ಗುತ್ತಿಗಾರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗುತ್ತಿಗಾರು ವಲಯದ ಕಮಿಲದಲ್ಲಿ ಶ್ರೀ ದೇವಿಕಾ ಸ್ವಸಹಾಯ ಸಂಘ ಭಾನುವಾರ ಉದ್ಘಾಟನೆಗೊಂಡಿತು. ಒಕ್ಕೂಟದ ಅಧ್ಯಕ್ಷ ಕೇಶವ ಗೌಡ ಕಾಂತಿಲ ನೂತನ ಸಂಘವನ್ನು ಉದ್ಘಾಟಿಸಿದರು.
ಈ ಸಂದರ್ಭ ಗುತ್ತಿಗಾರು ವಲಯ ಮೇಲ್ವಿಚಾರಕ ಸುಧೀರ್ ನೆಕ್ರಾಜೆ ಸಂಘದ ವಿವರಗಳನ್ನು ತಿಳಿಸಿದರು. ಸಂಘದ ಸದಸ್ಯರುಗಳಾದ ಪುಷ್ಪಾವತಿ ಕೊಂದಾಳ, ದೀಪ್ತಿ ಕಮಿಲ, ಧರ್ಮಾವತಿ ಕಮಿಲ, ಶಿಲ್ಪಾ ಕಾಯನಕೋಡಿ, ದೇವಕಿ ಮುಳುಬಾಗಿಲು, ಆಶಾಲತ ಮುಳುಬಾಗಿಲು, ಲಿಖಿತಾ ಕಮಿಲ ಉಪಸ್ಥಿತರಿದ್ದರು.
ಲೋಕೇಶ್ ಕಮಿಲ ಸ್ವಾಗತಿಸಿ ವಂದಿಸಿದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel