ಸುಳ್ಯ: ಕನಕಮಜಲು ಗ್ರಾಮ ಪಂಚಾಯತ್, ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಹಾಗು ಯುವಕ ಮಂಡಲ ಕನಕಮಜಲು ಇದರ ಆಶ್ರಯದಲ್ಲಿ ಕೆಸರು ಗದ್ದೆ ಕ್ರೀಡಾಕೂಟ ನಡೆಯಿತು. ನೋಟರಿ ನ್ಯಾಯವಾದಿ ಮಹಮ್ಮದ್ ಪವಾಜ್ ಉದ್ಘಾಟಿಸಿದರು. ಕನಕಮಜಲು ಗ್ರಾ. ಪಂ. ಅಧ್ಯಕ್ಷೆ ಜಯಲತಾ ಗಬಲಡ್ಕ ಅಧ್ಯಕ್ಷತೆ ವಹಿಸಿದ್ದರು. ತಾ. ಪಂ. ಮಾಜಿ ಅಧ್ಯಕ್ಷೆ ಗುಣವತಿ ಕೊಲ್ಲಂತಡ್ಕ ಮುಖ್ಯ ಅತಿಥಿಯಾಗಿದ್ದರು.
Advertisement
ಪುರುಷರಿಗೆ ಮತ್ತು ಮಹಿಳೆಯರಿಗೆ ಹಗ್ಗಜಗ್ಗಾಟ ಮತ್ತು ಪುರುಷರಿಗೆ ವಾಲಿಬಾಲ್ ಹಾಗು ಇತರ ಸ್ಪರ್ಧೆಗಳು ನಡೆಯಿತು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಗ್ರಾಂ.ಪಂ. ಉಪಾಧ್ಯಕ್ಷ ಶ್ರೀಧರ ಕುತ್ಯಾಳ ವಹಿಸಿದ್ದರು. ನಿವೃತ್ತ ಆರಕ್ಷಕ ಅಧಿಕಾರಿ ಕೃಷ್ಣಪ್ಪ ಗೌಡ ಕನ್ನಡ್ಕ ಬಹುಮಾನ ವಿತರಿಸಿದರು. ಯುವಕ ಮಂಡಲದ ಅಧ್ಯಕ್ಷ ಜಯಪ್ರಸಾದ್ ಕಾರಿಂಜ, ಕಾರ್ಯದರ್ಶಿ ಬಾಲಚಂದ್ರ ನೆಡಿಲು , ಕ್ರೀಡಾ ಕಾರ್ಯದರ್ಶಿ ಅಶ್ವಿತ್ ಮಳಿ, ಪ್ರಾ. ಕೃ.ಪ.ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಲೋಹಿತ್ ಕುಮಾರ್ ಕೆ, ಧನುಷ್ ಕಜೆಗದ್ದೆ ಉಪಸ್ಥಿತರಿದ್ದರು.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement