ಒಬ್ಬಂಟಿ ವೃದ್ಧನಿಗೆ ಆಶ್ರಮ ಭಾಗ್ಯ ಕಲ್ಪಿಸಿದ ಸ್ಥಳೀಯರು

June 24, 2019
12:00 PM

ಸುಳ್ಯ:  ಮಗ ಹಾಗೂ ಪತ್ನಿ ವೃದ್ಧ ಪತಿಯನ್ನು ಬಿಟ್ಟು ಹಲವು ತಿಂಗಳ ಹಿಂದೆ ನಾಪತ್ತೆಯಾಗಿದ್ದು ಒಬ್ಬಂಟಿ ವೃದ್ಧನಿಗೆ ಸ್ಥಳೀಯರು ಮಾನವೀಯತೆ ಮೆರೆದು ಅನಾಥಾಶ್ರಮದ ಭಾಗ್ಯವನ್ನು ಕಲ್ಪಿಸಿದ್ದಾರೆ.
ಸುಳ್ಯದ ಶಾಂತಿನಗರದಲ್ಲಿ ವಾಸವಿದ್ದ ಗೋಪಾಲಕೃಷ್ಣ ಆಶ್ರಮ ಸೇರಿದ ವ್ಯಕ್ತಿಯಾಗಿದ್ದಾರೆ. ಗೋಪಾಲಕೃಷ್ಣ ಅವರ ಪತ್ನಿ ಹಾಗೂ ಮಗ ಕಳೆದ ಕೆಲವು ಸಮಯಗಳಿಂದ ನಾಪತ್ತೆಯಾಗಿದ್ದರು. ಗೋಪಾಲಕೃಷ್ಣ ಅವರ ಪುತ್ರನಿಗೆ ವ್ಯವಹಾರದ ಸಂಬಂಧ ಸಾಲವಾಗಿತ್ತು.  ಹೀಗಾಗಿ ಯಾರಿಗೂ ಹೇಳದೇ ವರ್ಷಗಳ ಹಿಂದೆ ಪರಾರಿಯಾಗಿದ್ದರು.  ಗೋಪಾಲಕೃಷ್ಣ ಅವರು ಕ್ಯಾಂಪ್ಕೋದ ನಿವೃತ್ತ ಉದ್ಯೋಗಿಯಾಗಿ ದ್ದು ಅವರ ಪತ್ನಿ  ಶಿಕ್ಷಕಿಯಾಗಿದ್ದರು. ಮಗನಿಗೆ ಸಾಲವನ್ನು ನೀಡಿದ ಸಾಲಗಾರರು ನಿವೃತ್ತ ದಂಪತಿಗಳನ್ನು ಕಾಡತೊಡಗಿ ದ್ದರು. ಈ ನಡುವೆ ಗೋಪಾಲಕೃಷ್ಣರಿಗೆ ಅಸೌಖ್ಯ ಕಾಡಿದ ಪರಿಣಾಮ ಪತಿ ಹಾಗೂ ಮನೆಯ ಜವಾಬ್ದಾರಿ ಪತ್ನಿಯ ಮೇಲೆ ಬಿದ್ದಿತ್ತು. ಸಾಲಗಾರರು ಪ್ರತಿನಿತ್ಯ ಕಾಡತೊಡಗಿದರು. ಸಾಲ ತೀರಿಸಲು ಇನ್ನಿಲ್ಲದ ಪ್ರಯತ್ನ ಮಾಡಿದರು. ಹೀಗಾಗಿ ಬಾಧೆ ತಾಳಲಾರದೇ ಗೋಪಾಲಕೃಷ್ಣರನ್ನು ಅವರ ತಮ್ಮನ ಮನೆಯಲ್ಲಿ ಸೇರಿಸಿ 2 ದಿನ ಬಿಟ್ಟು ಬರುತ್ತೇನೆ ಎಂದು ಹೇಳಿ ಹೋದ ಅವರ ಪತ್ನಿ   ಇದುವರೆಗೂ ಮರಳಿ ಬಂದಿಲ್ಲ. ಕೆಲ ದಿನ ತಮ್ಮನ ಮನೆಯಲ್ಲೇ ಕಳೆದ ಗೋಪಾಲಕೃಷ್ಣ  ನಂತರ  ಶಾಂತಿನಗರದ ಮನೆಗೆ ಬಂದಿದ್ದಾರೆ. ತೀವ್ರ ಕೃಷಕಾಯರಾಗಿದ್ದ ಅವರಿಗೆ ಊಟೋಪಚಾರಗಳನ್ನು ಪಕ್ಕದ ಮನೆಯವರು ನೀಡುತ್ತಿದ್ದರು. ಆ ಬಳಿಕ ಮಾಧ್ಯಮಗಳಲ್ಲಿ ವೃದ್ಧನ ಕಥೆಯ ಕುರಿತು ವರದಿಯಾದ ಬಳಿಕ ಅವರ ಸಹೋದ್ಯೋಗಿಯೊಬ್ಬರು ಪರ್ಯಾ ಯ ವ್ಯವಸ್ಥೆ ಕಲ್ಪಿಸಲು ಮುಂದಾದರು. ಮಡಿಕೇರಿಯ ಶುಂಠಿಕೊಪ್ಪದ ಅನಾಥಾಶ್ರಮವೊಂದಕ್ಕೆ ಸ್ಥಳೀಯರ ಸಹಾಯದಿಂದ ಸೇರಿಸಿದ್ದಾರೆ.

Advertisement
Advertisement
Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಸುಳ್ಯ ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಸನದುದಾನ ಮಹಾ ಸಮ್ಮೇಳನ ಹಾಗೂ ನುಸ್ರತ್ 42ನೇ ವಾರ್ಷಿಕ ಸಮಾರಂಭ
January 28, 2026
3:48 PM
by: ಮಿರರ್‌ ಡೆಸ್ಕ್
ಸುಳ್ಯದಲ್ಲಿ 265 ಅರ್ಹ ರೈತರಿಗೆ ಕೃಷಿ ಸವಲತ್ತುಗಳ ವಿತರಣೆ
January 20, 2026
6:24 AM
by: ದ ರೂರಲ್ ಮಿರರ್.ಕಾಂ
ಜನವರಿ 23 ರಿಂದ ಕದ್ರಿ ಫಲಪುಷ್ಪ ಪ್ರದರ್ಶನ
January 3, 2026
9:25 PM
by: ದ ರೂರಲ್ ಮಿರರ್.ಕಾಂ
ಜ.4 : ಮುಕ್ಕೂರಿನಲ್ಲಿ ಕಾಳುಮೆಣಸು, ಕಾಫಿ ಗಿಡ ಕೃಷಿ ಮತ್ತು ನಿರ್ವಹಣೆ ಹಾಗೂ ಅಡಿಕೆ ಎಲೆ ಚುಕ್ಕಿ ರೋಗ ನಿಯಂತ್ರಣ , ಮಣ್ಣಿನ ಪೋಷಕಾಂಶಗಳ ಬಗ್ಗೆ ಮಾಹಿತಿ ಕಾರ್ಯಾಗಾರ
December 28, 2025
11:26 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror