ಓಣಂ ಸೌಹಾರ್ದತೆಯ ಸಂಕೇತ

September 10, 2019
3:00 PM

ಪುತ್ತೂರು: ಕೇರಳ ರಾಜ್ಯದ ಹಬ್ಬವಾಗಿರುವ ಓಣಂ ಅನ್ನು ದೇಶದೆಲ್ಲೆಡೆ ಎಲ್ಲಾ ಧರ್ಮದ ಜನರು ಒಗ್ಗೂಡಿ ಆಚರಿಸುತ್ತಾರೆ. ಓಣಂ ಎನ್ನುವುದು ಸೌಹಾರ್ದತೆಯ ಸಂಕೇತವಾಗಿದೆ. ಪುರಾಣಗಳು ಕೇವಲ ಪುರಾಣವಾಗಿಯೇ ಉಳಿಯದೆ ಅಲ್ಲಿನ ಒಳ್ಳೆಯ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಖ್ಯವಾಗಿದೆ ಎಂದು ಪುತ್ತೂರು ನರೇಂದ್ರ ಪದವಿಪೂರ್ವ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕಿ ಸಿಂಧು ಹೇಳಿದರು.

ಅವರು ವಿವೇಕಾನಂದ ಕಾಲೇಜಿನಲ್ಲಿ ‘ಆರಾವಮ್ 2019’ ಎಂಬ ಓಣಂ ಆಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.ಮಹಾಬಲಿಯ ಜೀವನಾಂಶಗಳನ್ನು ಬದುಕಿನಲ್ಲಿ ಅಳವಡಿಸುವ ಮೂಲಕ ಉತ್ತಮ ನಾಗರಿಕನಾಗಿ ರಾಷ್ಟ್ರಕ್ಕೆ ಮಾದರಿಯಾಗಬಹುದ. ಜೀವನದ ಯಾವುದೇ ಘಟ್ಟದಲ್ಲಿ ಸಮಸ್ಯೆಗಳು ಬರಬಹುದು. ಆದರೆ ಅದನ್ನು ಬದಿಗೊತ್ತಿನಿಂತಾಗ ಸಂತೋಷ ಮತ್ತು ನೆಮ್ಮದಿಯ ಜೀವನ ನಮ್ಮದಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ಕಾಲೇಜಿನ ಯಶಸ್ ಘಟಕದ ಕಾರ್ಯದರ್ಶಿ ಮುರಳಿಕೃಷ್ಣ ಚಳ್ಳಂಗಾರು  ಮಾತನಾಡಿ, ಕೇರಳ ರಾಜ್ಯ ದೇವರನಾಡು ಎಂಬ ಪ್ರಸಿದ್ಧಿ ಪಡೆದಿದೆ. ಮಾತ್ರವಲ್ಲದೇ ಕೇರಳವು ಸಾಂಸ್ಕೃತಿಕ ರಾಯಬಾರಿ ಎಂಬ ಘನತೆಯನ್ನೂ ಹೊಂದಿದೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ನಮ್ಮ ದೇಶ ಒಂದುದಾರದಲ್ಲಿ ಪೋಣಿಸಿದೆ. ಆದುದರಿಂದ ಓಣಂ ಎಂಬುವುದು ಕೇವಲ ಕೇರಳದಲ್ಲಿ ಮಾತ್ರ ಆಚರಿಸುವ ಹಬ್ಬವಲ್ಲ. ದೇಶದ ಹಲವೆಡೆಗಳಲ್ಲಿ ಆಚರಿಸುತ್ತಾರೆ. ಆದರೆ ಆಚರಿಸುವ ವಿಧಾನ ಬೇರೆಯಾಗಿದೆ. ಈ ಎಲ್ಲಾ ಹಬ್ಬಗಳು ನೀಡುವ ಸಂದೇಶ ಒಂದೇ ಎಂದು ಹೇಳಿದರು.

ವಿವೇಕಾನಂದ ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸ್ವಸ್ತಿಕ್ ಮತ್ತು ಕಾರ್ಯದರ್ಶಿ ನಿಶಾಂತ್ ಉಪಸ್ಥಿತರಿದ್ದರು. ಶಿಲ್ಪ ಮತ್ತು ತಂಡ ಪ್ರಾರ್ಥಿಸಿದರು. ನಿಧಿ ಅತ್ರಿ ಸ್ವಾಗತಿಸಿ, ಅನ್ವಯ್‍ಕೃಷ್ಣ ವಂದಿಸಿದರು. ಅಭಿಲಾಷ್ ಶರ್ಮ ಕಾರ್ಯಕ್ರಮ ನಿರೂಪಿಸಿದರು.
ಓಣಂ ಕುರಿತು ವಿದ್ಯಾರ್ಥಿಗಳು ವಿಶಿಷ್ಟ ಸಾಂಸ್ಕøತಿಕ ಕಾರ್ಯಕ್ರಮ ಮತ್ತು ಸ್ಪರ್ಧೆಗಳನ್ನು ಏರ್ಪಡಿಸಿದ್ದರು. ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು. ವಿಶೇಷ ಪೂಕಳಂ ಬಿಡಿಸಿ ಸಂಭ್ರಮಿಸಿದರು.

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಶರಾವತಿ ಯೋಜನೆ | ಜೀವವೈವಿಧ್ಯಕ್ಕೆ ಆಪತ್ತು- ಮನುಕುಲಕ್ಕೆ ವಿಪತ್ತು
September 23, 2025
11:05 AM
by: ದ ರೂರಲ್ ಮಿರರ್.ಕಾಂ
ಮೂಲ ಮರೆತವರು ಅಸ್ತಿತ್ವ ಕಳೆದಕೊಳ್ಳುತ್ತಾರೆ : ರಾಘವೇಶ್ವರ ಶ್ರೀ
September 23, 2025
10:44 AM
by: The Rural Mirror ಸುದ್ದಿಜಾಲ
ಕಲಬುರ್ಗಿಯಲ್ಲಿ ಧಾರಾಕಾರ ಮಳೆ | ವಿವಿದೆಡೆ ಜನಜೀವನ ಅಸ್ತವ್ಯಸ್ಥ | ಮತ್ತೆ ಮಳೆಯಬ್ಬರ
September 23, 2025
7:46 AM
by: The Rural Mirror ಸುದ್ದಿಜಾಲ
ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳು | ಸೀಮಂತ್ ಕುಮಾರ್ ಸಿಂಗ್ ನೇತೃತ್ವದಲ್ಲಿ ನಗರ ಪರ್ಯಟನೆ
September 23, 2025
7:36 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group