್ರಣ ಬದಲಾಗಿತ್ತು. ಏಕೈಕ ಕಾಂಗ್ರೆಸ್ ಶಾಸಕ ಉಳಿದೆಲ್ಲಾ ಕ್ಷೇತ್ರಗಳಲ್ಲಿ  ಬಿಜೆಪಿ ಶಾಸಕರು…!. ಈ ಸಂದರ್ಭ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಕ್ಷದ ಸಂಘಟನೆ ಹಾಗೂ ಓಡಾಟ ನಡೆಸಿದ್ದು ಸಂಸದ ನಳಿನ್ ಕುಮಾರ್ ಕಟೀಲು. ಪುತ್ತೂರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಸಮಾಧಾನ ಹೆಚ್ಚಿತ್ತು. ಬೆಳ್ತಂಗಡಿ, ಪುತ್ತೂರು, ಮಂಗಳೂರು ಕ್ಷೇತ್ರಗಳಲ್ಲಿ ಅಸಮಾಧಾನಗಳು ಹೆಚ್ಚಿತ್ತು. ಸಂಸದರ ಸಹಿತ ಯಾರೊಬ್ಬರೂ ಈ ಅಸಮಾಧಾನ ಬಗೆಹರಿಸುವ ಬಗ್ಗೆ ಗಮನಹರಿಸಿದೆ ಮತ್ತಷ್ಟು ಪಕ್ಷ ಸಂಘಟನೆಯತ್ತ ಗಮನಹರಿಸಿದರು. ಕೊನೆಗೆ ಅಸಮಾಧಾನಗಳು ಶಮನವಾಯಿತು. ಅಸಮಾಧಾನ , ಬಂಡಾಯಗಳಿಗೆ ಸೊಪ್ಪು ಹಾಕಿರಲಿಲ್ಲ. ಹಾಗಿದ್ದರೂ ಪಕ್ಷವು ಜಿಲ್ಲೆಯಲ್ಲಿ ಗೆಲುವು ಸಾಧಿಸಿತ್ತು. ಗೆಲುವು ಸಾಧಿಸಲಾರದು ಎಂಬ ಕ್ಷೇತ್ರಗಳೂ ಬಿಜೆಪಿ ತೆಕ್ಕೆಗೆ ಬಂದಿತ್ತು.

ಇದೀಗ ನಳಿನ್ ಕುಮಾರ್ ಕಟೀಲು ರಾಜ್ಯದ ಬಿಜೆಪಿ ಅಧ್ಯಕ್ಷರಾಗಿದ್ದಾರೆ. ಸುಳ್ಯದಲ್ಲಿ 6 ವರ್ಷಗಳಿಂದ ಸುಳ್ಯದ ಶಾಸಕರಾಗಿರುವ ಹಿರಿಯ ಶಾಸಕರೂ ಆದ ಅಂಗಾರ ಅವರಿಗೆ ಸಚಿವ ಸ್ಥಾನ ಸಿಗದೇ ಇರುವ ಬಗ್ಗೆ ಸುಳ್ಯ ಕ್ಷೇತ್ರದಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಈಗ ನಳಿನ್ ಕುಮಾರ್ ಕಟೀಲು ಅವರ ನಡೆಯ ಬಗ್ಗೆ ಕುತೂಹಲ ಮೂಡಿಸಿದೆ. ಒತ್ತಡ,  ಒತ್ತಾಯಗಳಿಗೆ ಮಣಿಯುತ್ತಾರಾ, ಹಿರಿತನಕ್ಕೆ ಸಚಿವ ಸ್ಥಾನ ಸಿಗುವಂತೆ ಮಾಡುತ್ತಾರಾ ? ಪಕ್ಷ ಸಂಘಟನೆಯ ಕ್ಷೇತ್ರಕ್ಕೆ ಯಾವ ರೀತಿಯ ಆದ್ಯತೆ ನೀಡುತ್ತಾರೆ ಎಂಬ ಕುತೂಹಲ ಇದೆ. ಸುಳ್ಯ ಕ್ಷೇತ್ರಕ್ಕೆ ಮಾನ್ಯತೆ ನೀಡಿದರೆ ರಾಜ್ಯದ ಉಳಿದ ಕಡೆಯ ಹಿರಿಯ ಶಾಸಕರ ಪಟ್ಟೂ ಹೆಚ್ಚಾದರೆ ಇತ್ಯಾದಿ ಪ್ರಶ್ನೆಗಳು ರಾಜ್ಯಾಧ್ಯಕ್ಷರ ಮುಂದಿದೆ. ಸಚಿವ ಸ್ಥಾನ ಸಿಗದೇ ಇದ್ದರೆ ನಳಿನ್ ಕುಮಾರ್ ಜೊತೆ ನಿಕಟವಾಗಿರುವ, ಆತ್ಮೀಯವಾಗಿರುವ ಮಂಡಲದ ಬಿಜೆಪಿಯ ಪ್ರಮುಖ ನಾಯಕರ ನಡೆ ಏನು ಇತ್ಯಾದಿ ಪ್ರಶ್ನೆಗಳು ಸಹಜವಾಗಿಯೇ ಕುತೂಹಲ ಮೂಡಿಸಿದೆ.

Advertisement

ರಾಜ್ಯದಲ್ಲೂ ಬಿಜೆಪಿ ಒಳಗೆ ಎಲ್ಲವೂ ಸರಿ ಇಲ್ಲ ಎಂಬುದು ಈಗಾಗಲೇ ಬಹಿರಂಗವಾಗಿದೆ. ಅಸಮಾಧಾನದಿಂದ ಪಕ್ಷದೊಳಗಿನ ಕಚ್ಚಾಟದಿಂದ ಈ ಬಾರಿ ಬಿಜೆಪಿ ಸರಕಾರ ಬಿದ್ದರೆ ಚುನಾವಣೆಯ ನಂತರ ಕಾಂಗ್ರೆಸ್ ಪಕ್ಷಕ್ಕೆ ಸರಕಾರ ರಚನೆಗೇ ಹೆಚ್ಚಿನ ಅವಕಾಶ ಸಿಗಲಿದೆ ಅಥವಾ ನೂತನ ಸಾಧ್ಯತೆಗಳತ್ತ ಮತದಾರರು ಯೋಚಿಸುವ ಕಾಲ ಬರಬಹುದು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ. ಹೀಗಾಗಿ ಈಗಿನ ಬಿಜೆಪಿ ರಾಜ್ಯಾಧ್ಯಕ್ಷರ ನಡೆಗಳು ಬಿಜೆಪಿಯ ಭವಿಷ್ಯದ ಹೆಜ್ಜೆಯನ್ನು ಗಟ್ಟಿ ಮಾಡಲಿದೆ ಎಂಬುದು ರಾಜಕೀಯ ಲೆಕ್ಕಾಚಾರಗಳು. ಹ್ಯಾಟ್ರಿಕ್ ಗೆಲುವು ಸಾಧಿಸಿದ, ಕೇರಳದಲ್ಲಿ ಬಿಜೆಪಿ ಸಂಘಟನೆ ಮಾಡಿರುವ, ಬಳ್ಪ ಆದರ್ಶ ಗ್ರಾಮದ ರುವಾರಿ, ರಾಜ್ಯದ ನಂಬರ್.1 ಸಂಸದ ನಳಿನ್ ಕುಮಾರ್ ಅವರ ಸಾರಥ್ಯದ ಬಿಜೆಪಿಯ ರಾಜ್ಯದಲ್ಲೂ ಸಂಘಟನಾತ್ಮಕವಾಗಿ ಬೆಳೆಯುತ್ತಾ ಎಂಬುದು ಈಗಿನ ಪ್ರಶ್ನೆ.

 

Advertisement
Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ದಿಢೀರಾಗಿ ಬೆಳೆಯುವುದು , ಫಸಲು ನೀಡುವುದು ಅವಸರವೇ ಅಪಘಾತಕ್ಕೆ ಕಾರಣ | ಬೇಗ ಫಸಲು ಬಂದ ಸಸ್ಯ ಬೇಗನೇ ಸಾಯುತ್ತದೆ |
April 28, 2024
9:26 PM
by: ಪ್ರಬಂಧ ಅಂಬುತೀರ್ಥ
ಮಾವು ಮಾಂತ್ರಿಕ ಹಾಗೂ ಸುಬ್ರಾಯ ಭಟ್ಟರ 200ಕ್ಕೂ ಹೆಚ್ಚು ನಾಡು ಮಾವು ಹಾಗೂ ಹಲಸು ತಳಿ ಸಂರಕ್ಷಣೆ
April 28, 2024
9:24 PM
by: The Rural Mirror ಸುದ್ದಿಜಾಲ
ಭಾರತದಲ್ಲಿ ಏರಿದ ತಾಪಮಾನ | ಅತ್ತ ತಾಂಜೇನಿಯಾದಲ್ಲಿ ಭಾರೀ ಮಳೆ, ಪ್ರವಾಹ | 155 ಮಂದಿ ಸಾವು |
April 28, 2024
4:55 PM
by: The Rural Mirror ಸುದ್ದಿಜಾಲ
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಮುಂದಿನ ವಾರ ಕಾಡಲಿದೆ ರಣ ಬಿಸಿಲು | ದೂರ ಸಾಗಿದ ಮಳೆ | ಬಿಸಿ ಗಾಳಿಯ ಮುನ್ಸೂಚನೆ |
April 28, 2024
4:40 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror