ಕಡಬ: ಇಲ್ಲಿನ ಹನುಮಾನ್ ನಗರದಲ್ಲಿರುವ ಸರಸ್ವತೀ ವಿದ್ಯಾಲಯ ಪ್ರೌಢಶಾಲೆ ಮತ್ತು ಸರಸ್ವತೀ ಪದವಿ ಪೂರ್ವ ವಿದ್ಯಾಲಯದ ವತಿಯಿಂದ ತರಗತಿ ಆರಂಭದ ಪ್ರಯುಕ್ತ ಗಣಪತಿ ಹೋಮ ಮತ್ತು ದೈವಗಳಿಗೆ ತಂಬಿಲ ಸೇವೆಯು ಜರಗಿತು.
ಪುರೋಹಿತ ಪ್ರಸಾದ್ ಬೈಪಡಿತ್ತಾಯ ಅವರು ಪೂಜಾ ವಿಧಿವಿಧಾನಗಳ ನೇತೃತ್ವ ವಹಿಸಿದ್ದರು. ಸರಸ್ವತೀ ವಿದ್ಯಾಲಯ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ರವಿರಾಜ್ ಶೆಟ್ಟಿ ಕಡಬ, ಸಂಚಾಲಕ ವೆಂಕಟ್ರಮಣ ರಾವ್ ಮಂಕುಡೆ, ಕೋಶಾಧಿಕಾರಿ ಲಿಂಗಪ್ಪ ಜೆ., ಆಡಳಿತ ಮಂಡಳಿ ಸದಸ್ಯರಾದ ಸೀತಾರಾಮ ಎ., ಪದವಿ ಪೂರ್ವ ವಿದ್ಯಾಲಯದ ಪ್ರಾಂಶುಪಾಲ ಮಹೇಶ್ ನಿಟಿಲಾಪುರ, ಪ್ರೌಢಶಾಲಾ ಮುಖ್ಯಶಿಕ್ಷಕಿ ಶೈಲಶ್ರೀ, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ಮಾಧವ ಕೋಲ್ಪೆ ಹಾಗೂ ಬೋಧಕ ವೃಂದದವರು ಉಪಸ್ಥಿತರಿದ್ದರು.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel