ಕನಕಮಜಲು: ನೆಹರು ಯುವಕೇಂದ್ರ ಮಂಗಳೂರು, ಮತ್ತು ಯುವಜನ ವಿಕಾಸ ಕೇಂದ್ರ ಯುವಕ ಮಂಡಲ(ರಿ) ಕನಕಮಜಲು ಮತ್ತು ಅಂಗನವಾಡಿ ಕೇಂದ್ರ ಕನಕಮಜಲು ಇದರ ಆಶ್ರಯದಲ್ಲಿ ಮಕ್ಕಳ ದಿನಾಚರಣೆ ಹಾಗು ಯುವಕೇಂದ್ರ ಸ್ಥಾಪನಾ ದಿನಾಚರಣೆಯನ್ನು ನ. 14 ರಂದು ಕನಕಮಜಲಿನ ಅಂಗನವಾಡಿ ಕೇಂದ್ರದಲ್ಲಿ ನಡೆಯಸಲಾಯಿತು.
ಇದರ ಪ್ರಯುಕ್ತ ಪುಟಾಣಿ ಮಕ್ಕಳಿಗೆ ಆಟೋಟ ಸ್ಪರ್ಧೆ ನಡೆಸಿ ಬಹುಮಾನವನ್ನು ವಿತರಿಸಿ, ಸಿಹಿ ತಿಂಡಿಯನ್ನು ವಿತರಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಶ್ರೀಧರ್ ಕುತ್ಯಾಳ, ಯುವಕ ಮಂಡಲದ ಕಾರ್ಯದರ್ಶಿ ಬಾಲಚಂದ್ರ ನೆಡಿಲು, ಬಾಲವಿಕಾಸ ಸಮಿತಿ ಅಧ್ಯಕ್ಷೆ ಧರ್ಮವತಿ ಕುತ್ಯಾಳ, ಅಂಗನವಾಡಿ ಕಾರ್ಯಕರ್ತೆ ಹೇಮಾವತಿ ಕಾಪಿಲ ಹಾಗೆ ಯುವಕ ಮಂಡಲದ ಸದಸ್ಯರು ಮತ್ತು ಪುಟಾಣಿ ಮಕ್ಕಳು ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆ ಹೇಮಾವತಿ ಕಾಪಿಲ ಸ್ವಾಗತಿಸಿ ವಂದಿಸಿದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel